ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾಗಿ ಲಾಳೆಸಾಬ್ ಸೈಪನ್ ಸಾಬ್ ಬಳಗರ್ ನೇಮಕ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾಗಿ ಲಾಳೆಸಾಬ್ ಸೈಪನ್ ಸಾಬ್ ಬಳಗರ್ ನೇಮಕ
ಕಲ್ಯಾಣ ಕಹಳೆ ವಾರ್ತೆ ಯಡ್ರಾಮಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷರನ್ನಾಗಿ ಲಾಳೆಸಾಬ್ ತಂ. ಸೈಪನ್ ಸಾಬ್ ಬಳಗರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರು ತಿಳಿಸಿದ್ದಾರೆ.
ಯಡ್ರಾಮಿ ತಾಲೂಕದ ರೈತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ಮತ್ತು ನ್ಯಾಯ ದೊರಕಿಸುವ ಉದ್ದೇಶದಿಂದ, ಸಂಘಟನೆಯ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಈ ನೇಮಕಾತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟಗಾರರಾದ ಸೋಮನಗೌಡ ಬಳಬಟ್ಟಿ, ಅಲ್ಲಾ ಪಟೇಲ್ ಶಿವಪುರ, ಶೌಕತ್ ಅಲಿ ಆಲೂರ್, ಮುನ್ನಾಭಾಯಿ ಅರಳಗುಂಡಗಿ, ಶಹಬುದ್ದೀನ್ ಗೊಬ್ಬರವಾಡಗಿ, ಅಮರನಾಥ ಸಾಹು ಕುಳಗೇರಿ, ಅಲ್ಲಾ ಪಟೇಲ್ ಕಾಚೂರ್ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.
ಹೊಸ ಅಧ್ಯಕ್ಷರಾಗಿ ನೇಮಕಗೊಂಡ ಲಾಳೆಸಾಬ್ ಬಳಗರ್ ಅವರು ರೈತರ ಹಕ್ಕು ರಕ್ಷಣೆಗೆ ಹಾಗೂ ಹಸಿರು ಸೇನೆಯ ಚಟುವಟಿಕೆಗಳ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
