ಮಹಿಳಾ ಹಕ್ಕುಗಳಿಗೆ ಕಾನೂನಿನ ಚೌಕಟ್ಟು ನೀಡಿದವರು ಡಾ. ಅಂಬೇಡ್ಕರ :.. ಮರಿಯಪ್ಪ ಹಳ್ಳಿ.

|ಅಂಬೇಡ್ಕರ ಜಯಂತಿ ಅಂಗವಾಗಿ ವಿಚಾರ ಸಂಕಿರಣ ಹಾಗೂ ಆದರ್ಶ ಭೀಮ ಪ್ರಶಸ್ತಿ ಪ್ರಧಾನ ಸಮಾರಂಭ|
ಮಹಿಳಾ ಹಕ್ಕುಗಳಿಗೆ ಕಾನೂನಿನ ಚೌಕಟ್ಟು ನೀಡಿದವರು ಡಾ. ಅಂಬೇಡ್ಕರ :.. ಮರಿಯಪ್ಪ ಹಳ್ಳಿ.
ಶಹಾಬಾದ : - ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನ ದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಡಾ. ಬಿಆರ ಅಂಬೇಡ್ಕರ್ ಎಂದು ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ಡಾ. ಬಿಆರ ಅಂಬೇಡ್ಕರ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ಸ್ಕೂಪ್ಸ್ ವತಿಯಿಂದ ಡಾ. ಅಂಬೇಡ್ಕರ ರವರ ಪ್ರಬುದ್ಧ ಭಾರತ ಮತ್ತು ಮಹಿಳೆ' ವಿಚಾರ ಸಂಕಿರಣ ಹಾಗೂ ಆದರ್ಶ ಭೀಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ಸಮುದಾಯದ ಏಳಿಗೆ ಯನ್ನು ಅಳೆಯ ಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳಿಗೆ ಯನ್ನು ಪರಿಗಣಿಸಬೇಕು, ಮಾನವ ಹಕ್ಕು ಹಾಗೂ ಮಹಿಳಾ ಹಕ್ಕುಗಳ ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಡಾ. ಅಂಬೇಡ್ಕರ ಮೊದಲ ನಾಯಕರಾಗಿದ್ದಾರೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ, ಡಾ. ಕರಿಗೂಳೇಶ್ವರ ರವರು ಮಾತನಾಡಿ, ಜಾತಿ-ಕುಲ, ಸ್ತ್ರೀ-ಪುರುಷ ಎಂಬ ಭೇದ ಭಾವವಿಲ್ಲದೆ ಮೂಲಭೂತ ಹಕ್ಕುಗಳನ್ನು ಕೊಡಬೇಕು, ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ದೊರೆಯಬೇಕು ಎಂದು ಪ್ರಪ್ರಥಮವಾಗಿ ಘೋಷಿಸಿದವರು ಡಾ. ಬಿಆರ್ ಅಂಬೇಡ್ಕರ ಮೊದಲಿಗರು ಎಂದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಣೆಯಾಗಿರುವುದನ್ನು ನೋಡಿದರೆ ನಮ್ಮ ಪುರುಷ ರಾಜಕಾರಣಿಗಳು ಈಗಲೂ ಮಹಿಳೆಯರನ್ನು ತಮ್ಮ ಸಮಾನಳೆಂದು ಒಪ್ಪಿಕೊಂಡಿಲ್ಲ. ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾರಿದ್ದು ಈಗಲೂ ಮಹಿಳೆಯರಿಗೆ ಅರ್ಥವಾಗದೆ ಇರುವುದು ದುರಂತವೆ ಸರಿ ಎಂದರು.
ಸಂವಿಧಾನದ ಆರ್ಟಿಕಲ್ 14,15 ಮತ್ತು 16 ರನ್ನು ಭಾರತದ ಪ್ರತಿಯೊಬ್ಬ ಪ್ರಜೆ ಇವುಗಳನ್ನು ಓದಿ ಅರ್ಥೈಸಿಕೊಂಡಾಗ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಸುರೇಶ ಮೆಂಗನ, ಶಿವಶರಣಪ್ಪ ಮಂಠಾಳೆ, ಗುರುಪಾದ ಕೊಗನೂರ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ವಿಜಯಲಕ್ಷ್ಮಿ ಪಾಟೀಲ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಜಗದೀಶ ಚೌರ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ನರೇಂದ್ರ ವರ್ಮಾ, ಪ್ರೋ. ಕೆಬಿ ಬಿಲ್ಲವ, ಡಾ. ಚಿದಾನಂದ ಕುಡ್ಡನ, ಕೃಷ್ಣಪ್ಪ ಕರಣಿಕ, ಶಂಕರ ಅಳೋಳ್ಳಿ, ಶರಣಬಸಪ್ಪ ಕೋಬಾಳ, ರವಿ ಹಾದಿಮನಿ, ವೆಂಕಟರೆಡ್ಡಿ, ಜಾಕೀರ್ ಹುಸೇನ, ಸಂತೋಷ ಹಿರೇಮಠ ಉಪಸ್ಥಿತರಿದ್ದರು.
