ರಸ್ತಾಪುರ ಬಣವಿಗೆ ಆಕಸ್ಮಿಕ ಬೆಂಕಿ

ರಸ್ತಾಪುರ ಬಣವಿಗೆ ಆಕಸ್ಮಿಕ ಬೆಂಕಿ
ಶಹಾಪುರ : ಜಾನುವಾರಗಳಿಗೆ ಸಂಗ್ರಹಿಸಿ ಇಟ್ಟಿರುವ ಬಣವಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರುವ ಘಟನೆ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಮದ್ಯಾನ 2 ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.
ರಸ್ತಾಪುರ ಗ್ರಾಮದ ರೈತ ಬಸವರಾಜ ತಂದೆ ಬಾಗಪ್ಪ ಆರಬೊಳ ಎಂಬುವರಿಗೆ ಸೇರಿದ ಬಣಿವೆ ಆಗಿದ್ದು,ಅಲ್ಲೇ ನಿಲ್ಲಿಸಿರುವ ಎತ್ತಿನ ಬಂಡಿಗೂ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಬೂದಿಯಾಗಿದೆ, ಅಲ್ಲೇ ಹಾಕಿರುವ ತಿಪ್ಪೆ ಗೊಬ್ಬರನು ಸುಟ್ಟು ಹೋಗಿದೆ. ಸಂಗ್ರಹಿಸಿಟ್ಟಿರುವ ಬಣವೆ ಹಾಗೂ ಎತ್ತಿನ ಬಂಡಿಯನ್ನು ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದವರೆಲ್ಲರೂ ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ,ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಅಗ್ನಿ ನಂದಿಸುವಲ್ಲಿ ಹರಸಾಹಸ ಪಡುವಂತಾಯಿತು,
ಅಗ್ನಿಶಾಮಕ ದಳದವರು ಚಿಕ್ಕ ವಾಹನವನ್ನು ತಂದು ಅಗ್ನಿ ನಂದಿಸಿದ್ದಾರೆ,
ಆದರೆ ಬೆಂಕಿ ಬಹು ಬೇಗನೆ ಹತೋಟಿಗೆ ಬರಲಿಲ್ಲ ಗ್ರಾಮದವರು ಎಲ್ಲರೂ ಸೇರಿ ಟ್ಯಾಂಕರ್ ಮೂಲಕ ನೀರು ತರಿಸಿ ಅಗ್ನಿಶಾಮಕ ದಳದವರಿಗೆ ಸಹಾಯ ಮಾಡಿದರು. ತಕ್ಷಣ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.ಆದರೆ ಅಗ್ನಿಶಾಮಕ ದಳದವರು ದೊಡ್ಡ ವಾಹನವನ್ನು ಉಪಯೋಗಿಸಬೇಕು ಎಂದು ದಲಿತಪರ ಹೋರಾಟಗಾರ ಹೈಯ್ಯಾಳಪ್ಪ ದೇವಿಕೇರಿ, ಅಗ್ನಿಶಾಮಕ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ಜೇಗ್ರಿ,ಅಶೋಕ್ ಕಲಾಲ್, ಸ್ಥಳದಲ್ಲಿದ್ದು ಸಹಾಯ ಮಾಡಿದರು. ಎತ್ತಿನ ಬಂಡಿ ಮತ್ತು ಬಣವಿಯನ್ನ ಕಳೆದುಕೊಂಡ ರೈತನಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.