ಬಸವಣ್ಣನವರು ಇಷ್ಟಲಿಂಗ ಕಂಡುಹಿಡಿದ ವಿಶ್ವಗುರು*

ಬಸವಣ್ಣನವರು ಇಷ್ಟಲಿಂಗ ಕಂಡುಹಿಡಿದ ವಿಶ್ವಗುರು*

*ಬಸವಣ್ಣನವರು ಇಷ್ಟಲಿಂಗ ಕಂಡುಹಿಡಿದ ವಿಶ್ವಗುರು* 

ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 19ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಶರಣರ ಅನುಭವದಲ್ಲಿ ಅರಿವೇ ಗುರುವಾಗಿದೆ .ಲಿಂಗವಂತರಲ್ಲಿ ಗುರು ಲಿಂಗ ಜಂಗಮಕ್ಕೆ ವಿಶಿಷ್ಟ ಸ್ಥಾನವಿದೆ .ವೈದಿಕರಲ್ಲಿ , ಶೈವರಲ್ಲಿ ಗುರು ಗುರುವೇ ಆಗಿರುತ್ತಾನೆ , ಶಿಷ್ಯ ಶಿಷ್ಯನೇ ಆಗಿರುತ್ತಾನೆ. ಶಿಷ್ಯ ಗುರುವಾಗಲು ಬರುವುದಿಲ್ಲ .ಆದರೆ ಲಿಂಗವಂತ ಬಸವಾದಿ ಪ್ರಮಥರಲ್ಲಿ ಶಿಷ್ಯನು ಗುರು ಮುಟ್ಟಿ ಗುರುವಾಗುತ್ತಾನೆ. ವೈದಿಕರಲ್ಲಿ ,ಪಾಶುಪತರಲ್ಲಿ,ಶೈವರಲ್ಲಿ ಗುರು ಶ್ರೇಷ್ಠ ಕುಲದಲ್ಲಿ ಜನಿಸಿದವನಾಗಿರುತ್ತಾನೆ. ಶಿಷ್ಯ ದಾಸ್ಯನಾಗಿರುತ್ತಾನೆ ಮತ್ತು ಗುರು ಶ್ರೇಷ್ಠ ಕುಲದವರಿಗೆ ಮಾತ್ರ ವಿದ್ಯೆ ಕಲಿಸುತ್ತಾನೆ . ಕೀಳು ಕುಲದವರಿಗೆ ವಿದ್ಯೆ ನೀಡುವುದಿಲ್ಲ .ಆದರೆ ಲಿಂಗವಂತರಲ್ಲಿ ಯಾವುದೇ ಜಾತಿಯವರು ತತ್ವ ಸಿದ್ಧಾಂತದಿಂದ ಗುರುವಾಗಬಹುದು. ದ್ರೋಣಾಚಾರ್ಯನು ಏಕಲವ್ಯನಿಗೆ ಗುರುದಕ್ಷಣೆಯ ರೂಪದಲ್ಲಿ ಅವನ ಹೆಬ್ಬೆರಳು ದಾನವಾಗಿ ನೀಡಬೇಕಾಯಿತು . ಗುರು ಶಿಷ್ಯ ಪರಂಪರೆ ಬೌದ್ಧ, ಜೈನ, ಇಸ್ಲಾಂ , ಶೈವ ,ಆಧುನಿಕ ಶಿಕ್ಷಣದಲ್ಲಿಯೂ ಇದೆ . ಗುರುಗಳಲ್ಲಿ ಆಧ್ಯಾತ್ಮಿಕ ಗುರು ಮತ್ತು ಲೌಕಿಕ ಗುರುಗಳೆಂದು ಎರಡು ರೀತಿಯಲ್ಲಿ ವಿಂಗಡಿಸಬಹುದು . 

ತಾನೇರಿದ ಎತ್ತರಕ್ಕೆ ಶಿಷ್ಯನು ಏರಬೇಕೆಂದು ಬಯಸುವ ಗುರು ಶ್ರೇಷ್ಠ ಗುರುವಾಗುತ್ತಾನೆ. ಬಸವಾದಿ ಪ್ರಮಾತರು ಇಂಥ ನಿಲುವಿನವರಾಗಿದ್ದರು . ದನ ಕಾಯುವ ತುರುಗಾಯಿ ರಾಮಣ್ಣ, ಕುಂಬಾರ ,ಮಡಿವಾಳ ,ಹಡಪದ, ಸೂಳೇ ಸಂಕವ್ವನಂಥವರು ಕೂಡ ಗುರುಗಳಾದರು. ಲಿಂಗವಂತರಲ್ಲಿ ಶಿಷ್ಯನಿಗೆ ಪಟ್ಟ ಕಟ್ಟಿದಾಗ ಗುರು ಅವನ ಕಾಲಿಗೆ ಬಿದ್ದು ನಮಸ್ಕರಿಸಿ ತನ್ನ ಜೊತೆಗೆ ಕೂಡಿಸಿಕೊಳ್ಳುತ್ತಾನೆ. ನರಜನ್ಮ ತೊರೆದು ಹರಜನ್ಮ ಮಾಡುತ್ತಾನೆ .ಮಾಂಸ ಪಿಂಡ ಮಂತ್ರಪಿಂಡವಾಗಿಸುತ್ತಾನೆ .

