ಉತ್ತಮ ಮಟ್ಟದ ಸಂಸ್ಕಾರ ನೀಡುವುದರಿಂದ ಧೀಮಂತ ವ್ಯಕ್ತಿತ್ವಕ್ಕೆ ಕೈಗನ್ನಡಿ ಉದಗೀರೆ

ಉತ್ತಮ ಮಟ್ಟದ ಸಂಸ್ಕಾರ ನೀಡುವುದರಿಂದ ಧೀಮಂತ ವ್ಯಕ್ತಿತ್ವಕ್ಕೆ ಕೈಗನ್ನಡಿ ಉದಗೀರೆ

ಶ್ರೀ ಗುರಪ್ಪಾ ಟೊಣ್ಣೆ ಶಾಲೆಯಲ್ಲಿ ಮಕ್ಕಳ ದಿನಾಚರಣೆ 

ಉತ್ತಮ ಮಟ್ಟದ ಸಂಸ್ಕಾರ ನೀಡುವುದರಿಂದ ಧೀಮಂತ ವ್ಯಕ್ತಿತ್ವಕ್ಕೆ ಕೈಗನ್ನಡಿ ಉದಗೀರೆ 

ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಲು ವ್ಯಕ್ತಿತ್ವ ವೃದ್ಧಿಸಲು ಒಳ್ಳೆಯ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ನೀಡುವುದು ಬಹಳ ಮುಖ್ಯವಾಗಿದೆ ಎಂದು ಉದಗೀರೆ ನುಡಿದರು.

ಕಮಲನಗರ ತಾಲೂಕಿನ ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.

 ಕಾರ್ಯಕ್ರಮದ ಉದ್ಘಾಟನೆಯನ್ನು ಔರಾದ(ಬಾ) ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ|| ಶಾಲಿವಾನ ಉದಗೀರೆಯವರು ನೇರವೆರಿಸಿ ಸೊಗಸಾಗಿ ಮಾತನಾಡಿದರು.

 ಕಾರ್ಯಕ್ರಮದ ಬಸವ ಪೂಜೆಯನ್ನು ಶಿವಕುಮಾರ ಶಿವಣಕರವರು ನೆರವೆರಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ನೇತೃತ್ವವನ್ನು ಪರಮ ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು ಮತ್ತು ಪುಜ್ಯ ಶ್ರೀ ಪ್ರಭುಲಿಂಗದೇವರು ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶಾಲೆಯ ಆಡಳಿತಾಧಿಕಾರಿಗಳು ಮಕ್ಕಳನ್ನು ಉದ್ದೇಶಿಸಿ, ಗುರುಗಳು ಶಾಲೆಯನ್ನು ನಿರ್ಮಿಸಿ ಈ ಭಾಗದಲ್ಲಿ ಅನೇಕ ಮಕ್ಕಳ ಭವಿಷ್ಯಕ್ಕೆ ಕಾರಣವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಅನೇಕ ನೃತ್ಯ ರೂಪಕವನ್ನು ಹಮ್ಮಿಕೊಂಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರೇಮಕುಮಾರ ವ್ಯವಸ್ಥಾಪಕರು ಎಸ್.ಬಿ.ಐ ಕಮಲನಗರ ಹಾಗೂ ಶ್ರೀ ಮಡಿವಾಳ ಮಹಾಜನ ಮತ್ತು ಶಿವರಾಜ ಪಾಟೀಲ, ಭೀಮರಾವ ಸಿರಗಿರೆ, ಪ್ರಾಂಶುಪಾಲರಾದ ಶ್ರೀಧರ ರಡ್ಡಿ, ರಾಜೇಶ್ವರಿ ಬಿರಾದರ, ಪಲ್ಲವಿ ನಾಯ್ಕ, ಕಾಮಾಕ್ಷಿ ಸುತಾರ, ಅರ್ಚನಾ ಮುಚಳಂಬೆ, ರಾಜೇ ಶ್ರೀ ಸಿರಸಗೆ, ವಿಜಯಲಕ್ಷ್ಮಿ ಎಕಲಾರೆ, ದೀಪಾ ಅಂಬಿಗ, ದಿವ್ಯಾ ನಾಯ್ಕ,ಸುವರ್ಣಾ ಜಲಶಿಂಗೆ , ಸುಭಾಷ ಧರಣೆ, ಹಾವಗಿರಾವ ಮಠಪತಿ, ವಿಜಯಕುಮಾರ ಶೇಗೆದಾರ, ನಿಜಲಿಂಗಯ್ಯಾ ಸ್ವಾಮಿ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು ಸಿಬ್ಬಂಧಿ ಉಪಸ್ಥಿತರಿದರು.

ಕಾರ್ಯಕ್ರಮದ ನಿರೂಪಣೆಯನ್ನು ಸ್ನೇಹಲತಾ ಮತ್ತು ವಿವೆಕಾನಂದ ಬಿರಾದರ ನಡೆಸಿಕೊಟ್ಟರು.