ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ – ಹುಮನಾಬಾದ್ ತಾಲ್ಲೂಕ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ – ಹುಮನಾಬಾದ್ ತಾಲ್ಲೂಕ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ – ಹುಮನಾಬಾದ್ ತಾಲ್ಲೂಕ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಬೀದರ/ಹುಮನಾಬಾದ್ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಬೀದರ ಜಿಲ್ಲಾ ಘಟಕದ ವತಿಯಿಂದ ಬೀದರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹುಮನಾಬಾದ್ ತಾಲ್ಲೂಕ ಘಟಕದ ಅಧ್ಯಕ್ಷರನ್ನಾಗಿ ಶ್ರೀ ಸಂತೋಷ ಹಳ್ಳಿಖೇಡ ರವರನ್ನು ಅಧಿಕೃತವಾಗಿ ನೇಮಕ ಮಾಡುವ ಆದೇಶ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ **ಶ್ರೀ ಸ್ವಾಮಿದಾಸ ಕೆಂಪೆನೋರ** ಅವರು ಮಾತನಾಡಿ, ಕನ್ನಡ ನಾಡು–ನುಡಿ–ಜಲ ರಕ್ಷಣೆಗೆ ಹಾಗೂ ಕನ್ನಡ ಪರ ಹೋರಾಟಗಳಿಗೆ ಸಂಘಟನೆ ಬದ್ಧವಾಗಿದೆ ಎಂದು ತಿಳಿಸಿದರು.

“ಕನ್ನಡ ನುಡಿ ಕೇವಲ ಭಾಷೆಯಲ್ಲ, ಅದು ನಮ್ಮ ಆತ್ಮದ ಪ್ರತಿಬಿಂಬ. ಬಸವಣ್ಣ, ಕುವೆಂಪು, ದ.ರಾ. ಬೇಂದ್ರೆ, ಪುತ್ತಣ್ಣ ಕನಗಾಲ್ ಅವರಂತಹ ಮಹನೀಯರ ಕೀರ್ತಿಯಿಂದ ಕರ್ನಾಟಕ ವಿಶ್ವದ ಗಮನ ಸೆಳೆದಿದೆ. ಕನ್ನಡ ಭಾಷೆಯನ್ನು ಮಾತನಾಡುವುದು, ಓದುವುದು ಮತ್ತು ಬರೆಯುವುದರ ಮೂಲಕ ನಾವು ಕನ್ನಡದ ಅಸ್ತಿತ್ವವನ್ನು ಕಾಪಾಡಬೇಕು” ಎಂದು ಅವರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸೇನೆಯ ಸಂಸ್ಥಾಪಕ ಉಪಾಧ್ಯಕ್ಷರು ಶ್ರೀ ಸಂಗಮೇಶ ಏಣಕೂರ, ಜಿಲ್ಲಾಧ್ಯಕ್ಷರು ಡಾ. ಜೇಮ್ಸ್, ಜಿಲ್ಲಾ ಕಾರ್ಯಕಾರಿ ಸದಸ್ಯರು ಶ್ರೀ ಕಮಲ ಹಾಸನ್ ಭಾವಿದೊಡ್ಡಿ ಹಾಗೂ ಸಂಘಟನೆಯ ಅನೇಕ ನಾಯಕರೂ ಉಪಸ್ಥಿತರಿದ್ದರು.

ವರದಿ : ಮಛಂದ್ರನಾಥ ಕಾಂಬಳೆ