ಡಾ.ಬಿ ಆರ್ ಅಂಬೇಡ್ಕರ್ ದಮನಿತರ ಧ್ವನಿ:ಡಾ.ಶರಣಪ್ಪ:ಮಾಳಗೆ

ಡಾ.ಬಿ ಆರ್ ಅಂಬೇಡ್ಕರ್ ದಮನಿತರ ಧ್ವನಿ:ಡಾ.ಶರಣಪ್ಪ:ಮಾಳಗೆ

ಡಾ.ಬಿ ಆರ್ ಅಂಬೇಡ್ಕರ್ ದಮನಿತರ ಧ್ವನಿ:ಡಾ.ಶರಣಪ್ಪ:ಮಾಳಗೆ

ಮಹಾಗಾವ:ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾಗಾಂವ್ ಕ್ರಾಸ್ ಇಂದು 134ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶರಣಪ್ಪ ಮಾಳಗಿ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ನಮ್ಮೆಲ್ಲರಿಗೂ ಬಹುದೊಡ್ಡ ಕೊಡುಗೆಯಾಗಿದೆ ವಿಶ್ವದಲ್ಲಿಯೇ ಅತಿ ದೊಡ್ಡ ಸಂವಿಧಾನ ನಮ್ಮದಾಗಿದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಸಮಾನತೆ. ರಾಜಕೀಯ ನ್ಯಾಯ ಸಾಮಾಜಿಕ ನ್ಯಾಯ ನೀಡಿದ್ದಾರೆ ಮಹಿಳೆಯರಿಗೆ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತನ್ನ ಜೀವನದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸಿ ಇಂದು ನಮ್ಮೆಲ್ಲರಿಗೂ ಸುಖೀಯನ್ನಾಗಿಸಿದ್ದಾರೆ . ಅಂಬೇಡ್ಕರ್ ಅವರು ದ್ವನಿ ಇಲ್ಲದವರ ಧ್ವನಿಯಾಗಿದ್ದಾರೆ ಎಂದರು.ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ಮಹದೇವಪ್ಪ ಚೌಹಾಣ್ ಮಾತನಾಡಿದರು, ಸಾಂಸ್ಕೃತಿಕ ಘಟಕದ ಸಂಯೋಜಕರು ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ

ಡಾ. ಸತೀಶ್ ಕುಮಾರ್ ಜಿ, ಪ್ರೊ. ಬಸವರಾಜ್ ಕೊಂಬಿನ್, ಪ್ರೊ. ಶಿವಕುಮಾರ್ ಬಿರಾದರ್, ಪ್ರೊ. ವಿಜಯಲಕ್ಷ್ಮಿ ಪಾಟೀಲ್, ಹಸನಮೀಯ, ಸಾವಿತ್ರಿ ಮೇಡಂ, ಗಾಯತ್ರಿ ಮೇಡಂ, 

ಶ್ರೀ ಪ್ರವೀಣ್ ಹರಿದಾಸ್, ಶ್ರೀ ಶ್ರೀಕಾಂತ್, ಶ್ರೀ ವಿಶ್ವರಾಜ್, ಡಾ. ಲಕ್ಷ್ಮೀಕಾಂತ್ ಮುಂತಾದವರು ಉಪಸ್ಥಿತರಿದ್ದರು

 ವರದಿ ಡಾ. ಅವಿನಾಶ್ ಎಸ್ ದೇವನೂರ ಆಳಂದ