ಸಗರ ಪಟ್ಟಣ ಪಂಚಾಯತ - ತಿರುಪತಿ ಹತ್ತಿಕಟಗಿ ಹರ್ಷ
ಸಗರ ಪಟ್ಟಣ ಪಂಚಾಯತ - ತಿರುಪತಿ ಹತ್ತಿಕಟಗಿ ಹರ್ಷ
ಶಹಾಪುರ : ತಾಲೂಕಿನ ಬಹುದೊಡ್ಡ ಗ್ರಾಮವಾದ ಸಗರ ಗ್ರಾಮ ಪಂಚಾಯಿತಿಯನ್ನು,ಪಟ್ಟಣ ಪಂಚಾಯಿತಿಯನ್ನಾಗಿ ಸಚಿವ ಸಂಪುಟದಲ್ಲಿ ಮೇಲ್ದರ್ಜೆಗೆ ಏರಿಸಲು ಶ್ರಮಿಸಿದ,ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಗರ ಗ್ರಾಮದ ಬಿಜೆಪಿಯ ಯುವ ಮುಖಂಡ ತಿರುಪತಿ ಹತ್ತಿಕಟಗಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಸುತ್ತಮುತ್ತಲು ಹತ್ತಾರು ಹಳ್ಳಿಗಳು ಈ ಸಗರ ಗ್ರಾಮದ ವ್ಯಾಪ್ತಿಗೆ ಬರುವುದರಿಂದ ಎಲ್ಲಾ ಮೂಲಭೂತ ಸೌಲಭ್ಯಗಳು ಇಲ್ಲಿವೆ, ಪಟ್ಟಣ ಪಂಚಾಯಿತ ಮುಂಬರುವ ದಿನಗಳಲ್ಲಿ ಸಗರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಗರ ಗ್ರಾಮದ ಜನತೆಗೆ ಸಚಿವರು ಸಿಹಿ ಸುದ್ದಿಯನ್ನು ನೀಡಿದ್ದಾರೆ, ಸುಮಾರು ಹತ್ತು ವರ್ಷಗಳ ಸತತ ಪ್ರಯತ್ನದಿಂದ, ನಮಗೆ ಜಯ ದೊರೆತಿದೆ,ಈ ಪಟ್ಟಣ ಪಂಚಾಯಿತಿಗೆ ಹೆಚ್ಚಿನ ಅನುದಾನ ತರುವುದರ ಜೊತೆಗೆ ಅಭಿವೃದ್ಧಿ ಕೆಲಸಗಳು ಮತ್ತಷ್ಟು ಜರಗಲಿ ಅಲ್ಲದೆ ತಾಲೂಕಿನಲ್ಲಿ ಮಾದರಿಯ ಪಟ್ಟಣ ಪಂಚಾಯಿತಿಯನ್ನಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
