ಶಿವಪುರ ಸರಕಾರಿ ಪ್ರೌಢಶಾಲೆ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

(ವಡಗೇರಾ ತಾಲೂಕ ವರದಿಗಾರರು: ಮಹಾದೇವಪ್ಪ ಗಂಗಣ್ಣೋರ್)
ಶಿವಪುರ ಸರಕಾರಿ ಪ್ರೌಢಶಾಲೆ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಯಾದಗಿರ/ವಡಗೇರಾ : ತಾಲೂಕಿನ ಶಿವಪುರ ಸರಕಾರಿ ಪ್ರೌಢ ಶಾಲೆ ಬಾಲಕಿಯರ ವಾಲಿಬಾಲ್ ತಂಡವು ಇಂದೂ ನಡೆದ ಪಂದ್ಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮತ್ತು 400 ಮೀಟರ್ ಬಾಲಕಿಯರ ಓಟದಲ್ಲಿ ಕುಮಾರಿ ಅಶ್ವಿನಿ ತಂದೆ ಬಾಲರಾಜ್ ಎಂಬ ವಿದ್ಯಾರ್ಥಿನಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯಗುರುಗಳು, ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.