ಸರ್ಕಾರಿ ನೌಕರರ ಚುನಾವಣೆ: ಶಿಕ್ಷಕರ ಸಮಗ್ರ ಅಭಿವೃದ್ಧಿಗೆ ನಂದಿನಿ ಸಂಕಲ್ಪ
ಸರ್ಕಾರಿ ನೌಕರರ ಚುನಾವಣೆ: ಶಿಕ್ಷಕರ ಸಮಗ್ರ ಅಭಿವೃದ್ಧಿಗೆ ನಂದಿನಿ ಸಂಕಲ್ಪ
ಕಲಬುರಗಿ : ಶೈಕ್ಷಣಿಕ ರಂಗದಲ್ಲಿ ಕ್ರಿಯಾತ್ಮಕ ಮತ್ತು ಧನಾತ್ಮಕ ಚಿಂತನೆಯ ಹೊಸ ಕಾಂತ್ರಿಯ ಅನಿವಾರ್ಯತೆ ಎದ್ದು ಕಾಣುತ್ತದೆ. ಕಲಬುರಗಿ ಜಿಲ್ಲೆಯ ಸಮಸ್ತ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದರೊಂದಿಗೆ ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಲಾಗಿದೆ ಎಂದು ಕಲಬುರಗಿ ತಾಲುಕಾ ಸರಕಾರಿ ನೌಕರರ ಚುನಾವಣೆಯ ಕಣದಲ್ಲಿರುವ ಶಿಕ್ಷಕರಾದ ದೇವೆಂದ್ರಪ್ಪ ಗಣಮುಖಿ ಹಾಗು ನಂದಿನಿ.ಎಸ್ ಸನಬಾಳ ಅವರು ಜಂಟಿಯಾಗಿ ತಿಳಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಅನೇಕ ಶಿಕ್ಷಕರು ಶೈಕ್ಷಣಿಕ ವಲಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಮತ್ತು ಶಿಕ್ಷಕರ ಸಂಘದ ನಡುವೆ ಸಮನ್ವಯದ ಸೇತುವೆಯನ್ನು ರಚಿಸಿ. ಸಮಚಿತ್ತದ ಸಹಾಯದಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ನವೆಂಬರ-16 ರಂದು ಸರಕಾರಿ ನೌಕರರ ಸಂಘದ ಚುನಾವಣೆ ನಡೆಯಲಿದ್ದು, ಕಲಬುರಗಿ ತಾಲೂಕಾ ಶಿಕ್ಷಕರ ವಿಭಾಗದಿಂದ ಬಿಟ್ಟು 12 ಜನ ಶಿಕ್ಷಕರು ಸ್ಪರ್ದೆ ಮಾಡುತ್ತಿದ್ದಾರೆ. ಅದರಲ್ಲಿ ಒಟ್ಟು 4 ಜನ ಶಿಕ್ಷಕರ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕಲಬುರಗಿ ತಾಲೂಕಿನ ಸುಮಾರು 95% ಜನ ಶಿಕ್ಷಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆಯ ಪ್ರಕ್ರಿಯೆಯಲ್ಲಿ ತಾವು ಅವಿರೋಧ ಆಯ್ಕೆಗೆ ತ್ಯಾಗ ಮಾಡಲು ಸಿದ್ದರಿದ್ದೆವೆಂದು ಹೇಳಿದ್ದೆವು. ಆದರೆ ಸ್ಪರ್ದೆ ಬಯಸಿದ ಯಾವೊಬ್ಬ ಶಿಕ್ಷಕರು ಸ್ಪಂದನೆ ಮಾಡದೇ ಇರುವುದು. ವಿಷಾದನೀಯ ಎಂದರು
ಶಿಕ್ಷಕ ದೇವಿಂದ್ರಪ್ಪ ಗಣಮುಖಿ , ನಂದಿನಿ ಸನಬಾಳ ಈ ಬಾರಿಯ ಚುನಾವಣೆಯಲ್ಲಿ ನಮ್ಮಿಬ್ಬರನ್ನು ಗೆಲ್ಲಿಸಿದರೆ , ನಮ್ಮ ಪ್ರನಾಳಿಕೆ ಪ್ರಕಾರ ಶಿಕ್ಷಕರಿಗಾಗಿ ಗುರುಭವನ, ನಿರ್ಮಾಣವನ್ನು ಪೂರ್ಣಗೊಳಿಸಲಾಗುವದು. ude Bes ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಯಥಾವತ್ತಾಗಿ ಹಳೆ ಪಿಂಚಣಿ ಯೋಜನೆಯನ್ನು ನಿರಂತರವಾಗಿ ಜಾರಿಗೊಳಿಸಲು ಆಡಳಿತ ಸರ್ಕಾರಕ್ಕೆ ಒತ್ತಾಯಿಸಲಾಗುವದು. ಒಟ್ಟಾರೆ ಸರಕಾರಿ ನೌಕರರಿಗೆ ಸರಕಾರದಿಂದ ಸಿಗಬೇಕಾಗಿರುವ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಮತ್ತು ಕಾನೂನು ಪ್ರಕಾರ ಒದಗಿಸಸಿಕೊಡಲು ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.