ಶರಣತ್ವಕ್ಕಾಗಿ ಜೀವನವನ್ನೇ ತೇಯ್ದ ಶರಣೆ:ಜಗದೇವಿ ದುಬುಲಗುಂಡಿ

ಶರಣತ್ವಕ್ಕಾಗಿ ಜೀವನವನ್ನೇ ತೇಯ್ದ ಶರಣೆ:ಜಗದೇವಿ ದುಬುಲಗುಂಡಿ
ಬೀದರ ಜಿಲ್ಲೆಯ ಹಿರಿಯ ತಲೆಮಾರಿನ ಮಹಿಳಾ ಸಾಹಿತಿಗ ಳಲ್ಲಿ,ಸರಳತೆ,ಸೌಜನ್ಯ, ವಿನಯಶೀಲತೆ ಮೂಲಕ ಹೆಸರಾ ದವರು ಶ್ರೀಮತಿ ಜಗದೇವಿ ದುಬಲಗುಂಡಿ ಪ್ರಮುಖರು.
ಬೀದರ ಜಿಲ್ಲೆಯ ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದ ಮೆಟಗಿ ಮನೆತನದ ತಂದೆ ಗುರುಪಾದಪ್ಪ ತಾಯಿ ಭಾಗಿರತಿಬಾಯಿ ಮೆಟಗೆ ದಂಪತಿಗಳ ಮಗಳಾಗಿ ೦೯-೦೬.-೧೯೪೯ ರಲ್ಲಿ ಜನಿಸಿದರು.
ಮನೆತನದ ಶರಣ ಸಂಸ್ಕಾರ ಕುಟುಂಬದ ದಂಪತಿಗಳು.ಅವರ ಪ್ರೇರಣೆ- ಪ್ರಭಾವಗಳಿಂದ ಮಗಳು ಆ ಒಳ್ಳೆಯ ಸಂಸ್ಕಾರ, ಶರಣರ ತತ್ವವನ್ನು ಕಂಡು ಅದರಂತೆ ಬೆಳೆಯಲು ಸಹಕರಿಸಿದರು.ಇವರು ಸಹ ಅವರ ಸಾಲಿನಲ್ಲಿ ಬೆಳೆದರು.
ಓದಿದ್ದು ಕೇವಲ ಹತ್ತನೆಯ ತರಗತಿ ಮಾತ್ರ.ಆದರೆ ಸ್ವ ಅನುಭವವೇ ಅವರಿಗೆ ಲೋಕ ಜ್ಞಾನ ಹೊಂದಿದರು.ಜೀವ ನದ ಹಲವು ಏರಿಳಿತ,ಸುಖ-ದುಃಖಗಳು ಅವರಿಗೆ ಜೀವನ ರೂಪಿಸುವಲ್ಲಿ ಸಫಲತೆ ಹೊಂದಿದವು.
ಹಿಂದಣ ಸುಖ,ಮುಂದಣ ದುಃಖಂಗಳು
ಮುಂದಣ ಸುಖ,ಹಿಂದಣ ದುಃಖಂಗಳು
ಇವ ತಾ ಸಂಧಿಸಿ ಅನುಭವಿಸಿದಲ್ಲಿ ಸಂಚಿತ ಪ್ರಾರಬ್ಧ ಅಗಾಮಿಗಳೆಂದು
ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೇ
ಹಿಂದೆ ಅಳಿದವರ ಕೇಳಿ,ಮುಂದೆ ಸಾವವರ ಕಂಡು
ಅಂದಂದಿಗೆ ನೂರು ತುಂಬಿತ್ತೆಂದು ಸಂದೇಹ ನಿವೃತ್ತಿ ಯಾಗಿರಬೇಕು
ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮಲಿಂಗವನರಿವುದಕ್ಕೆ
ಎಂಬ ಬಾಹೂರ ಬೊಮ್ಮಣ್ಣನ ವಚನದಂತೆ ನಿರಾಕರಿಸಿ ಬಾಳಿದವರು ಜಗದೇವಿ ದುಬಲಗುಂಡಿಯವರು.
