ದೇಶದ ಭವಿಷ್ಯ ಸಂವಿಧಾನದ ಪರಿಣಾಮಕಾರಿ ಅಳವಡಿಕೆಯಲ್ಲಿದೆ'

ದೇಶದ ಭವಿಷ್ಯ ಸಂವಿಧಾನದ ಪರಿಣಾಮಕಾರಿ ಅಳವಡಿಕೆಯಲ್ಲಿದೆ'

ದೇಶದ ಭವಿಷ್ಯ ಸಂವಿಧಾನದ ಪರಿಣಾಮಕಾರಿ ಅಳವಡಿಕೆಯಲ್ಲಿದೆ'

ಕಲಬುರಗಿ : ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಬದುಕುವ, ಸರ್ವರಿಗೂ ಸಮಪಾಲು, ಶತಮಾನದ ಶೋಷಣೆಗೆ ಮುಕ್ತಿ, ಧ್ವನಿಯಿಲ್ಲದವರಿಗೆ ಧ್ವನಿ, ಪ್ರಜಾಪ್ರಭುತ್ವ ವ್ಯವಸ್ಥೆ, ಎಲ್ಲರಿಗೂ ಸಮನಾದ ಒಂದೇ ಮತದಾನ ನೀಡಿದೆ. ದೇಶದ ಭವಿಷ್ಯ ಸಂವಿಧಾನದ ಪರಿಣಾಮಕಾರಿ ಅಳವಡಿಕೆಯಲ್ಲಿದೆ ಎಂದು ಹಿರಿಯ ಸಾಹಿತಿ, ಪ್ರಗತಿಪರ ಚಂತಕ ಡಾ.ಕೆ.ಎಸ್.ಬಂಧು ಅಭಿಮತಪಟ್ಟರು. 

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು, ಕೇಂದ್ರ ಸಂವಹನ ಇಲಾಖೆ, ಎನ್.ಎಸ್.ಎಸ್ ಘಟಕ ಮತ್ತು ಮೌಲಾನಾ ಅಜಾದ್ ಮಾದರಿಯ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ "76ನೇ ಸಂವಿಧಾನ ದಿನಾಚರಣೆ"ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂವಿಧಾನವಿಲ್ಲದಿದ್ದರೆ ಜನ ಹೈವಾನವಾಗುತ್ತಾರೆ ಎಂದರು. ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ. ಕೋಳಕೂರ ಮಾತನಾಡಿ, ದೇಶಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದರು. ಚಿಂತಕ ಭಗವಂತರಾಯ ಬೆಣ್ಣೂರ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಯ ಸದಸ್ಯ ಕಾಶಿನಾಥ ಮಂದೇವಾಲ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮರೆಪ್ಪ ಬೇಗಾರ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು. 

ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ. ಬಟಗೇರಿ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಮೌಲಾನಾ ಆಜಾದ್ ಶಾಲೆಯ ಪ್ರಾಚಾರ್ಯೆ ಲಕ್ಷ್ಮೀ ನಾಯಕ, ಕೇಂದ್ರ ಸಂವಹನ ಇಲಾಖೆಯ ಸಹಾಯಕ ಅಧಿಕಾರಿ ನಾಗಪ್ಪ ಅಂಬಾಗೋಳ, ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ್, ಕಲಾವಿದ ಕಲ್ಯಾಣರಾವ ಶ್ರೀಗಣಿ, ನಾರಾಯಣಸ್ವಾಮಿ ಸೇರಿದಂತೆ ಕಾಲೇಜಿನ ಉಪನ್ಯಾಕರು, ಮೌಲಾನಾ ಶಾಲೆಯ ಶಿಕ್ಷಕರು ಹಾಗೂ ಉಭಯ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ವಿದ್ಯಾರ್ಥಿನಿಯರಾದ ಶಾರದಾ ಮತ್ತು ಮಲಕಮ್ಮ ಪ್ರಾರ್ಥಿಸಿದರು.ಉಪನ್ಯಾಸಕರಾದ ಕೀರ್ತಿ ಭುಜುರಕೆ ಸ್ವಾಗತಿಸಿದರು. ವೀರೇಶ ಗೋಗಿ ನಿರೂಪಿಸಿದರು. ಸುವರ್ಣಲತಾ ಭಂಡಾರಿ ವಂದಿಸಿದರು. ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಆಳಂದನ ಲೋಹಿಯಾ ಕಲಾ ತಂಡದವರಿಂದ ಸಂವಿಧಾನ ಜಾಗೃತಿಯ ಗೀತೆಗಳು, ನಾಟಕ ಪ್ರಸ್ತುತಪಡಿಸಲಾಯಿತು

.