ಹಣಮಂತರಾಯ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಸುರೇಖಾ ಜೇವರ್ಗಿ ಸ್ವಾಗತಿಸಿದರು
ಶಿಕ್ಷಕಿ ಸುಮಂಗಲ ನಿರೂಪಿಸಿದರು, ರತನರಾಜ ಕೋಬಾಳಕರ ವಂದಿಸಿದರು.
ಡಾ. ಅಂಬೇಡ್ಕರ ಕುರಿತು ಶಂಕರ ಜಾನಾ ತಂಡದರು ಕ್ರಾಂತಿ ಗೀತೆಗಳನ್ನು ಹಾಡಿದರು,
ಡಿ ಸ್ಪಿರಿಟ್ ಡಾನ್ಸ್ ಅಕಾಡೆಮಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೋಟ ಮಾಡಿ :.. ಗ್ರಾ. ಪಂ ತಾಪಂ ಮತ್ತು ಜಿ. ಪಂ ಗಳಲ್ಲಿ ಮಹಿಳಾ ಮೀಸಲಾತಿ ನೀಡಿದ ಹಾಗೆ ವಿಧಾನ ಸಭೆ ಮತ್ತು ಲೋಕ ಸಭೆಯ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಶೇ. 50% ಮೀಸಲಾತಿ ನೀಡಬೇಕು :.. ಸುರೇಶ ಮೆಂಗನ ಗೌರವಾಧ್ಯಕ್ಷರು, ಜಯಂತ್ಯೋತ್ಸವ ಸಮಿತಿ ಶಹಾಬಾದ.
ಆದರ್ಶ ಭೀಮ ಪ್ರಶಸ್ತಿ ಪುರಸ್ಕೃತರು :
ಮರಿಯಪ್ಪ ಹಳ್ಳಿ, ಸುರೇಶ ಮೇಂಗನ, ಕೃಷ್ಣಪ್ಪ ಕರಣಿಕ, ಲೋಹಿತ ಡಿ. ಕಟ್ಟಿ, ಗಿರಿಮಲ್ಲಪ್ಪ ವಳಸಂಗ, ಶರಣಬಸಪ್ಪ ಕೋಬಾಳ, ಡಾ. ಅಹ್ಮದ್ ಪಟೇಲ, ಬಸವರಾಜ ಮಯೂರ, ಶಂಕರ ಅಳ್ಳೋಳಿ, ಸತೀಶ ಕೋಬಾಳಕರ, ಮಹಾದೇವ ನಾಲವಾರಕರ, ಶಂಕರ ಜಾನಾ, ನಾಗೇಂದ್ರ ಹುಗ್ಗಿ, ರಾಜೇಶ ಯನಗುಂಟಿಕರ, ಮಲ್ಲಿಕಾರ್ಜುನ ಕಟ್ಟಿಮನಿ, ಇಮಾನ್ ವೆಲ್ ಜಾನ್ ಪಾಲ, ಶಿವಕುಮಾರ ತಳವಾರ, ನಿಂಗಣ್ಣ ಪೂಜಾರಿ, ಕಿರಣ ಚವ್ಹಾಣ, ವಿಕ್ರಮ ಮಾಲಗತ್ತಿ, ಕಳ್ಳೋಳಿ ಕುಸಾಳೆ, ದತ್ತಪ್ಪ ಕೋಟ್ನೂರ, ಗಂಗಾಧರಪ್ಪ, ಸುನೀತಾ ಕೋರೆ,
ಲಕ್ಷ್ಮೀ ಪುನೀತ ಹಳ್ಳಿ, ಪ್ರಮೋದ ನಾಟೀಕರ, ಮಹಾದೇವ ಮೇತ್ರಿ, ಸಿದ್ದಲಿಂಗಮ್ಮ, ಅಂಬಿಕಾ ಹಂಗರಗಿ, ಪ್ರವೀಣ ರಾಜನ, ಡಾ. ಸುರೇಖಾ ಜೇವರ್ಗಿ, ಡಾ. ಹಣಮಂತಪ್ಪ ಸೇಡಂಕರ, ಅನೀಲ ಕುಮಾರ ಮೈನಾಳಕರ, ಝಾಕೀರ ಹುಸೇನ, ಸಿದ್ದಲಿಂಗ ಡೆಂಗಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.