ವೃತ್ತಿಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆಯನ್ನು ಸಲ್ಲಿಸುತ್ತಲೇ ತಮ್ಮ ಕರ್ತವ್ಯ, ಹುದ್ದೆ,ಸರಿಯಾ ಗಿ ಬಳಸಿಕೊಂಡರು. ಕಾಯಕವೇ ಕೈಲಾಸವೆಂದು ಬಗೆದು ತಮ್ಮ ವೃತ್ತಿಗೆ ಚ್ಯುತಿ ಬರದ ಹಾಗೆ ನಿರ್ವಹಿಸಿದರು.
ಕಾಯಕದಲ್ಲಿ ನಿರತನಾದರೆ ಗುರುದರುಶನವಾದರೂ ಮರೆಯಬೇಕು
ಲಿಂಗ ಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗೆ ಎಂಬ ಮಹಾದಾಸೆಯಿಂದ ವೃತ್ತಿ ಮಾಡಿದವರು.
ಸಾಹಿತ್ಯ ರಚನೆ: ಸಾಹಿತ್ಯ ರಚನೆಗೆ ಅವರು ಬಾಲ್ಯದಿಂದಲೇ ತೊಡಗಿಕೊಂಡರು.ಅವರ ಮನೆಯಲ್ಲಿ ತಂದೆ-ತಾಯಿಶರಣ ಸಂಸ್ಕೃತಿ ಅಳವಡಿಸಿಕೊಂಡ ಕಾರಣ ಸಹಜ ವಚನದ ಪ್ರಭಾವ ಇವರ ಮೇಲಾಯಿತು.ಅವರಿಗೆ ಕಾಡಿದ್ದು ಅವರ ತಂದೆ.ಕವನ,ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಪರೂ
ಪದ ಅಪ್ಪ ಅವರ ಕೃತಿ ಇತರ ತಂದೆಯವರಿಗೆ ಮಾರ್ಗ- ಪ್ರೇರಣೆ ಒದಗಿಸುತ್ತದೆ.ಅವರ ತಂದೆಯ ನಿಷ್ಠೆ, ಸೇವೆ,ಭಕ್ತಿ, ಶರಣರ ನಿಲುವುಗಳನ್ನು ತುಂಬಾ ಸ್ವಾರಸ್ಯಕರವಾಗಿ ನಿರೂ ಪಿಸಿದ್ದಾರೆ.
ಆಧುನಿಕ ವಚನಗಳನ್ನು ರಚಿಸಿದ್ದಾರೆ.ಇವರ ವಚನಾಂಕಿತ ಸಿದ್ಧರಾಮ ಪ್ರಿಯ ಬಸವನ ಶಿಶು.ಇವರ ಕಾವ್ಯ ನಾಮ ಗುರುಸಿದ್ದಬಸವವಾಗಿದೆ. ವಚನ ಶಿಶು, ವಚನ ಸುಗಂಧ ಎರಡು ವಚನ ಸಂಕಲನ ಹೊರತಂ ದಿದ್ದಾರೆ. ವಚನಗಳಲ್ಲಿ ಭಕ್ತಿಭಾವ ತುಂಬಿಹರಿದಿವೆ. ಸಾಮಾ ಜಿಕ ಚಿಂತನೆ,ಮಹಿಳಾ ಅಭಿವ್ಯಕ್ತಿ,ರಾಜಕೀಯ,ಧಾರ್ಮಿಕತೆ ಭ್ರಷ್ಟಾಚಾರ, ಅನೀತಿ,ಮೌಢ್ಯತೆ,ಸಂಪ್ರದಾಯ, ಬಹುಮು ಖಿ ,ಸಂಸ್ಕೃತಿ, ಅಸಯಾಮಗಳ ವಸ್ತು ವಿಷಯ ಒಳಗೊಂಡಿವೆ.
