ಸರ್ದಾರ್ ಪಟೇಲರು ದೇಶದ ಅಖಂಡತೆ ಸಮಗ್ರತೆ ಕಾಪಾಡಿದ ಮಹಾನ್ ಚೇತನ : ದಸ್ತಿ
 
                                ಸರ್ದಾರ್ ವಲ್ಲಭ ಬಾಯಿ ಪಟೇಲರ 150ನೇ ಜಯಂತಿ ಆಚರಣೆ
ಸರ್ದಾರ್ ಪಟೇಲರು ದೇಶದ ಅಖಂಡತೆ ಸಮಗ್ರತೆ ಕಾಪಾಡಿದ ಮಹಾನ್ ಚೇತನ : ದಸ್ತಿ
ಕಲಬುರಗಿ : ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಖಂಡತೆ ಮತ್ತು ಸಮಗ್ರತೆಯನ್ನು ಕಾಪಾಡಿದ ಮಹಾನ್ ಚೇತನವಾಗಿದ್ದು ಭವ್ಯ ಭಾರತದ ಶಿಲ್ಪಿಯಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಹೇಳಿದರು.
ಕಲಬುರಗಿಯಲ್ಲಿ ಅಕ್ಟೋಬರ್ 31ರಂದು ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಕಲಬುರಗಿಯ ಪಟೇಲ್ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿ ಭಾರತಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದರೂ ಕೆಲವೊಂದು ಸಂಸ್ಥಾನಗಳು ಒಕ್ಕೂಟದಲ್ಲಿ ಸೇರ್ಪಡೆಯಾಗಲು ಹಿಂದೇಟು ಹಾಕಿದಾಗ ಪಟೇಲರು ಗೃಹ ಮಂತ್ರಿ ಆಗಿ ತನ್ನ ದಿಟ್ಟ ನಿರ್ಧಾರದಿಂದ ಒಕ್ಕೂಟದಲ್ಲಿ ಸೇರಿಸಿದರು. ಹೈದರಾಬಾದ್ ಸಂಸ್ಥಾನದ ನಿಜಾಂ ಸರಕಾರವನ್ನು ಕೇವಲ ಐದು ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಬಗ್ಗು ಬಡಿದು ಒಕ್ಕೂಟದಲ್ಲಿ ವಿಲಯನ ಮಾಡಿದ ಪಟೇಲರು ಮಹಾನ್ ನಾಯಕರಾಗಿದ್ದರು. ಅವರಂತಹ ಧೀಮಂತ ವ್ಯಕ್ತಿ ಇಲ್ಲದಿರುತ್ತಿದ್ದರೆ ಇನ್ನೂ ಕೂಡ ದಾಸ್ಯತನದ ಜೀವನ ಮಾಡಬೇಕಾಗಿತ್ತು. ಮಾತ್ರವಲ್ಲ ಈ ಭಾಗದ ಗಣ್ಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ರಾಷ್ಟ್ರ ನಾಯಕರಾಗಿ ಬೆಳೆಯಲು ಅವಕಾಶವಿರುತ್ತಿರಲಿಲ್ಲ. ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಪಟೇಲ್ ಅವರ ಕೊಡುಗೆ ಅಪಾರ. ಜಾತಿ ಮತ ಪಂಥ ಎಂಬ ಭೇದವಿಲ್ಲದೆ ರಾಷ್ಟ್ರ ಕಟ್ಟಿದ ಅವರ ಶ್ರಮ ಸ್ಮರಣೀಯವಾದುದು. ಮುಂದಿನ ಜನಾಂಗಕ್ಕೆ ಪಟೇಲರ ಆದರ್ಶವನ್ನು ತಿಳಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಜ್ಜಾಗಬೇಕಾಗಿದೆ. ಸರ್ದಾರ್ ಪಟೇಲರಿಗೆ ಕಲ್ಯಾಣ ಕರ್ನಾಟಕದ ಜನತೆ ಋಣಿಯಾಗಿದ್ದೇವೆ ಎಂದು ಡಾ. ಲಕ್ಷ್ಮಣ ದಸ್ತಿ ಹೇಳಿದರು.
