ಪಾಸ್‌ಪೋರ್ಟ್ ವೀಸಾದಲ್ಲಿ ಹೆಸರು ತಪ್ಪು — ಸರಿಪಡಿಸುವಂತೆ ಚಾಂದ್ ಪಟೇಲ್ ಬಿಳವಾರರ ಮನವಿ
ಪಾಸ್‌ಪೋರ್ಟ್ ವೀಸಾದಲ್ಲಿ ಹೆಸರು ತಪ್ಪು — ಸರಿಪಡಿಸುವಂತೆ ಚಾಂದ್ ಪಟೇಲ್ ಬಿಳವಾರರ ಮನವಿ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ನಿವಾಸಿ ಚಾಂದ್ ಪಟೇಲ್ / ಹಸನ್ ಪಟೇಲ್ ಬಿಳವಾರ ಅವರು ಪಾಸ್‌ಪೋರ್ಟ್ ವೀಸಾ ಪ್ರಕ್ರಿಯೆಗೆ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪಾಸ್‌ಪೋರ್ಟ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವರ ಹೆಸರನ್ನು ‘ಚಂದ ಪಟೇಲ್ / ಹಸನ್ ಪಟೇಲ್’ ಎಂದು ತಪ್ಪಾಗಿ ದಾಖಲು ಮಾಡಲಾಗಿದೆ.
ತಪ್ಪು ದಾಖಲಾಗಿರುವ ಈ ಹೆಸರಿನಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು, ಅವರು ಬೆಂಗಳೂರು ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳಿಗೆ ತಪ್ಪಿನ ಸರಿಪಡಣೆಗೆ ಆಗ್ರಹಿಸಿ ಪುನಃ ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧವಾಗಿ, ಪಾಸ್‌ಪೋರ್ಟ್ ಇಲಾಖೆಯ ಅಧಿಕಾರಿಗಳು ಅರ್ಜಿದಾರರು ತಮ್ಮ ಆಧಾರ್ ಕಾರ್ಡ್‌ನಲ್ಲಿ ಇರುವ ಸರಿಯಾದ ಹೆಸರಿನಂತೆ ದಾಖಲೆಗಳನ್ನು ಪರಿಷ್ಕರಣೆಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
— ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
