ಪ್ರತಿ ಹಳ್ಳಿಯಲ್ಲಿ ಅನಧಿಕೃತ ಸರಾಯಿ ಮಾರಾಟಕ್ಕೆ ,ಸಿದ್ದಲಿಂಗ ಪೂಜಾರಿ ಆಕ್ರೋಶ.

ಪ್ರತಿ ಹಳ್ಳಿಯಲ್ಲಿ ಅನಧಿಕೃತ ಸರಾಯಿ ಮಾರಾಟಕ್ಕೆ ,ಸಿದ್ದಲಿಂಗ ಪೂಜಾರಿ ಆಕ್ರೋಶ.

ಪ್ರತಿ ಹಳ್ಳಿಯಲ್ಲಿ ಅನಧಿಕೃತ ಸರಾಯಿ ಮಾರಾಟಕ್ಕೆ ,ಸಿದ್ದಲಿಂಗ ಪೂಜಾರಿ ಆಕ್ರೋಶ.

 ಜೇವರ್ಗಿ ತಾಲೂಕಿನ ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗದಿದ್ದರೂ ಸರಾಯಿ ಮಾತ್ರ ಕಿರಣಿ ಅಂಗಡಿಗಳಲ್ಲಿ ಚಹಾ ಹೋಟೆಲಗಳಲ್ಲಿ ರಾಜಾರೂಷವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು. ಈ ನಕಲಿ ಸಾರಾಯಿ ಸೇವನೆ ಮಾಡಿದ ಹಳ್ಳಿಯ ಮುಗ್ಧ ಜನರ ಲಿವರ್ ಕಿಡ್ನಿ ಫೇಲ್ ಆಗಿ ಪ್ರಾಣ ಬಿಟ್ಟು ಎಷ್ಟು ಕುಟುಂಬಗಳು ಬೀದಿ ಪಾಲಾಗುತ್ತಿವೆ ಇದನ್ನು ಕಣ್ಣಿಗೆ ಕಂಡರೂ ಜಾಣ ಕುರುಡರಂತೆ ವರ್ತಿಸುತ್ತಿರುವ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯವರು ಏನು ಮಾಡುತ್ತಿದ್ದಾರೆ..? ಅನಧಿಕೃತ ಸಾರಾಯಿ ಮಾರಾಟ ತಡೆಗಟ್ಟದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಹಾಲಗಡ್ಲಾ ಅವ್ರು ಆಕ್ರೋಶ ವ್ಯಕ್ತಪಡಿಸಿ 

ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು .

   ತಾಲೂಕಿನಲ್ಲಿ ಪರವಾನಿಗೆ ಹೊಂದಿದ ಮದ್ಯಪಾನ ಅಂಗಡಿಯ ಮಾರಾಟಗಾರರು ಪ್ರತಿ ಹಳ್ಳಿಯಲ್ಲೂ ಕಿರಾಣಿ ಅಂಗಡಿಗಳಿಗೆ ಮತ್ತು ಚಹಾ ಸೇವನೇಯ ಅಂಗಡಿಗಳಿಗೆ ಅನಧಿಕೃತವಾಗಿ ನಕಲಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು

 ಈ ವಿಷಯದ ಕುರಿತು ಇದಕ್ಕೆ ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಕಲ್ಬುರ್ಗಿ ಜಿಲ್ಲಾ ಅಬಕಾರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದರು ಮನವಿ ಪತ್ರ ಸಲ್ಲಿಸಿವ ಸಂದರ್ಭದಲ್ಲಿ ತಾಲೂಕ ಪದಾಧಿಕಾರಿಗಳು. ಸರಡಗಿ ಮಲ್ಲಣ್ಣ ಗೌಡ ಪೊಲೀಸ್ ಪಾಟೀಲ್ ಮೌನೇಶ್ ನರಿಬೋಳ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಅವರಾದ ಹಾಗೂ ತಾಲೂಕ ಕಾರ್ಯದರ್ಶಿ ಪವಿತ್ರ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

 ವರದಿ ಜೆಟ್ಟಪ್ಪ ಎಸ್ ಪೂಜಾರಿ