ಭಾರತ ದೇಶದ ಏಕತೆ ಮತ್ತು ಅಖಂಡತೆಗೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರವರು ದೇಶಕ್ಕೆ ನೀಡಿದ ಅಪಾರ. ಸರ್ದಾರ್ ವಲ್ಲಭಭಾಯ್ ಪಟೇಲರ ದಿಟ್ಟತನದ ಧೋರಣೆಯಿಂದ ಇಂದು ನಾವು ಪ್ರಜಾಸತ್ತಾತ್ಮಕ ಅಖಂಡ ಭಾರತ ದೇಶದಲ್ಲಿ ಇದ್ದೇವೆ. ನಮ್ಮ ಪ್ರದೇಶದಲ್ಲಿ ಹುಟ್ಟಿಧ ವೀರೇಂದ್ರ ಪಾಟೀಲ, ಧರ್ಮ ಸಿಂಗ್ ವಿಶಾಲ ಕರ್ನಾಟಕದ ಮುಖ್ಯಮಂತ್ರಿಗಳಾದರು ಅದರಂತೆ ನೂರಾರು ಜನರು ಮಂತ್ರಿಗಳು ಶಾಸಕರಾದರು . ಸರ್ದಾರ್ ವಲ್ಲಭಭಾಯ್ ಪಟೇಲ್ ರ ದಿಟ್ಟತನದ ಕಾರಣದಿಂದಲೆ ಇಂದು ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ,ಯಾದಗೀರ ಜಿಲ್ಲೆಗಳ ಜನರು ವಿಶಾಲ ಕರ್ನಾಟಕದಲ್ಲಿ ಸೇರಲು ಸಾಧ್ಯವಾಯಿತು. ಈ ಐತಿಹಾಸಿಕ ಸತ್ಯವನ್ನು ನಾವೆಲ್ಲಾ ಕಲ್ಯಾಣ ಕರ್ನಾಟಕದ ಕನ್ನಡಿಗರು ಅರ್ಥ ಮಾಡಿಕೊಂಡು ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಸ್ಮರಣೆ ಮಾಡಿಎಲ್ಲರೂ ಮನನ ಮಾಡಿಕೊಳ್ಳಬೇಕೆಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಶಾಮ್ ನಾಟಿಕರ್,ಪ್ರೊ ಬಸವರಾಜ ಕುಮ್ನೂರ,ಡಾ .ಬಸವರಾಜ ಗುಲಶೆಟ್ಟಿ, ಕೈಲಾಸನಾಥ ದೀಕ್ಷಿತ್, ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ. ಸದಾನಂದ ಪೆರ್ಲ, ಎಮ್. ಎಸ್. ಪಾಟೀಲ ನರಿಬೋಳ, ಕುಮಾರ್ ಸ್ವಾಮಿ,ಡಾ ಶರಣಪ್ಪ ಸೈದಾಪುರ,
ಎಮ್.ಬಿ.ನಿಂಗಪ್ಪ.ಡಾ ಮಾಜಿದ್ ದಾಗಿ, ಶರಣಗೌಡ ಪಾಟೀಲ ಪಾಳಾ, ಉದಯಕುಮಾರ್ ಜೇವರ್ಗಿ, ನ್ಯಾಯವಾದಿ ವಿಜಯಕುಮಾರ ಜನೆವರಿ, ಅಣ್ಣಾರಾಯ ಹೆಬ್ಬಾಳ, ಶಿವಲಿಂಗಪ್ಪ ಭಂಡಕ, ಅಸ್ಲಂ ಚೌಂಗೆ, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹ ಮೆಂಡನ್,ರಾಜು ಜೈನ್, ಚಂದ್ರಶೇಖರ ಪಾಟೀಲ ಹುಚಕ್ನಳ್ಳಿ,ಡಾ.ರಾಜಶೇಖರ, ರಾಮಪ್ಪ ಕಮಲಾಪೂರ್, ಮಹ್ಮದ್ ಅಹ್ಮದ್ ಬಗಧಲ್, ಮಹ್ಮದ್ , ಯೂಸುಫ್ ಅಲಿ, ಮಹ್ಮದ್ ರಿಯಾಜುದ್ದಿನ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಟೇಲರ ಜಯಂತಿ ಉತ್ಸವವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಜಂಟಿಯಾಗಿ ಆಚರಿಸಲಾಯಿತು
 
 
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