ಸಂಸ್ಕೃತಿ ಸಿಂಚನ,
ಕಾವ್ಯ ತೋರಣ: ಇದೊಂದು ವಿನೂತನ ಸಂಕಲನ.ಇದುವರೆಗೂ ಅವರ ಗಮನಕ್ಜೆ ಬಂದ ಕಾಡಿದ ಹಲವಾರು ವ್ಯಕ್ತಿ,ಸಾಹಿತಿ,ಕವಿ,ಕಲಾವಿದರು,ಶರಣರು ಮಹಾಪುರುಷರು ಕುರಿತು ಬರೆದಿದ್ದಾರೆ.ವ್ಯಕ್ತಿ ಚಿತ್ರ ಕವನ ಸಂಕಲನ ಇದಾಗಿದೆ.
೧.ಸ್ವಾತಂತ್ರ್ಯ ಹೋರಾಟಗಾರರು
೨.ಪೂಜ್ಯಶ್ರೀ ಗಳು
೩.ಬೀದರ ಜಿಲ್ಲೆಯ ಸಾಹಿತಿ- ಕವಿಗಳು
೪.ನಾಡಿನ ಕವಿ- ಸಾಹಿತಿಗಳು
೫.ಅನುಭಾವಿ- ಕಲಾವಿದರು ಹೀಗೆ ನೂರಾ ಎಂಟು ವ್ಯಕ್ತಿಗಳ ವ್ಯಕ್ತಿತ್ವದ ನಾನಾ ಮುಖಗಳನ್ನು ತಲಸ್ಪರ್ಶಿಯಾಗಿ
ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.ಬೋಸ್,ಹಳಕಟ್ಟಿ, ಲಿಗಾಡೆ,ಮೊದಲಾದವರ ವ್ಯಕ್ತಿತ್ವ ಬಹು ಸುಂದರವಾಗಿ ಮೂಡಿ ಬಂದಿವೆ.
ವಚನ ಸಾಹಿತ್ಯದ ತತ್ವಾನುಭಾವದ ಸ್ಪುರಣ
ತುಂಬಿದೆ ಮನ್ನ ವಚನ ಜ್ಞಾನನದ ಹೂರಣ
ಭಕ್ತರ ಹೃದಯದ ಬಾಗಿಲಿಗೆ ಕಟ್ಡಿದೆಬತೋರಣ
ದಣಿವರಿಯದ ಶರಣ ಬಸವ ಶ್ರೀ ಪ್ರಶಸ್ತಿ ಭಾಜನ
ಬೆಲ್ದಾಳ ಶರಣರ ಕುರಿತ ಬರೆದ ಕವನ ಇದಾಗಿದೆ. ಪೂಜ್ಯರಾದ ಭಾಲ್ಕಿ ಚನ್ನಬಸವ ಪಟ್ಟದ್ದೇವರು, ಬಸವಲಿಂ
ಗ ಪಟ್ಟದ್ದೇವರು,ಹುಲಸೂರು ಶ್ರೀಗಳು,ಹಾರಕೂಡ ಶ್ರೀಗಳು,ಚವಳಿ ಮಠ,ಅಕ್ಕ ಅನ್ನಪೂರ್ಣ,ಸತ್ಯದೇವಿ, ಕಂಬಳಿವಾಲಾ,ದೇಶಾಂಶ ಹುಡುಗಿ,ಧನಾಶ್ರೀ,ಸಿಂಪಿ,ಕೊಂ ಡಾ,ದೇಶಪಾಂಡೆ, ಜಯಶೆಟ್ಟಿ,ಜಯದೇವಿ,ಹಂಶಕವಿ,ವಾ ಲ್ದೊಡ್ಡಿ,ಮೊದಲಾದವರ ಜೀವನ ಸಾಧನೆ ವ್ಯಕ್ತಿತ್ವ ಇಲ್ಲಿ ಕಾವ್ಯ ತೋರಣದ ಮೂಲಕ ಅನನ್ಯತೆಯಿಂದ ದಾಖಲಿಸಿ ದ್ದಾರೆ.
