ಬಾಬಾ ಸಾಹೇಬ್‌ ಶೋಷಿತರ ಧ್ವನಿ: ಮತ್ತಿಮಡು

ಬಾಬಾ ಸಾಹೇಬ್‌ ಶೋಷಿತರ ಧ್ವನಿ: ಮತ್ತಿಮಡು

ಬಾಬಾ ಸಾಹೇಬ್‌ ಶೋಷಿತರ ಧ್ವನಿ: ಮತ್ತಿಮಡು

ಕಮಲಾಪೂರ: ಸಮಾಜದ ಕಟ್ಟಕಡೆಯ ಪ್ರಜೆಗೂ ಶಾಸನ ರೂಪಿಸುವ ರಾಜಕೀಯದ ಹಕ್ಕು ಕೊಟ್ಟಿರುವ ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

         ತಾಲೂಕಿನ ಮಹಾಗಾಂವ ಗ್ರಾಮದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು,ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಒಬ್ಬ ಆಧ್ಯಾತ್ಮಿಕ ನಾಯಕ.ಇವತ್ತು ಶೋಷಿತರು,ದಲಿತರು ಮುಖ್ಯ ವಾಹಿನಿಗೆ ಬರಲು ಅವರು ಕಾರಣಕರ್ತರು. ಅಂತಹವರ ಸ್ಮರಣೆ ಮಾಡುವುದು,ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

   ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ‌ ಮಲ್ಲಿಕಾರ್ಜುನ ಮರತೂರಕರ್,ಗಿರೀಶ ಮಾಲಿಪಾಟೀಲ ಸೇರಿದಂತೆ ಇತರರು ಇದ್ದರು.