ಸಮಾನತೆಯ ದಾರಿದೀಪ ಡಾ.ಅಂಬೇಡ್ಕರ್: ನಿಂಬರ್ಗಾ ಪಿಎಸ್‌ಐ ಇಂದುಮತಿ

ಸಮಾನತೆಯ ದಾರಿದೀಪ ಡಾ.ಅಂಬೇಡ್ಕರ್: ನಿಂಬರ್ಗಾ ಪಿಎಸ್‌ಐ ಇಂದುಮತಿ

ಸಮಾನತೆಯ ದಾರಿದೀಪ ಡಾ.ಅಂಬೇಡ್ಕರ್: ನಿಂಬರ್ಗಾ ಪಿಎಸ್‌ಐ ಇಂದುಮತಿ

ಆಳಂದ: “ಪ್ರತಿಯೊಬ್ಬ ಭಾರತೀಯ ಮಹಿಳೆಯೂ ಇಂದು ಸಮಾನ ಹಕ್ಕುಗಳುಳ್ಳ ಪ್ರಜೆಯಾಗಿ ಬದುಕುತ್ತಿರುವುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ದೂರ ದೃಷ್ಟಿಕೋನದ ಫಲ” ಎಂದು ನಿಂಬರ್ಗಾ ಠಾಣೆಯ ಪಿಎಸ್‌ಐ ಇಂದುಮತಿ ಹೇಳಿದರು.

ತಾಲೂಕಿನ ನಿಂಬರ್ಗಾ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಗ್ರಾಮ ಪಂಚಾಯತ ವತಿಯಿಂದ ಆಯೋಜಿಸಲಾಗಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸಂವಿಧಾನ ರೂಪಿಸುವ ಮೂಲಕ ಅಂಬೇಡ್ಕರ್ ಮಹಿಳೆಯರಿಗೆ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನ ಹಕ್ಕುಗಳನ್ನು ನೀಡಿದ ಮಹಾನ್ ನಾಯಕರು. ನಾನು ಇಂದು ಖಾಕಿ ಧರಿಸಿದ ಪೊಲೀಸ್ ಅಧಿಕಾರಿ ಆಗಲು ಅವರು ನೀಡಿದ ಸಮಾನತೆಯ ದೊಡ್ಡ ಕೊಡುಗೆಯೇ ಕಾರಣ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಗೌರವ ಹಾಗೂ ಅವಕಾಶ ಕಲ್ಪಿಸಿದವರು ಅಂಬೇಡ್ಕರ್,” ಎಂದರು.

ಗ್ರಾಮ ಪಂಚಾಯತ್ ಸದಸ್ಯ ರಾಜಕುಮಾರ ಚವ್ಹಾಣ ಮಾತನಾಡುತ್ತಾ, “ಅಂಬೇಡ್ಕರ್ ಅಸ್ಪೃಶ್ಯತೆ ಹಾಗೂ ಶೋಷಿತ ಸಮುದಾಯಗಳ ಹಕ್ಕಿಗಾಗಿ ಹೋರಾಡಿದ ಶ್ರೇಷ್ಠ ನಾಯಕ. ಅವರ ಕಠಿಣ ಹೋರಾಟದಿಂದ ಇಂದು ನಾನು ಜನಪ್ರತಿನಿಧಿಯಾಗಿ ಸೇವೆ ನೀಡುತ್ತಿರುವೆ. ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯ ಬದುಕು ಸಿಕ್ಕಿದೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾತಣ್ಣ ಮಟ್ಟಗಿ ಅವರು, ಅಂಬೇಡ್ಕರ್ ಅವರ ಕ್ರಾಂತಿಕಾರಿ ಜೀವನದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಖಾ ಚವ್ಹಾಣ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರವೀಣ ಹೆರೂರ, ಉಪ ತಹಸೀಲ್ದಾರ ಮಹೇಶ ಧಮ್ಮರಗಿಡ್ಡ, ಕಂದಾಯ ನೀರಿಕ್ಷಕ ಸಿದ್ರಾಮಯ್ಯ, ಗ್ರಾಪಂ ಸದಸ್ಯರಾದ ಸುರೇಖಾ ಸೂರ್ಯಕಾಂತ ಜಿಡಗಿ, ಲಲಿತಾಬಾಯಿ ಖರ್ಚನ್, ಮೋಹನ್ ನಿರ್ಮಲಕರ್, ಶಾಮರಾವ್ ಜಿಡಗಿ, ವಸಂತ ಮುರಡಿ, ರಾಜಕುಮಾರ ಸಿಂಗೆ, ದತ್ತಪ್ಪಾ ಚಕ್ರವರ್ತಿ, ಮಹಾಂತೇಶ ಜಿಡಗಿ, ಕಲ್ಯಾಣಿ ನಿರ್ಮಲಕರ್, ಲಕ್ಷ್ಮೀ ಪುತ್ರ ಗೌಂಡಿ ಸಂಜುಕುಮಾರ ಶಿಂದೆ, ಯಲ್ಲಾಲಿಂಗ ಮಾಂಗ್, ಸೂರ್ಯಕಾಂತ ಕರುಣಾಕರ್, ಶ್ರೀಕಾಂತ ಖರ್ಚನ್ ಸೇರಿದಂತೆ ಗ್ರಾಮಸ್ಥರು, ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು.

ಭಾಗಪ್ಪಾ ಸಿಂಗೆ ಬುದ್ಧ ವಂದನೆ ನಡೆಸಿಕೊಟ್ಟರು. ದತ್ತು ಖರ್ಚನ್ ಸ್ವಾಗತ ಹಾಗೂ ಶರಣಬಸಪ್ಪಾ ನಿರ್ಮಲಕರ್ ನಿರೂಪಿಸಿ, ವಂದಿಸಿದರು.