ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಶಾ ಹೇಳಿಕೆ ಖಂಡನೆ:

ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಶಾ ಹೇಳಿಕೆ ಖಂಡನೆ:

ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಶಾ ಹೇಳಿಕೆ ಖಂಡನೆ:ಡಿಸೆಂಬರ್ ೨೩ಕ್ಕೆ ಆಳಂದ ಬಂದ್‌ಗೆ ದಲಿತ ಸಂಘಟನೆಗಳ ಕರೆ

ಆಳಂದ: ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರು ಸಂಸತ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದಲಿತ ಸಂಘಟನೆಗಳು ಡಿಸೆಂಬರ್ ೨೩ ರಂದು ಬೆಳಗಿನ ೧೦: ಗಂಟೆಯಿAದ ಸಂಜೆ ೫:೦೦ಗಂಟೆಯವರೆಗೆ ಆಳಂದ್ ಬಂದ್‌ಗೆ ಕರೆ ನೀಡಿವೆ. 

ಈ ಸಂಬAಧ ಪಟ್ಟಣದಲ್ಲಿ ನಡೆದ ಸಂಘಟನೆಗಳ ಮುಖಂಡರ ಸಭೆಯಲ್ಲಿ ಹಿರಿಯ ಮುಖಂಡ ದಯಾನಂದ್ ಶೇರಿಕಾರ್, ಮಲ್ಲಿಕಾರ್ಜುನ್ ಬೋಳಣಿ, ದಿಲೀಪ್ ಕ್ಷೀರಸಾಗರ್ ಸೇರಿದಂತೆ ಅನೇಕ ದಲಿತ ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿ ಬಂದ್ ಕರೆ ನಿರ್ಧಾರ ಪ್ರಕಟಿಸಿದರು. 

ಸಭೆಯಲ್ಲಿ ಮಾತನಾಡಿದ ದಯಾನಂದ್ ಶೇರಿಕಾರ್, "ಅಂಬೇಡ್ಕರ್ ಅವರು ದೇಶದ ಸಂವಿಧಾನ ರಚನೆಯಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಶಾಹ ಈ ರೀತಿಯ ಹೇಳಿಕೆಗಳು ನಿರ್ಲಜ್ಜ ಕೃತ್ಯಗಳಾಗಿವೆ. ದಲಿತ ಸಮಾಜವನ್ನು ಹೀನಾಯವಾಗಿ ಚಿತ್ರಿಸುವಂತಹ ಈ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಅಮಿತ್ ಶಾಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು," ಎಂದು ಒತ್ತಿಹೇಳಿದರು.

ಸಭೆಯಲ್ಲಿ ಮಾತನಾಡಿದ ದಿಲೀಪ ಕ್ಷೀರಸಾಗರ, ಮುಖಂಡ ಮಲ್ಲಿಕಾರ್ಜುನ್ ಬೋಳಣಿ, "ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದು ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜದ ಮೂಲ ಸಿದ್ಧಾಂತಗಳಿಗೆ ಧಕ್ಕೆ ತರುವ ಕೆಲಸ. ಇದನ್ನು ತಕ್ಷಣವೇ ತಿದ್ದದೇ ಇದ್ದರೆ ದಲಿತ ಸಮಾಜ ಉಗ್ರ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯ," ಎಂದರು.

ಪ್ರತಿಭಟನೆಗೆ ಜನಸಾಮಾನ್ಯರ ಬೆಂಬಲದೊAದಿಗೆ ಬೃಹತ್ ಹೋರಾಟವೊಂದನ್ನು ಎಳೆದುತರುವ ಗುರಿ ಹೊಂದಿರುವ ಈ ದಲಿತ ಸಂಘಟನೆಗಳು, ಕೇಂದ್ರ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿವೆ.