ಪಾರ್ವತಿ ರೆಡ್ಡಿ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಬೆಂಕೆಂದು ಶಿವಲಿಂಗ ಹಳಿಮನಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಪಾರ್ವತಿ ರೆಡ್ಡಿ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಬೆಂಕೆಂದು ಶಿವಲಿಂಗ ಹಳಿಮನಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ
ಕಲಬುರಗಿ: ಶ್ರೀಮತಿ ಪಾರ್ವತಿ ರೆಡ್ಡಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಕನಿನಿನಿ, ಬೇಣ್ಣೆತೋರಾ ಯೋಜನೆ ಕಲಬುರಗಿ ರವರ ಮೇಲೆ ಅಧೀಕಾರ ದೂರುಪಯೋಗ ಪಡಿಸಿಕೊಂಡಿರುವ ಖಂಡಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಿವಲಿಂಗ ಹಳಿಮನಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಿನಾಂಕ 03/09/2024 ಮತ್ತು 10/03/2025 ರಂದು ತಮ್ಮ ಕಛೇರಿಗೆ ಕಲ್ಯಾಣ ಕರ್ನಾಟಕ ರಕ್ಷಣೆ ವೇದಿಕೆ ಕಲಬುರಗಿ ವತಿಯಿಂದ ವಿಶೇಷ ಭೂ ಸ್ವಾಧೀನಾಧಿಕಾರಿ ಕನೀನಿನಿ, ಬೇಣ್ಣೆತೋರಾ ಯೋಜನೆ ಕಲಬುರಗಿ ಯವರಾದ ಶ್ರೀಮತಿ ಪಾರ್ವತಿ ರೆಡ್ಡಿ ಅವರ ವಿರುದ್ಧ ತಮ್ಮ ಕಾರ್ಯವ್ಯಪ್ತಿಮಿರಿ ಮಾಡಿರುವ ಬ್ರಷ್ಟಚಾರ ಕೆಲಸಗಳ ಕುರಿತು ಸೂಕ್ತದಾಖಲೆಗಳೊಂದಿಗೆ ತಮ್ಮ ಕಛೇರಿಗೆ ದೂರು ಕೊಟ್ಟು ಕಾನೂನು ಕ್ರಮ ಕೈಗೊಳ್ಳಬೆಕೆಂದು ತಮ್ಮ ಕಛೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ವಿಪರ್ಯಾಸವೆಂದರೆ ಅದರ ಪ್ರಯುಕ್ತ ತಮ್ಮ ಕಾರ್ಯಾಲಯದಿಂದ ಮಾನ್ಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಲಬುರಗಿ ದಿನಾಂಕ 05/11/2024 ರಂದು ಅಧೀಕಾರಿಗಳಿಗೆ ನಾವು ಸಲ್ಲಿಸಿರುವ ದಾಖಲೆಗಳ ಸಮೆತ ವಿವರಣೆ ಕೊಡುವಂತೆ ತಮ್ಮ ಕಛೇರಿ ಮುಖಾಂತರ ನೋಟಿಸ್ ಕೊಡಲಾಗಿತ್ತು ಆದರೆ ಅಧಿಕಾರಿಗಳು ಯಾವುದೆ ಉತ್ತರ ಕೊಡದೆ ತಮ್ಮ ಕಛೇರಿ ಪ್ರತಕ್ಕೆ ಉತ್ತರಿಸದೆ ಕುಳಿತಿರುವುದು ಅವರ ಅಧಿಕಾರದ ದರ್ಪತೊರಿಸುತ್ತದೆ ಅದಾದ ನಂತರ 20/03/2025 ರಂದು ಮತ್ತೆ ತಮ್ಮ ಕಛೇರಿಯ ಮುಖಾಂತರ ಮತ್ತೊಂದು ವಿವರಣೆ ಕೊಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು ಮತ್ತೆ 16/05/2025 ರಂದು ಜಿಲ್ಲಾಧಿಕಾರಿಯವರ ಕಛೇರಿಯಿಂದ ವಿವರಣೆ ಕೊಡುವಂತೆ ಸತತವಾಗಿ ಮೂರು ಬಾರಿ ಮಾನ್ಯ ಜಿಲ್ಲಾಧಿಕಾರಿಗಳು ವಿವರಣೆ ಕೊಡುವಂತೆ ಕೆಳಿದರು ಸಹಿತ ಇಲ್ಲಿಯವರೆಗೆ ಯಾವುದೆ ಪ್ರತಿಕ್ರಿಯೆ ಕೊಡದೆ ಅಧಿಕಾರ ದರ್ಪ ಮತ್ತು ಆಹಃ ತೊರಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಈ ವಿಶೇಷ ಭೂ ಸ್ವಾಧೀನಾಧಿಕಾರಿ ಇನ್ನು ಸಾರ್ವಜನಿಕರ ಹಾಗೂ ರೈತರ ಜೋತೆ ಯಾವ ರಿತಿಯಲ್ಲಿ ಇವರು ನಡೆದು ಕೊಳ್ಳುತ್ತಾರೆಂಬುದು ತಾವು ಊಹಿಸಬೇಕು. ಈ ಬ್ರಷ್ಟ ಅಧಿಕಾರಿಯು ಜಿಲ್ಲಾಧಿಕಾರಿಗಳ ಪತ್ರಕ್ಕೂ ಉತ್ತರ ಕೊಡದ ಇಂತಹ ಅಹಂಕಾರಿ ಅಧೀಕಾರಿ ಇದ್ದರೆ ಹೆಗೆ. ಕಾರಣ ದಯಾಳುಗಳಾದ ತಾವು ನಮ್ಮ ಬೆಡಿಕೆಗೆ ಸ್ಪಂದಿಸಿ, ಅಧೀಕಾರ ದೂರುಪಯೋಗ ಪಡಿಸಿಕೊಂಡಿರುವ ಶ್ರೀಮತಿ ಪಾರ್ವತಿ ರೆಡ್ಡಿ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಬೆಂಕೆAದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ, ವಿಶ್ವ ಡೇಕುನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
.