ವಯೋವೃದ್ಧನ ಮೇಲೆ ನಾಯಿಗಳ ದಾಳಿ : ಗಂಭೀರ ಗಾಯ : ಅಧಿಕಾರಿಗಳ ದಿವ್ಯ ನಿರ್ಲಕ್ಷ :..
ವಯೋವೃದ್ಧನ ಮೇಲೆ ನಾಯಿಗಳ ದಾಳಿ : ಗಂಭೀರ ಗಾಯ : ಅಧಿಕಾರಿಗಳ ದಿವ್ಯ ನಿರ್ಲಕ್ಷ :..
ಶಹಾಬಾದ : - ತಾಲೂಕಿನ ಎಚ್ ಎಮ್ ಪಿ ಕಾರ್ಖಾನೆಯ ಜೆ.ಪಿ ಕಾಲೋನಿಯ ಏರಿಯಾದಲ್ಲಿ ವಯೋ ವೃದ್ಧ ತರಕಾರಿ ಮಾರುವ ಹನುಮಂತ ಎಂಬುವರು ವ್ಯಾಪಾರಕ್ಕಾಗಿ ಜೆ.ಪಿ ಕಾಲೋನಿಗೆ ಹೋಗಿದ್ದಾಗ ಅಲ್ಲಿರುವ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ವ್ಯಾಪಾರಕ್ಕಾಗಿ ಕಾಲೋನಿಗೆ ಹೋದಾಗ ಅಲ್ಲಿ ಇರುವ ಬೀದಿ ನಾಯಿಗಳು ವೃದ್ಧನ ಮೇಲೆ ಹರಿಹಾಯ್ದು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ, ಕಾಲಿಗೆ ಕಚ್ಚಿದ್ದರಿಂದ ತುಂಬಾ ರಕ್ತ ಸ್ರಾವವಾಗಿದೆ, ತಕ್ಷಣ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ತಂದು ಪ್ರಾರ್ಥಮಿಕ ಚಿಕಿತ್ಸೆ ನೀಡಲಾಗಿದೆ.
ತಿಂಗಳ ಹಿಂದೆ ನಗರಸಭೆಯ ವಾರ್ಡ್ ನಂಬರ್ 27ರ ಯುವ ಮುಖಂಡ ಮೊಹಮ್ಮದ್ ಇಮ್ರಾನ್ ರವರು ಜೆ.ಪಿ ಕಾಲೋನಿಯಲ್ಲಿ ನಾಯಿಗಳ ಹಾವಳಿ ತುಂಬಾ ಜಾಸ್ತಿಯಾಗಿದೆ, ಇವುಗಳನ್ನು ತಡೆಯಿರಿ ಎಂದು ಎನ.ಎ.ಸಿ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಹಾಗೆ ಮುನ್ನೆಚ್ಚರಿಕೆಯಾಗಿ ಮಾದ್ಯಮದ ಮೂಲಕ ವರದಿ ಕೂಡ ಮಾಡಲಾಗಿತ್ತು, ಆದರೆ ಎನ್ ಎ ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಧಿಕಾರಿಗಳು ಉದಯಕಾಲ ಕನ್ನಡ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಸುದ್ದಿಗೂ ಬೆಲೆ ಕೊಡದೆ, ಜನ ಪ್ರತಿನಿಧಿಗಳ ಮಾತಿಗೂ ಬೆಲೆ ಕೊಡದೆನೇ ನಾಯಿಗಳ ಹಾವಳಿ ತಡೆಯಲು ವಿಫಲರಾಗಿದ್ದು ಇಂತಹ ಅಂತಕ್ಕೆ ಬಂದು ನಿಂತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ.
ಬೀದಿ ನಾಯಿಗಳನ್ನು ಎನ್.ಎ.ಸಿ ಯವರೇ ಸಾಕುತ್ತಿದ್ದಾರೇನೋ ಎಂಬ ಮಟ್ಟಿಗೆ ಯಾವುದೇ ಭಯವಿಲ್ಲದೇ ಬೀದಿ ನಾಯಿಗಳು ಹಿಂಡುಗಟ್ಟಿ ರಾಜಾರೋಷವಾಗಿ ಓಡಾಡುತ್ತವೆ.
ಕಾಲೋನಿ ಸ್ವಚ್ಛತೆ ಮತ್ತು ನಾಯಿಗಳ ಹಾವಳಿ ಬಗ್ಗೆ ಕಾಲೋನಿಯ ನಿವಾಸಿಗಳು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ನಾಯಿಗಳನ್ನು ಸೆರೆ ಹಿಡಿಯಬೇಕು ಹಾಗೆ ಅಧಿಕಾರಿಯ ವಿರುದ್ದ ಸೂಕ್ತ ಕ್ರಮವಾಗಬೇಕು ಎಂದು ನಿವಾಸಿಗಳ ಒತ್ತಾಯವಾಗಿದೆ.