ಜಾನಪದ ಸಂಸ್ಕೃತಿ ಚಿಂತನೆ
ಕಲ್ಯಾಣ ಶರಣರು
೨೫ ಶರಣ-ಶರಣೆಯರ ಆಯ್ದ ವಚನಗಳು, ಶ್ರೀ ಗೋರಕ್ಷಕ ಕಥಾಮೃತ, ನಾಮಾವಳಿಗಳ ಹೂಮಾಲೆ, ಶ್ರೀ ಸಿದ್ಧಲಿಂಗೇಶ್ವರ ಚರಿತ್ರೆ ಮುಂತಾದ ಶರಣ ಕುರಿತು ಸುಮಾರು ೨0ಕ್ಕೂ ಹೆಚ್ಚು ಕೃತಿಗಳನ್ನು ತಮ್ಮ ಅಧ್ಯಯನ ಹಾಗೂ ಅನುಭಾವದ ಮೂಲಕ ಹೊರತಂದಿ ದ್ದಾರೆ,
ಕೇವಲ ಸಾಹಿತ್ಯ ರಚನೆ,ವೃತ್ತಿ,ಮನೆ ಅಷ್ಟಕ್ಕೇ ಸೀಮಿತ ರಾಗದೇ ಸಾಹಿತ್ಯಕ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮದೇ ಆದ ಸಂಘಟನೆಯ ಸೇವೆಯನ್ನು ಮಾಡುತ್ತ ಬಂದವರು.
ಬೀದರ ತಾಲೂಕು ಕನ್ನಡ ಸಂಘದ ಅಧ್ಯಕ್ಷರಾಗಿ, ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಬೀದರ ಜಿಲ್ಲೆಯ ಅಧ್ಯಕ್ಷರಾಗಿ, ವಚನ ಸಾಹಿತ್ಯ ಪರಿಷತ್ತು ಅಧ್ಯ ಕ್ಷರಾಗಿ,ಧರಿನಾಡು ಕನ್ನಡ ಸಂಘ, ಕನ್ನಡಪರ ಸಂಘ ಟನೆ,ನಾಡು,ನುಡಿ,ಭಾಷೆ,ಸಾಹಿತ್ಯ,ಸಂಸ್ಕೃತಿಯ ಅನೇಕ ಸಂಘಟನೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಸಂಘಟನಾ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ.
ಪ್ರಶಸ್ತಿ-ಪುರಸ್ಕಾರ
ಶ್ರೀಮತಿ ಜಗದೇವಿ ತಾಯಿಯವರು ಅಧ್ಯಾತ್ಮಿಕ ಚಿಂತನೆಯನ್ನು ಉಸಿರಾಗಿಸಿಕೊಂಡವರು, ಶರಣರ ಕುರಿತು ಜೀವನ ಚರಿತ್ರೆ ಅಧ್ಯಯನ ಹಾಗು ವಚನಾದ್ಯಯನ, ಸತ್ಸಂಗ ಕವಿಗೋಷ್ಠಿಗಳಲ್ಲಿ ಉಪನ್ಯಾಸಕರಾಗಿ ಹಾಗೂ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇವರ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಕನ್ನಡ ಸಂಘ ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರವರು.ಚುಟುಕು ಬ್ರಹ್ಮ ಪ್ರಶಸ್ತಿ, ಧರ್ಮ ಚುಡಾಮಣಿ ಪ್ರಶಸ್ತಿ ,ಶರಣರತ್ನ ಪ್ರಶಸ್ತಿ
ವಚನ ಸಿರಿ ಪ್ರಶಸ್ತಿಗಳಲ್ಲದೇ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಉದಗಿರಿ,
