ಶಹಾಬಾದ ಪತ್ತಿನ ಸಹಕಾರ ಸಂಘದ ಚುನಾವಣೆ
ಶಹಾಬಾದ ಪತ್ತಿನ ಸಹಕಾರ ಸಂಘದ ಚುನಾವಣೆ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಶಹಾಬಾದ ಪತಿನ ಸಹಕಾರ ಸಂಘದ ಚುನಾವಣೆ ನ. 27ರಿಂದ ನಾಮಪತ್ರ ಸಲ್ಲಿಸಲು ಪ್ರಾರಂಭವಾಗಿ ಡಿ. 4ರಂದು 3ಗಂಟೆ ವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ವಾಗಿರುತ್ತದೆ.
ಡಿ. 5ರಂದು ನಾಮಪತ್ರ ಪರಿಶೀಲನೆ ನಡೆದು ಅಂದೆ ಉಮೀದುವಾರರ ಯಾದಿ ಪ್ರಕಟಿಸಲಾಗುವುದು.
ಡಿ. 6 ರಂದು ನಾಮಪತ್ರ 3:00ವರೆಗೆ ಹಿಮ್ಮ ಪಡೆಯಬಹುದು ಅಂದೆ ಅರ್ಹ ಸ್ಪರ್ಧಾರ್ಥಿಗಳ ಯಾದಿ 3:30 ಗಂಟೆಗೆ ಪ್ರಕಟಗೊಳ್ಳಲಿದೆ.
ಸಾಯಂಕಾಲ 4 ಗಂಟೆಗೆ ಚುನಾವಣೆ ಚಿನ್ನೆ ನೀಡಲಾಗುವುದು
ದಿನಾಂಕ 8 ರಂದು ಚಿಹ್ನೆಯೊಂದಿಗೆ ಅಭ್ಯರ್ಥಿಗಳ ಯಾದಿ 11 ಗಂಟೆಗೆ ಪ್ರಕಟಗೊಳ್ಳುವುದು.
ಡಿ. 12ರಂದು ಬೆಳಗ್ಗೆ 9:00 ರಿಂದ ಸಾಯಂಕಾಲ 4:00 ವರೆಗೆ ಮತದಾನ ನಡೆಯಲಿದೆ, ಅಂದೆ ಸಾಯಂಕಾಲ ಸಂಘದ ಕಾರ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಮತ ಎಣಿಕೆಗಳ ನಂತರ ಚುನಾವಣಾ ಅಧಿಕಾರಿಗಳಿಂದ ಚುನಾವಣೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಿಟರ್ನಿಂಗ ಅಧಿಕಾರಿಗಳು ತಿಳಿಸಿದ್ದಾರೆ.
