ನರೇಗಲ್ಲ| ಎಸಿ ಭರವಸೆ ಹಿನ್ನೆಲೆ; ರೈತರ ಹೋರಾಟ ಅಂತ್ಯ

ನರೇಗಲ್ಲ| ಎಸಿ ಭರವಸೆ ಹಿನ್ನೆಲೆ; ರೈತರ ಹೋರಾಟ ಅಂತ್ಯ

ರೈತ ಸೇನಾ ಕರ್ನಾಟಕ ಏರೇಗಲ್ಲ.

ನರೇಗಲ್ಲ: ಉಪ-ವಿಭಾಗಾಧಿಕಾರಿ ಎಂ. ಗಂಗಪ್ಪ ಅವರ ಭರವಸೆಯ ಹಿನ್ನೆಲೆಯಲ್ಲಿ ನಿನ್ನೆಯಿಂದ ಪ್ರಾರಂಭವಾಗಿದ್ದ ನರೇಗಲ್ಲ ರೈತರ ಅನಿರ್ದಿಷ್ಟಾವಧಿ ಹೋರಾಟವು ಇಂದು ಮುಕ್ತಾಯಗೊಂಡಿತು. ಬೆಳೆಗಳಿಗೆ ಬೆಂಬಲ ಬೆಲೆಯನ್ನು ತಕ್ಷಣವೇ ಘೋಷಿಸಬೇಕು, ಖರೀದಿ ಕೇಂದ್ರಗಳನ್ನು ಈಗಲೇ ಪ್ರಾರಂಭಿಸಬೇಕು ಮತ್ತು ಬೆಳೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ನಿನ್ನೆಯಿಂದ ರೈತರು ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಗಜೇಂದ್ರಗಡ ತಹಶಿಲ್ದಾರ ಕಿರಣಕುಮಾರ ಕುಲಕರ್ಣಿಯವರೊಂದಿಗೆ ಆಗಮಿಸಿದ ಗಂಗಪ್ಪ ರೈತರ ಮನವಿ ಸ್ವೀಕರಿಸಿ, ನಿಮ್ಮೆಲ್ಲ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಬೇಗನೆ ಪರಿಹರಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು.

ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮುಂಚೆ ಮಾತನಾಡಿದ ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ದೇಶದ ಬೆನ್ನೆಲುಬು ರೈತ. ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತನ ಬದುಕು ಇಂದು ಚಿಂತಾಜನಕವಾಗಿದೆ. ರೈತರು ಬೆಳೆದಂತಹ ಬೆಳೆಗಳಿಗೆ ಜರೂರಾಗಿ ಖರೀದಿ ಕೇಂದ್ರ ತೆರೆಯಲು ಈಗಾಗಲೇ ಉಚ್ಚ ನ್ಯಾಯಾಲಯದಿಂದ ಮೇ ತಿಂಗಳಲ್ಲಿಯೇ ಆದೇಶವಾಗಿದೆ. ಮಾಲ್ಕು ತಿಂಗಳಾದರೂ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ನ್ಯಾಯಾಲಯ ನಿಂದನೆಯಾಗಿದೆ. ಬೆಳೆದಂತಹ ಬೆಳೆಗೆ ಯೋಗ್ಯ ಬೆಲೆ ಸಿಗದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಸರ್ಕಾರ ರೈತರಿಗೆ ಲಾಭ ಮಾಡುತ್ತಿದೆಯೋ? ಏನು ದಲ್ಲಾಳಿಗಳಿಗೆ ಲಾಭ ಮಾಡುತ್ತಿದೆಯೋ? ಎಂಬುದೇ ತಿಳಿಯಂತಾಗಿದೆ.

ಮೆಕ್ಕೆಜೋಳದಬೆಂಬಲಬೆಲೆ 2400ರೂ.ಇದ್ದು,ಖರೀದಿಕೇಂದ್ರ ಇಲ್ಲದಿರುವುದರಿಂದ ರೈತರು ಹೊರಗಡೆ ದಲ್ಲಾಳಿಗಳಿಗೆ 1500-1600ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಾವು ಹೋರಾಟ ಮಾಡಿಯೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವಂತಹ ದೈನೇಶಿ ಸ್ಥಿತಿ ನಮಗೆ ಬಂದೊದಗಿದೆ. ಸರ್ಕಾರ ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ರೈತ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆ ಅಡಿಯಲ್ಲಿ ಕುಸುಬೆ ಖರೀದಿ ಯೋಜನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ನಮ್ಮ ಭಾಗದ ವಾಣಿಜ್ಯ ಬೆಳೆಯಾದ ಕುಸುಬೆ ಬೆಳೆಯನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರೋತ್ಸಾಹಧನ 1500 ರೂಪಾಯಿ ನೀಡುವದರೊಂದಿಗೆ ಖರೀದಿ ಯೋಜನೆಗೆ

ಸೂಕ್ತ ಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಈ ವೇಳೆ ನರೇಗಲ್ಲ ರೈತಸೇನಾ ಅಧ್ಯಕ್ಷ ಆನಂದ ಕೊಟಗಿ, ಚಂದ್ರು

ಹೊನವಾಡ, ಬಾಳಪ್ಪ ಸೊಮಗೊಂಡ, ಶ್ರೀಕಾಂತ ಹೊಸಮನಿ, ಶರಣಪ್ಪ ಗಂಗರಗೊಂಡ, ಮಲ್ಲಯ್ಯ ಪ್ರಭುಸ್ವಾಮಿಮಠ, ರುದ್ರೇಶ ಕೊಟಗಿ, ಮಲ್ಲನಗೌಡ ಪಾಟೀಲ, ಮಂಜುನಾಥ ಪಾಯಪ್ಪಗೌಡ್ರ, ವಿರುಪಾಕ್ಷಪ್ಪ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಪ್ರಕಾಶ ಪಿಡಗೊಂಡ, ಶೇಖಪ್ಪ ಲಕ್ಕನಗೌಡ್ರ, ಮಂಜುನಾಥ ಕಮಲಾಪೂರ, ಅರುಣ ಜುಟ್ಲದ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಕಳಕೊಣ್ಣವರ,ಬಸವರಾಜ ಮಡಿವಾಳರಸೇರಿದಂತೆ ನೂರಾರು ರೈತರಿದ್ದರು. ರೋಣ ಸಿಪಿಐ ಎನ್.ವಿಜಯಕುಮಾರ.ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*