ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಹನ್ನೆರಡನೆ ಶತಮಾನದ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದರು ಎಂದರು. 

ಶರಣ ಕಾಯಕ ಬದುಕು ಯುವ ಪೀಳಿಗೆಗೆ ದಾರಿದೀಪವಾಗಬೇಕು. ಶರಣರು ಯಾತಕ್ಕಾಗಿ ಹೋರಾಟ ಮಾಡಿದರೂ, ಅದರ ಉದ್ದೇಶ ಬಗ್ಗೆ ಇಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಅವರ, ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯವಾಗುವುದು.ಕಾಯಕ ನಿಷ್ಠೆಗೆ ಹೆಸರಾದ ಹಡಪದ ಅಪ್ಪಣ್ಣನವರನ್ನು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು. 

ಸರ್ವ ಸಮುದಾಯಗಳ ಸರ್ವತೋಮುಖ ಏಳಿಗೆಯನ್ನು ಬಯಸುವ ವಿಚಾರಗಳು ಶರಣರ ವಚನಗಳಲ್ಲಿವೆ. ಅನ್ಯಾಯ, ಅಸಮಾನತೆ ವಿರುದ್ಧ ಹನ್ನೆರಡನೆಯ ಶತಮಾನದಲ್ಲಿ ಶರಣರು ವಚನಗಳ ಕ್ರಾಂತಿಯ ಮುಖಾಂತರ ಹೋರಾಡಿದರು,

ಈಗಲೂ ಸಮಾಜದಲ್ಲಿ ಅನ್ಯಾಯಗಳು ಮುಂದುವರೆಯುತ್ತಿವೆ.ಶರಣ ಆಶಯದಂತೆ ನಾವು ಹೋರಾಡಿ ಅದನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳೊಂದಿಗೆ ಜೀವಿಸಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ,ಕಿಶನ ಜಾಧವ,ಶಿವಶಂಕರ ಕಾಶೆಟ್ಟಿ,ಮಲ್ಲಿಕಾರ್ಜುನ ಸಾತಖೇಡ,ಶರಣಪ್ಪ‌ ಹಡಪದ,ಶಿವಯೋಗಿ ನರಿಬೋಳ್ಳಿ,ವಿಶ್ವನಾಥ ಹಡಪದ,ಯಲ್ಲಣ್ಣ ಕಟ್ಟಿಮನಿ,

ಅಂಬ್ರೇಷ ಹಡಪದ,ಕಿರಣ ಹಡಪದ ಸೇರಿದಂತೆ ಇತರರು ಇದ್ದರು.