ಜೇವರ್ಗಿ | ಜೇರಟಗಿ ಗ್ರಾಮದಲ್ಲಿರುವ ಮೇ. ಸೋಮಜಾಳ ಕಾಟನ್ ಮಿಲ್‌ನಲ್ಲಿ ಸಿಸಿಐ ತುರ್ತು ಪ್ರಾರಂಭದ ಬೇಡಿಕೆ : ಭೀಮ ಆರ್ಮಿ ಭಾರತ ಏಕತಾ ಮಿಷನ್ ಪ್ರತಿಭಟನೆ

ಕಲಬುರಗಿ : ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿರುವ ಮೇ. ಸೋಮಜಾಳ ಕಾಟನ್ ಮಿಲ್‌ನಲ್ಲಿ ಸಿಸಿಐ (CCI) ಖರೀದಿ ಕೇಂದ್ರವನ್ನು ತಕ್ಷಣ ಪ್ರಾರಂಭಿಸಬೇಕೆಂದು ಆಗ್ರಹಿಸಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜೇರಟಗಿ ಕಾಟನ್ ಮಿಲ್‌ನಲ್ಲಿ ಸಿಸಿಐ ಕಾರ್ಯಾರಂಭವಾಗದಿರುವ ಕಾರಣ ಸುತ್ತಮುತ್ತಲಿನ ಹಳ್ಳಿಗಳ ರೈತರು ತಮ್ಮ ಹತ್ತಿಯನ್ನು ಮಾರಾಟಕ್ಕೆ 40-50 ಕಿಮೀ ದೂರದ ಜೇವರ್ಗಿಗೆ ತೆರಳಬೇಕಾಗಿ ಬಂದು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಸಂಕಷ್ಟ ಮನಗಂಡು ಕೂಡಲೇ ರೀ-ಟೆಂಡರ್ ಪ್ರಕ್ರಿಯೆ ನಡೆಸಿ ಜೇರಟಗಿ ಕಾಟನ್ ಮಿಲ್‌ನಲ್ಲಿ ಸಿಸಿಐ ಕೇಂದ್ರ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

“2-3 ದಿನಗಳೊಳಗೆ ಸಿಸಿಐ ಕೇಂದ್ರ ಪ್ರಾರಂಭವಾಗದಿದ್ದಲ್ಲಿ ಭೀಮ ಆರ್ಮಿ (ಭಾರತ ಏಕತಾ ಮಿಷನ್) ಸಂಘಟನೆಯ ವತಿಯಿಂದ ರೈತರ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಯಿತು.

ಪ್ರತಿಭಟನೆಯಲ್ಲಿ ಭೀಮ ಆರ್ಮಿ ಕರ್ನಾಟಕ ಜಿಲ್ಲಾಧ್ಯಕ್ಷ ಯಮನೇಶ ಎಂ. ಅಂಕಲಗಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರದೀಪ ಕಟ್ಟಿ, ಕ. ಕರ್ನಾಟಕ ರೈತ ಘಟಕದ ಕಾರ್ಯಾಧ್ಯಕ್ಷ ಭೂತಾಳಿ ಕರಗೊಂಡ, ಭೀಮ ಆರ್ಮಿ ಜೇವರ್ಗಿ ಅಧ್ಯಕ್ಷ ಯಮನೇಶ ಹರವಾಳ, ಉಪಾಧ್ಯಕ್ಷ ಸಂಜೀವಕುಮಾರ ಕುಡಕಿ, ಕನ್ನಡಪರ ಹೋರಾಟಗಾರ ದೇವೇಂದ್ರ ಮಯೂರ, ಬಸವರಾಜ ಕಣಮೇಶ್ವರ, ನಾಗೇಶ ಹರನಾಳ, ಬುದ್ದು ಅಂಕಲಗಿ, ಶಿವಕುಮಾರ ಕಡಗಂಚಿ, ಜೇಟ್ಟೆಪ್ಪ ಗೊಬ್ಬುರ, ರವಿ ಸಂಗೋಳಗಿ, ನಿಂಗಣ್ಣ ಹಾದಿಮನಿ ಹಾಗೂ ಹಲವಾರು ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.