ಕಮಲಾನಗರದಲ್ಲಿ ಶರಣಬಸವೇಶ್ವರ ಪುರಾಣ ಮಂಗಲ
ಕಲಬುರಗಿ: ತಾಜ ಸುಲ್ತಾನಪೂರ ಮಾರ್ಗದ ಕಮಲನಗರದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ
ಶ್ರಾವಣ ಮಾಸದ ಪ್ರಯುಕ್ತ ನೂತನ ಶಿಖರದ ಕಳಸ ರೋಹಣವನ್ನು ಚಿಣಮಗೇರಾ ಸಂಸ್ಥಾನ ಮಠದ ಶ್ರೀ ಷ.ಬ್ರ. ವೀರಮಹಾಂತ ಶಿವಾಚಾರ್ಯರು ಅವರು ಅಮೃತ ಹಸ್ತದಿಂದ ನೆರವೇರಿತು. ನಂತರ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಸಿದ್ದಾರೂಢ ಮಹಾಸ್ವಾಮಿಜಿ, ಶ್ರೀ ಷ.ಬ್ರ.ಸಿದ್ದರಾಮ ಶಿವಾಚಾರ್ಯರು, ಖ್ಯಾತ ಉದ್ದಿಮೇದಾರ ವಿಕಾಶ ಆರ್. ಪಾಟಕ (ಸೋನು ಪಟೇಲ್), ಕಾಂಗ್ರೇಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶರಣು ಎ.ಪಾಟೀಲ, ಎಎಸ್‌ಐ ಸಂತೋಷ ಎಲ್, ಗ್ರಾಮ ಪಂಚಾಯತ್ ಸದಸ್ಯ ಹೊನ್ನಪ್ಪ ಜಮಾದಾರ ಸೇರಿದಂತೆ ಸಮಸ್ತ ಸದ್ಭಕ್ತ ಮಂಡಳಿದವರು ಇದ್ದರು.
ತಾಜ ಸುಲ್ತಾನಪೂರ ರಸ್ತೆಯಲ್ಲಿರುವ ಕಮಲನಗರದಲ್ಲಿ ಶ್ರೀ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವವನ್ನು ಕಮಲನಗರದ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ವಿಜೃಂಭಣೆಯಿAದ ನಡೆಯಿತು. ಈ ಸಂದರ್ಭದಲ್ಲಿ ಪುರತಂರು, ಬಡಾವಣೆಯ ಮುಖಂಡರು, ಮಹಿಳೆಯರು, ಯುವಕರು ಸೇರಿದಂತೆ ಇತರರು ಇದ್ದರು.