ಶರಣರು ವೈದಿಕಶಾಹಿಯ ತೆರಿಗೆ ಪದ್ಧತಿಯ ವಿರುದ್ಧ ಹೋರಾಡಿದವರು - ಡಾ. ಶಿವಗಂಗಾ ರುಮ್ಮಾ

ಶರಣರು ವೈದಿಕಶಾಹಿಯ ತೆರಿಗೆ ಪದ್ಧತಿಯ ವಿರುದ್ಧ ಹೋರಾಡಿದವರು - ಡಾ. ಶಿವಗಂಗಾ ರುಮ್ಮಾ

ಶರಣರು ವೈದಿಕಶಾಹಿಯ ತೆರಿಗೆ ಪದ್ಧತಿಯ ವಿರುದ್ಧ ಹೋರಾಡಿದವರು ಡಾ. ಶಿವಗಂಗಾ ರುಮ್ಮಾ

ಕಾಳಗಿ: “ಕಳಚೂರಿಗಳು ಅಲ್ಪಾವಧಿಗೆ ರಾಜ್ಯಭಾರ ಮಾಡಿದರೂ, ಬಸವ ವಚನ ಚಳುವಳಿಗೆ ನೇರ ಪೂರಕವಾಗಿ ವೈದಿಕಶಾಹಿಯ ಮನುಷ್ಯವಿರೋಧಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದವರು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.

ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿಯ ವಿಭಾಗೀಯ ಪತ್ರಾಗಾರ ಇಲಾಖೆ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಇವರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ‘ಕಳಚೂರಿ ಮನೆತನ: ಚರಿತ್ರೆ ಮತ್ತು ಸಂಸ್ಕೃತಿ’ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನದ ಗೋಷ್ಠಿಯಲ್ಲಿ ಅವರು ಕಳಚೂರಿ ಕಾಲದ ತೆರಿಗೆ ಪದ್ಧತಿ ಮತ್ತು ಶರಣ ಚಳುವಳಿ ನಡುವಿನ ಸಂಬಂಧದ ಕುರಿತು ಉಪನ್ಯಾಸ ನೀಡಿದರು.

ಡಾ. ವಿಕ್ರಮ ವಿಸಾಜಿ ಅವರು ಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, “ಕನ್ನಡ ಕಾವ್ಯಗಳಲ್ಲಿ ಅಡಕವಾಗಿರುವ ಚರಿತ್ರೆಯ ಅಂಶಗಳನ್ನು ಸಂಶೋಧಕರು ಬಹಳ ಜಾಗರೂಕರಾಗಿ ಬಳಸಬೇಕು, ಇಲ್ಲವಾದರೆ ಚರಿತ್ರೆಯು ಪುರಾಣದಂತೆ ರೂಪುಗೊಳ್ಳುವ ಅಪಾಯವಿದೆ” ಎಂದು ಅಭಿಪ್ರಾಯಪಟ್ಟರು. ಪಾಲ್ಕುರಿಕೆ ಸೋಮನಾಥನ *ಬಸವಪುರಾಣ*ದಲ್ಲಿ ದೊರೆಯುವ ಚಾರಿತ್ರಿಕ ಎಳೆಗಳನ್ನು ಸಂಶೋಧನೆಯಲ್ಲಿ ಬಳಸುವಂತೆ ಕರೆ ನೀಡಿದರು.

ಕರ್ನಾಟಕ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಅವರು ಅಕ್ಕಮಹಾದೇವಿಯ ವೈವಾಹಿಕ ಜೀವನ* ಕುರಿತ ಹೊಸ ಶಾಸನೀಯ ಆಧಾರಗಳನ್ನು ಬೆಳಕಿಗೆ ತಂದು ಸಂಶೋಧನಾತ್ಮಕ ಚಿಂತನೆಯನ್ನು ಮುಂದುವರಿಸಿದರು. ಇದೇ ಸಂದರ್ಭದಲ್ಲಿ ಡಾ. ಮಂಜುನಾಥ ಎಸ್. ಪಾಟೀಲ (ಅಗ್ರಹಾರ – ಘಟಿಕಾಸ್ಥಾನಗಳು), ಡಾ. ವೀರಶೆಟ್ಟಿ (ಕಳಚೂರಿ ಬಿಜ್ಜಳ ಅವಲೋಕನ) ಅವರು ತಮ್ಮ ಉಪನ್ಯಾಸಗಳ ಮೂಲಕ ನೂತನ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ  ಪ್ರಾಚಾರ್ಯ ಪಂಡಿತ್ ಸಿ. ಬಿಳಾಮಗೆ, ಡಾ. ಗುರುಪ್ರಕಾಶ ಹೂಗಾರ, ಡಾ. ಶಿವಶರಣಪ್ಪ ಮೋತಕಪಲ್ಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿವಿಧ ಗೋಷ್ಠಿಗಳಿಗೆ ಡಾ. ಸವಿತಾ ತಿವಾರಿ, ಡಾ. ಜಗದೇವಪ್ಪ ಧರಣಿ, ಡಾ. ಶರಣಪ್ಪ ಮಾಳಗಿ ಮತ್ತಿತರರು ಅಧ್ಯಕ್ಷತೆ ವಹಿಸಿದರು.

ಡಾ. ಗಿರೀಶ್, ಡಾ. ಸಂಜೀವಕುಮಾರ ತಾಂದಳೆ, ಗುಲಾಮ್ ಮಹೆಬೂಬ್, ಖಾಜಾವಲಿ ಈಚನಾಳ, ಡಾ. ಮಲ್ಲಿಕಾರ್ಜುನಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾಲೇಜಿನ ವಿದ್ಯಾರ್ಥಿಗಳ ಜಾನಪದ ನೃತ್ಯ ಹಾಗೂ ಹಾಡುಗಳು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸೊಬಗು ತಂದವು. ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ಶಿಸ್ತು ನಿರ್ವಹಿಸಿತು. ಕಾರ್ಯ ನಿರೂಪಣೆಯನ್ನು ಡಾ. ಜ್ಯೋತಿ ಕುಲಕರ್ಣಿ, ರಮೇಶ್ ಕವಡೆ, ಡಾ. ಶಾಂತಕುಮಾರ ಮದನಕರ್, ಶಿವಲೀಲಾ ಬಸವರಾಜ ಮತ್ತು ಇತರರು ನಿರ್ವಹಿಸಿದರು.

ವಂದನೆಯನ್ನು ಡಾ. ಸುಮಂಗಲಾ ಪಾಟೀಲ, ಡಾ. ಶಿವಾನಂದ, ಡಾ. ಹಣಮಂತ ಶಿಂಧೆ ಸಲ್ಲಿಸಿದರು. ರಮೇಶ್ ಕವಡೆ ಮತ್ತು ತಂಡವು ಸ್ವಾಗತಿಸಿದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸಿಕೆಯಿಂದ ಕಾರ್ಯಕ್ರಮ ಯಶಸ್ವಿಗೊಂಡಿತು.