ತಂತ್ರಜ್ಞಾನ ಯುಗದಲ್ಲಿ ಹಾಳಾಗುತ್ತಿರುವ ಯುವಕರು – ಸಂಸ್ಕಾರದಿಂದ ಮೇಳೈಸೋಣ: ಮಾದನಹಿಪ್ಪರಗಾ ಮಹಾಸ್ವಾಮಿಗಳ ಸಂದೇಶ

ತಂತ್ರಜ್ಞಾನ ಯುಗದಲ್ಲಿ ಹಾಳಾಗುತ್ತಿರುವ ಯುವಕರು – ಸಂಸ್ಕಾರದಿಂದ ಮೇಳೈಸೋಣ: ಮಾದನಹಿಪ್ಪರಗಾ ಮಹಾಸ್ವಾಮಿಗಳ ಸಂದೇಶ

ತಂತ್ರಜ್ಞಾನ ಯುಗದಲ್ಲಿ ಹಾಳಾಗುತ್ತಿರುವ ಯುವಕರು – ಸಂಸ್ಕಾರದಿಂದ ಮೇಳೈಸೋಣ: ಮಾದನಹಿಪ್ಪರಗಾ ಮಹಾಸ್ವಾಮಿಗಳ ಸಂದೇಶ

ಕಾಳಗಿ: ಏ.18"ತಂತ್ರಜ್ಞಾನ ಯುಗದಲ್ಲಿ ಯುವಕರು ದಾರಿ ತಪ್ಪುತ್ತಿರುವ ಸ್ಥಿತಿಯಲ್ಲಿ, ಧರ್ಮ ಹಾಗೂ ಸಾಂಸ್ಕಾರದಿಂದ ಅವರನ್ನು ಬೆಳೆಸಿದರೆ, ಅವರು ಮನೆಗೂ ದೇಶಕ್ಕೂ ಕೊಡುಗೆ ನೀಡುವಂತಹವರಾಗುತ್ತಾರೆ" ಎಂದು ಮಾದನಹಿಪ್ಪರಗಾದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

ಕಾಳಗಿ ಪಟ್ಟಣದಲ್ಲಿ ನಡೆಯುತ್ತಿರುವ 9ನೇ ದಿನದ ನೀಲಕಂಠೇಶ್ವರ-ಕಾಳೇಶ್ವರ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿಎಚ್ ನಿರಗುಡಿ ಅವರು, "ಸತ್ಯ, ಧರ್ಮ ಹಾಗೂ ಪರೋಪಕಾರದ ಮೂಲಕ ಬದುಕಿದರೆ ಜನ್ಮ ಸಾರ್ಥಕವಾಗುತ್ತದೆ" ಎಂದರು.

ಸುಗೂರ ಹಿರೇಮಠದ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು, "ತಂದೆ-ತಾಯಿ ಸಂಸ್ಕಾರವಂತರಾಗಿದ್ದರೆ ಅವರ ಸಂತತಿಗಳೂ ಸಾಂಸ್ಕಾರಿಕವಾಗಿ ಬೆಳೆಯುತ್ತಾರೆ" ಎಂಬ ಸಂದೇಶ ನೀಡಿದರು. 

ನಿರಗುಡಿ ಮಲ್ಲಯ್ಯ ಮುತ್ಯ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ರಾಂತ ನ್ಯಾಯಾಧೀಶ ಸಿ.ಆರ್. ಬೆನಕನಳ್ಳಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಾಹಿತಿ ವಿಜಯಕುಮಾರ್ ಪರುತೆ, ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಸಾಹಿತಿ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕಸಾಪ ಟೆಂಗಳಿ ವಲಯ ಘಟಕ ಅಧ್ಯಕ್ಷ ಅಣವೀರಪ್ಪ ಪಾಟೀಲ, ಪತ್ರಕರ್ತ ಶೈಲೇಂದ್ರ ಕಾವಡಿ (ಬೀದರ) ಭಿಮಾಶಂಕರ ಅಂಕಲಗಿ,ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಜೇಶ್ ಗುತ್ತೇದಾರ ಹಾಗೂ ಸಂತೋಷ ಪತಂಗೆ ಸಂಯೋಜಿಸಿದರು.