ಬೀದರ್ ಜಿಲ್ಲಾ ತತ್ವಪದಕಾರರ ಸಮ್ಮೇಳನ
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
ರಾಷ್ಟ್ರಮಟ್ಟದ ಫ. ಗು. ಹಳಕಟ್ಟಿ ಅವರ ವಚನ ಸಾಹಿತ್ಯ ಸಮ್ಮೇಳನ
ಬೀದರ ಜಿಲ್ಲಾ ಎರಡನೆಯ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಸ್ತಾಪೂರ ಯಲ್ಲಾಲಿಂಗ ಮಠದಲ್ಲಿ ಎರಡು ದಿನ ಮಹತ್ವಪೂರ್ಣ ಸಮ್ಮೇಳನ ಜರುಗಿತು ಹಲವು ಸಂಘ ಸಂಸ್ಥೆಗಳ ಗೌರವ-ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇವರು ಬಹು ಬೇಗ ಪತಿಯನ್ನು ಕಳೆದುಕೊಂಡರು.ತಮ್ಮ ಕುಟುಂಬ ಮತ್ತು ಮಕ್ಕಳ ಲಾಲನೆ ಪಾಲನೆ, ಅವರ ಭವಿಷ್ಯ
ನಿರ್ಮಾಣ ಮಾಡಿದವರು.ಅವರಿಗೆ ಶಿಕ್ಷಣ,ಉದ್ಯೋಗ ಮುಂದೆ ಮದುವೆ,ಮೊಮ್ಮಕ್ಕಳನ್ನು ಜೊತೆಗೆ ಅವರ ಸರ್ವೋತೋಮುಖ ಬೆಳವಣಿಗೆಗೆ ಕಾರಣೀಕರ್ತರು. ಕಾಪಿಟ್ಟುಕೊಂಡು ಸಾಹಿತ್ಯ ಬೆಳವಣಿಗೆಗೆ ಮಕ್ಕಳಾದ ಸಂಜುಕುಮಾರ, ವಿದ್ಯಾಲತಾ,ವಿಜಯಕುಮಾರ, ಜಯಶ್ರೀ ಸದಾಕಾಲ ಬೆನ್ನಹಿಂದಿನ ಬೆಳಕಾಗಿ ಪ್ರೋತ್ಸಾಹ ಕೊಡುವರು.ಅವರ - ಇವರ ಸಂಯಮ ಪ್ರೀತಿ,ಆತ್ಮೀಯತೆ ವಾತ್ಸಲ್ಯ ತುಂಬಿಕೊಂಡು ಸಮೃದ್ಧ ಮಹಾತಾಯಿಯಾಗಿ ನಿಂತವರು.ಇವರು ಮುಟಗಿ ಮತ್ತು ದುಬಲಗುಂಡಿ ಮನೆತ
ನದ ಕೊಂಡಿಯಾಗಿ ಪ್ರೀತಿ ತುಂನಿದವರು.
ಶ್ರೀಮತಿ ಜಗದೇವಿ ದುಬಲಗುಂಡಿಯವರು ಬಹು ಮುಖ ಪ್ರತಿಭಾಂತವರು.ಅವರು ನಿವೃತ್ತಿ ನಂತರ ಸಂಪೂ ರ್ಣ ಸಾಹಿತ್ಯ ಮತ್ತು ಕುಡುಂಬಕ್ಕೆ ಮೀಸಲಾದವರು.ಅವರ ಬದುಕು ಬರಹ ನಡೆ,ನುಡಿಯಂತೆ ಬಾಳಿ ಬದುಕುತ್ತಿರುವ ಶರಣ ಸಂಸ್ಕೃತಿಯ ಶರಣೆಯಾಗಿ,ಸಾಹಿತಿಯಾಗಿ ಇನ್ನೂ ಅವರು ಹೆಚ್ಚು,ಹೆಚ್ಚು ಸೇವೆ ಸಲ್ಲಿಸುವಂತಾಗಲಿ; ಅವರಿಗೆ
ತಕ್ಕಂತೆ ಸ್ಥಾನ ಮಾನ ಲಭಿಸಲಿ ಎಂದು ಆಶಿಸುವೆ. ಎಪ್ಪತ್ತಾರು ವರ್ಷದ ಹಿರಿಯ ಜೀವಿಯಾಗಿ ಶರಣ- ಸೂಫಿಅನುಭಾವಿಗಳ ನಾಡಾದ ಬೀದರದ ಹೆಮ್ಮೆಯ ಪುತ್ರಿ.
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಸಾಹಿತಿ- ಲೇಖಕ ಕಲಬುರಗಿ