ಎಂ ಎಸ್ ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವಕ್ಕೆ ಚಾಲನೆ

ಎಂ ಎಸ್ ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವಕ್ಕೆ ಚಾಲನೆ
ಕಲಬುರ್ಗಿ-ವನಮಹೋತ್ಸವ 2025,ಹಸಿರು ಪಥ ಮತ್ತು ಕಲಬುರ್ಗಿ ಹಸಿರು ಹೆಜ್ಜೆ ನಿಮಿತ್ತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ಸಹ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಪದವಿಕಾಲೇಜಿನ ಪ್ರಾಚಾರ್ಯರಾದ ಮಲ್ಲಪ್ಪ ಬೋತಗಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಶಿಲ್ಪಾ ಅಲ್ಲದ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ ಪ್ರಾಣೇಶ, ಡಾ ಶಂಕರಪ್ಪ ಕಲಬುರ್ಗಿ,ಐ ಕೆ ಪಾಟೀಲ್ ಹಾಗೂ ಎಲ್ಲ ಸಿಬ್ಬಂದಿಗಳು ಹಾಜರಿದ್ದರು ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮನೆಗೊಂದು ಗಿಡ ನೆಡು ವಂತೆ ಪ್ರೇರೇಪಿಸಿ ಪ್ರತಿಯೊಬ್ಬರಿಗೂ ಒಂದೊಂದು ಗಿಡ ನೀಡಲಾಯಿತು