ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಅಭಿನಂದನಾ ಸಮಾರಂಭದ

ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಅಭಿನಂದನಾ ಸಮಾರಂಭದ

ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಅಭಿನಂದನಾ ಸಮಾರಂಭದ

ಕಲಬರುಗಿ: ಜನಹಿತಕ್ಕಾಗಿ ಬದುಕಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಜನಸೇವೆಯಲ್ಲಿಯೇ ಜನಾರ್ದನನ್ನು ಕಾಣಬೇಕು ಎಂದು ಅಬ್ಬೆ ತುಮಕೂರಿನ ಶ್ರೀ ಸಿದ್ದಿಪುರುಷ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಹಾಮಠದ ಪೀಠಾಧಿಪತಿಗಳಾದ ದಾಸೋಹ ಬ್ರಹ್ಮ ಪರಮ ಪೂಜ್ಯ ಶ್ರೀ ಷ.ಬ್ರ ಡಾ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ಕಲಬರುಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು ಅವರಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸಕಲ ಜೀವಿಗಳಲ್ಲಿಯೇ ಮಾನವ ಜನ್ಮ ಬಹು ದೊಡದ್ದು ಪರೋಪಕಾರ ದೆಯೆ ಕುರಣೆಯಿಂದ ಮತ್ತು ಸರಳತೆ ಸಹಜತೆಯಿಂದ ಬದುಕಬೇಕು ಶಾಸನದ ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ ಸಿಕ್ಕ ಅಧಿಕಾರ ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿ ಮಾಡಬೇಕು ಎಂದು ಶ್ರೀಗಳು ನುಡಿದರು. 

ಕಲಬರುಗಿ ಗ್ರಾಮೀಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು ಅವರು ತಮ್ಮ ಮತಕ್ಷೇತ್ರವನ್ನು ಪ್ರಗತಿಯ ಪಥದಡೆ ತಗೆದುಕೊಂಡು ಹೋಗುತ್ತಿರುವುದು ನಾವೆಲ್ಲ ನೋಡುತ್ತಿದ್ದೇವೆ ತಮ್ಮ ಸರಳತೆಯಿಂದ ಮತ್ತಿಮಡು ಅವರು ಮತಕ್ಷೇತ್ರದ ಜನ ಮನ ಗೆದ್ದಿದ್ದಾರೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು

 ಕಲಬರುಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕರಾದ ಬಸವರಾಜ ಮತ್ತಿಮಡು ಅವರಿಗಿ ಅವರ ಆತ್ಮೀಯರ ಬಳಗದ ವತಿಯಿಂದ ಆಯೋಜಿಸಿರುವ ಈ ಅಭಿನಂದನಾ ಸಮಾರಂಭ ಅತಂತ್ಯ ಅರ್ಥಪೂರ್ಣವಾಗಿದ್ದು ಇದು ಸಂತೋಷದ ಕೆಲಸವೆಂದು ಶ್ರೀಗಳು ಮನತುಂಬಿ ಹಾರೈಸಿದರು.

ಕಲಬರುಗಿ ಗ್ರಾಮೀಣ ಮತಕ್ಷೇತ್ರದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಧಕ್ಕೆಬಾರದ ಹಾಗೆ ನಡೆದುಕೊಳ್ಳುತ್ತಿದ್ದು ಇದೊಂದು ಮಾದರಿ ಕ್ಷೇತ್ರವಾಗಿ ಮಾಡಲು ಪಣ ತೊಟ್ಟಿದ್ದು ಇದಕ್ಕಾಗಿ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಮಾದರಿ ಕ್ಷೇತ್ರ ಮಾಡುತ್ತೇನೆ ಎಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಅಭಿನಂದನಾ ಸ್ವೀಕರಿಸಿ ಮಾತಾನಾಡಿದ ಶಾಸಕರಾದ ಬಸವರಾಜ ಮತ್ತಿಮಡು ಹೇಳಿದರು.

ತಮ್ಮ ಕೆಲಸ ಕಾರ್ಯಗಳನ್ನು ನೋಡಿ ಕ್ಷೇತ್ರದ ಜನತೆ ತಮಗೆ ಎರಡನೆಯ ಬಾರಿಗೆ ಆಯ್ಕೆ ಮಾಡಿದ್ದಾರೆ ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು. 

ಶ್ರೀಸಾಮಾನ ವ್ಯಕ್ತಿಯನ್ನು ಶಾಸಕರನ್ನಾಗಿ ಮಾಡಿರುವ ಕೀರ್ತಿ ಮತ್ತು ಶ್ರೇಯಸ್ಸು ಗ್ರಾಮೀಣ ಜನತೆಗೆ ಸಲ್ಲುತ್ತದೆ ಎಂದು ಭಾವುಕರಾಗಿ ನುಡಿದರು. ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಕಲ್ಯಾಣ ಮಂಟಪ ಮತ್ತು ಜಗಜ್ಯೋತಿ ಬಸವೇಶ್ವರರ ಮೂರ್ತಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಘೊಷಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀನಿವಾಸ ಸರಡಗಿ ಗ್ರಾಮದ ಶಕ್ತಿಪೀಠಾಧಿಪತಿಗಳಾದ ಪೂಜ್ಯ ಶ್ರೀ ಸದ್ದರ್ಮ ಶಿರೋಮಣಿ ಡಾ ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ಆರ್ಶಿವಚನ ನೀಡಿದರು ಶ್ರೀನಿವಾಸ ಸರಡಗಿಯ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ವೀರಭದ್ರ ಶಿವಾಚಾರ್ಯರು ಗೊಬ್ಬರು ವಾಡಿಯ ಶ್ರೀ ಸಂತ ಸೇವಾಲಾಲ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಬಳಿರಾಮ ಮಹಾರಾಜರು.  

  ವೇದಮೂರ್ತಿ ಶ್ರೀ ವಿರಭದ್ರಯ್ಯ ಸ್ವಾಮಿ ಚಿಕ್ಕಮಠ ಸಮಾಜ ಸೇವಕಿ ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮಡು ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷರಾದ ಶ್ರೀ ಗಂಗಪ್ಪಗೌಡ ಪಾಟೀಲ. ಮುಖಂಡರಾದ ಶ್ರೀ ಸಂಗಮೇಶ ವಾಲಿ. ಶ್ರೀ ಸಂಗಯ್ಯ ಹಿರೇಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಉದ್ಯಮಿದಾರರಾದ ಶ್ರೀ ವಿನೋಧ ಆರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿಅದ್ದೂರಿಯಾಗಿ ಕ್ಷೇತ್ರದ ಶಾಸಕರಾದ ಸ ಬಸವರಾಜ ಮತ್ತಿಮಡು ದಂಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು ಆತ್ಮೀಯರ ಬಳಗದ ಅಧ್ಯಕ್ಷರಾದ ಶ್ರೀ ಸುರೇಶ ಎಸ್.ತಂಗಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ನಾಗಲಿಂಗಯ್ಯ ಮಠಪತಿ ನಿರೂಪಿಸಿದರು ವಿಶ್ವನಾಥ ಪಾಟೀಲ ಅಭಿನಂದನಾ ನುಡಿಗಳನ್ನು ಅಡಿದರು. 

ಸಮಾರಂಭದಲ್ಲಿ ಗ್ರಾಮದ ಗಣ್ಯರು ಮುಖಂಡರು ಪ್ರಮುಖರು ಭಾಗವಹಿಸಿದ್ದರು

.