ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮ

ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮ

ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮ

ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಶ್ರೀ ಹನುಮಂತ ದೇವಸ್ಥಾನದಲ್ಲಿ ಶನಿವಾರ ಪ್ರತಿ ವರ್ಷದಂತೆ ಈ ವರ್ಷವೂ ಚಿತ್ರಾ ಪೂರ್ಣಿಮಾ ತಿಥಿ ದವನದ ಹುಣ್ಣಿಮೆ ದಿನ ಅದ್ಧೂರಿಯಾಗಿ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.

 ರುದ್ರಾಭಿಷೇಕ ಪೂಜೆ ನೆರವೇರಿಸುವ ಮೂಲಕ ರಾಜದೇವ್ ಜೊಶಿ ಮಹಾರಾಜ ಚಾಲನೆ ದೊರೆಯಿತು.

ಈ ದಿನ ರಾತ್ರಿ ಭಕ್ತರು ಭಜನೆ ಮಾಡಿದರು.ಬೆಳಗ್ಗೆ 5 :00ಗಂಟೆಗೆ ಮಂದಿರದಲ್ಲಿ ತೋಟ್ಟಿಲು ಕಾರ್ಯಕ್ರಮ ನೇರವೆರಿತು.ನಂತರ ದಿನವಿಡಿ ವಿಶೇಷ ಪೂಜೆ ಸಲ್ಲಿಸಿದರು.ಪೂಜೆ ಸಲ್ಲಿಸುವ ಮೂಲಕ ತೆಂಗು ಕರ್ಪೂರ ನೈವೇದ್ಯ ಭಕ್ತರು ಅರ್ಪಿಸಿದರು.

  ಧನರಾಜ ಪಾಡೊದೆ, ತುಕಾರಾಮ ಬೀರಾದಾರ, ಮತ್ತು ನ್ಯಾನೊಭಾ ಬೀರಾದಾರ ಪ್ರಸಾದ ವ್ಯವಸ್ಥೆ ಆಯೋಜಿಸಲಾಗಿದೆ. ಇವರಿಂದ ಭಕ್ತಿ ದಾಸೋಹ ನೇರವೇರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.ಅನ್ನ , ಹುಗ್ಗಿ ಸಾರು, ಪ್ರಸಾದ್ ಸ್ವೀಕರಿಸಿದರು.

ಈ ಸಂದರ್ಭದಲ್ಲಿ , ಸೋಪಾನ ಶಿಂಧೆ ಸಂತೋಷ್ ಎರೋಳೆ, ಭೀಮ್ ಹಂಗರಗೆ,ಗೋಪಾಲರಾವ್ ಪಾಟೀಲ್, ಶಿವಾಜಿ ಕಾಳೆ, ಶಂಕರ್ ನೂದನುರೆ,ಮಾರುತಿ ಅಳಂದೆ, ರಾಹುಲ್ ಪಾಟೀಲ್, ರಾಮ್ ಕದಮ್, ಶಿವಪ್ಪ ಬೆಣ್ಣೆ, ಚಂದ್ರಕಾಂತ್ ಪುಲಾರಿ ಸುಧಾಕರ್ ಮೂಗಳೆ ಸೂರ್ಯಕಾಂತ್ ಕಾಡೊದೆ, ಶಂಕರ್ ವಡಗಾಂವೆ, ಬಸವ ಚಿಂದೆ ಯುವಕರು ಯುವತಿಯರು ಚಿಕ್ಕ ಮಕ್ಕಳು ಮುದುಕರು ವೃದ್ಧರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.