ಮೂರ್ತಿ ಸ್ಥಾಪನಾ ದಿನ : ವೈಭವದ ಪಲ್ಲಕ್ಕಿ ಉತ್ಸವ

ಮೂರ್ತಿ ಸ್ಥಾಪನಾ ದಿನ : ವೈಭವದ  ಪಲ್ಲಕ್ಕಿ ಉತ್ಸವ

ಮೂರ್ತಿ ಸ್ಥಾಪನಾ ದಿನ : ವೈಭವದ ಪಲ್ಲಕ್ಕಿ ಉತ್ಸವ 

ಶಹಾಬಾದ್ : ನಗರದ ಪ್ರಸಿದ್ಧ ಶ್ರೀಜಗದಂಬಾ ದೇವಿಯ ಮೂರ್ತಿ ಸ್ಥಾಪನೆಯ 40ನೇ ವರ್ಷ ಆಚರಣೆಯ ನಿಮಿತ್ತ ಗುರುವಾರ ದೇವಸ್ಥಾನದಲ್ಲಿ ಮಹಾ ಅಭಿಷೇಕ, ದೇವಿಯ ಮೂರ್ತಿಗೆ ವಿಶೇಷ ಅಲಂಕಾರ, ಪಲಕ್ಕಿ ಉತ್ಸವ, ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. 

ತುಳಜಾಪೂರ ನಂತರದಲ್ಲಿ ದಸರಾ ಉತ್ಸವ ನಡೆಯುವುದು ಶಹಾಬಾದ್ ಜಗದಂಬಾ ದೇವಸ್ಥಾನದಲ್ಲಿ ಭಕ್ತರು ವಿವಿಧ ರಾಜ್ಯಗಳಿಂದ ಬಂದ ದರ್ಶನ ಪಡೆಯುತ್ತಾರೆ, ಹಾಗೂ ದೇವಸ್ಥಾನದಿಂದ ವಿವಿಧ ಸಾಮಾಜಿಕ ಕಾರ್ಯ ಮಾಡುತ್ತಾರೆ ದೇವಿಗೆ ಶ್ರದ್ಧೆ ಭಕ್ತಿಯಿಂದ ಆರಾಧಿಸಿದರೆ ಮನದ ನೋವು ನಿವಾರಣೆಯಾಗುವ ಸುಖ ಶಾಂತಿಯಿಂದ ಇರಲು ಸಾಧ್ಯ ರಮೇಶ ಮಹೇಂದ್ರಕರ ಹೇಳಿದರು. 

ಬೆಳಗ್ಗೆ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಪೂಜೆಯನ್ನು ಸೋಲಾಪೂರಿನ ರಾಜೇಂದ್ರ, ಚಂದ್ರಕಾಂತ ಹಂಚಾಟೆ, ಭಗವಾನ ಶಿವಸಾಗರ ದೇವಿಯ ಪೂಜಾರಿ ಸಂತೋಷ ಪುಲಸೆ, ಜಗನ್ನಾಥ ಕುಲಕರ್ಣಿ, ಬಸವರಾಜ ಸಾತ್ಯಾಳ, ಸುನೀಲ ಭಗತ್, ವಿರೇಶ ಖೂನಿ, ಮಾಡಿದರು. ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ದೇವಿಗೆ ಮಹಾ ಅಭಿಷೇಕ ಮಾಡಿದ ನಂತರ ಪ್ರಸಾದ ವಿತರಣೆ ಮಾಡಲಾಯಿತು. 

ಸಾವಿರಾರು ಜನರು ಅಲಂಕೃತವಾದ ಉತ್ಸವ ಮೂರ್ತಿಯ ದರ್ಶನ ಪಡೆದರು, ಮೆರವಣಿಗೆ ಉದ್ದಕ್ಕೂ ಭಕ್ತರು ಪೂಜೆ ನೆರವೇರಿಸಿದರು.

ಜನರು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.

ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು.

ದೇವಸ್ಥಾನ ಸಮಿತಿ ಅಧ್ಯಕ್ಷ ದಿಲೀಪ ಯಲಶೆಟ್ಟಿ, ರಮೇಶ ಮಹೇಂದ್ರಕರ್, ಅರ್ಚಕ ಸಂತೋಷ ಪುಲಸೆ, ಕಾಶಿನಾಥ ಬಾಸ್ಮೆ, ಡಾ.ಅಶೋಕ ಜಿಂಗಾಡೆ, ರಮೇಶ ಅಷ್ಟೇಕರ್, ಅಂಬ್ರೇಶ್ ಪುಲಸೆ, ಲಕ್ಷ್ಮೀಕಾಂತ, ಮಹೇಂದ್ರಕರ್, ನಂದಕಿಶೋರ ಬಗರೆ, ದಶರಥ ತಾಂದಳೆ, ಅನಂತ ಜಿಂಗಾಡೆ, ಸಚಿನ ಹಂಚಾಟೆ, ಚಂದ್ರಕಾಂತ ಸುತ್ರಾವೆ, ವೆಂಕಟೇಶ ತಿರುಮಲ್ಲ, ರಘುನಾಥ ಮಹೇಂದ್ರಕರ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಜಿಂಗಾಡೆ, ದೇವಸ್ಥಾನ ಸಮಿತಿ, ಯುವ ಸಮಿತಿ, ಮಹಿಳಾ ಪದಾದಿಕಾರಿಗಳು ಭಕ್ತರು ಪಾಲ್ಗೊಂಡಿದರು.

ಶಹಾಬಾದ್ ಸುದ್ದಿ :- ನಾಗರಾಜ್ ದಂಡಾವತಿ