ಬಸವಣ್ಣನವರು ಅರಿವೇ ಗುರುವಾಗಿದ್ದರು. ತಮ್ಮ ಸ್ವಾನುಭಾವದಿಂದ ಇಷ್ಟಲಿಂಗ ಕಂಡುಹಿಡಿದ ಗುರುವಾಗಿದ್ದಾರೆ. ಅಷ್ಟಾವರಣ ,ಪಂಚಾಚಾರ, ಷಟಸ್ಥಲಗಳಿಗೆ ಒಂದು ತಾತ್ವಿಕ ನೆಲೆ ಕಂಡುಹಿಡಿದವರು ಬಸವಣ್ಣನವರು .

ವೆಂಕಣ್ಣಯ್ಯ ,ಕಂಚಾಣಿ ಶರಣಪ್ಪ,, ಹಲಸಂಗಿ ಮಧುರ ಚೆನ್ನ ,ರಾಧಾಕೃಷ್ಣ ಇವರೆಲ್ಲ ಯೋಗ್ಯ ಲೌಕಿಕ ಗುರುಗಳಾಗಿದ್ದಾರೆ. ಔಪಚಾರಿಕ ಶಿಕ್ಷಣ ಕಲಿಸಿದ ಗುರು ಕೂಡ ಗೌರವಕ್ಕೆ ಯೋಗ್ಯ ಗುರುವಾಗಿರುತ್ತಾರೆ .ಆದರೆ ಶರಣಬಸವೇಶ್ವರರು -ಮರುಳಾರಾಧ್ಯರು ,ಶಿಶುನಾಳ ಶರೀಫರು - ಗುರು ಗೋವಿಂದ ಭಟ್ಟರು , ಬಸವಣ್ಣ- ಬಸವಾದಿ ಪ್ರಮಥರು ,ಪರಮಹಂಸರು - ವಿವೇಕಾನಂದರು , ಅರವಿಂದರು- ಮಾತೆಯರು ಇವರೆಲ್ಲ ಆಧ್ಯಾತ್ಮಿಕ ಸಾಧಕ ಗುರು ಶಿಷ್ಯರಾಗಿದ್ದಾರೆ .

ಲಿಂಗವಂತ ಬಸವಾದಿ ಪ್ರಮಥರಲ್ಲಿ ಗುರುವೆಂದರೆ ಹರನೇ ತಾನು ಗುರುವಾಗಿ ಬರುತ್ತಾನೆ ಎಂದು ನಂಬಲಾಗಿದೆ .ಗುರು ಪರಿಪೂರ್ಣನಾಗಿರುತ್ತಾನೆ, ಬೆಂದ ನುಲಿಯಂತಿರುತ್ತಾನೆ . ಶಿವಪಥವನರಿಯಲು ಗುರುಪಥವೇ ಮೊದಲೆಂದು ಶರಣರು ಹೇಳುತ್ತಾರೆ . ಗುರುವಿನಲ್ಲಿ ಅಂತಕರಣವಿರಬೇಕು . ತಾಯಿ ಮಕ್ಕಳ ಪ್ರೀತಿ ಎಲ್ಲಾ ಪ್ರಾಣಿಗಳಲ್ಲಿಯೂ ಇರುತ್ತದೆ. ಗುರುವಿಗೆ ಶಿಷ್ಯರ ವಿಷಯದಲ್ಲಿ ತಾಯಿಗೆ ಮೀರಿದ ಕಾಳಜಿ ಇರುತ್ತದೆ. ಅಂಗ ಲಿಂಗದ ಸಾಮರಸ್ಯ ತೋರಿಸುವವನೇ ಗುರುವಾಗಿರುತ್ತಾನೆ . ಅವನು ಅಧ್ಯಾತ್ಮದ ಶ್ರೇಷ್ಠ ಗುರುವಾಗಿದ್ದಾನೆ ಎಂದು ಹೇಳಿದರು .

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ ಅವರು ಹಾಜರಿದ್ದರು