ಸುಲೇಪೇಟ : 3 ದಿನಗಳ ಕಾಲ ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿ ಭೇಟಿ, ಪರಿಶೀಲನೆ
ಸುಲೇಪೇಟ : 3 ದಿನಗಳ ಕಾಲ ಡ್ರಾಯಿಂಗ್ ಗ್ರೇಡ್ ಪರೀಕ್ಷೆ
ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿ ಭೇಟಿ, ಪರಿಶೀಲನೆ
ಚಿಂಚೋಳಿ :
2024ನೇ ಸಾಲಿನ ನವೆಂಬರ್ ನಲ್ಲಿ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯು ತಾಲೂಕಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆ ಸುಲೇಪೇಟ ಶಾಲೆಯಲ್ಲಿ ನಡೆಯಲಿದೆ.
ಇದು ನ.20 ರಿಂದ 22 ರವರೆಗೆ 03 ದಿನಗಳ ಕಾಲ ನಡೆಯಲಿದ್ದು, ಲೋಯರ್ ಗ್ರೇಡ್ ನ 145, ಹೈಯರ್ ಗ್ರೇಡ್ ನ 128
ಸೇರಿ ಒಟ್ಟು 273 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು,
ಪರೀಕ್ಷೆಗೆ 12 ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಯ್ಯ.ವಿ ಅವರು ಸುಲೇಪೇಟ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪರೀಕ್ಷೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಸುರೇಶ್ ವಾಲೀಕಾರ್, ಸಹ ಮುಖ್ಯ ಅಧೀಕ್ಷಕರಾದ ಪ್ರಭುಜಾಣ ಹಾಗೂ ಚಿತ್ರಕಲಾ ಶಿಕ್ಷಕರಾದ ನಾಗೇಶ ಶೀಲವಂತ, ವೇದಕುಮಾರ ಶಾಸ್ತ್ರಿ, ಶಿವಪ್ರಸಾದ್ ಪಿ ಜಿ, ಗೋವಿಂದ ಸಂಗೇದ್, ಸಂಜಯಕುಮಾರ, ಪ್ರೇಮೀಳಾ ನಿಟ್ಟೂರ್, ಕನ್ಯಾಕುಮಾರಿ, ಸುನೀತಾ, ರಾಜಕುಮಾರ, ವಿಠಲ,ಮೀನಾಕ್ಷಿ. ಎಂ, ಪ್ರಭುಲಿಂಗಯ್ಯ ಸ್ವಾಮಿ, ಶಿಲ್ಪಾರಾಣಿ, ಶ್ರೀದೇವಿ, ನರಸಿಂಹ ರೆಡ್ಡಿ, ಗೌರಿಶಂಕರ, ಕವಿತಾ, ರೇವಣಸಿದ್ದಯ್ಯಸ್ವಾಮಿ, ಭಾಗ್ಯಶ್ರೀ, ಸಚಿನ, ಭುವನೇಶ್ವರಿ ಮೇಲ್ವಿಚಾರಕರು ಇದ್ದರು.