ಕೆಜಿಎಸ್ ಶಾಲೆಯಲ್ಲಿ ಪಾಲಕ ಪೋಷಕರ ಸಭೆ ನಡೆಯಿತು
ಕೆಜಿಎಸ್ ಶಾಲೆಯಲ್ಲಿ ಪಾಲಕ ಪೋಷಕರ ಸಭೆ ನಡೆಯಿತು
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಂದು ನರೇಗಲ್ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಪಾಲಕ ಪೋಷಕರ ಮಹಾ ಸಭೆಯನ್ನು ಏರ್ಪಡಿಸಲಾಯಿತು ಈ ಸಭೆಯನ್ನು ಅಕ್ಷರದ ಅವ್ವ ಶ್ರೀ ಮತಿ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಆಚರಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು . ಈ ಸಭೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಆನಂದ್ ಎಸ್ ಕೊಟಗಿ ಯವರು ಶಾಲೆಯಲ್ಲಿರುವ ಮಕ್ಕಳಿಗೆ ಶೈಕ್ಷಣಿಕ ಉಪಯೋಗಕ್ಕಾಗಿ ಬಂದ ಭೌತಿಕ ಸೌಲಭ್ಯಗಳು ಮತ್ತು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವದರಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಪೋಷಕರಿಗೆ ತಿಳಿಸಿದರು ಶಿಕ್ಷಕರು ಕೊಟ್ಟ ಗ್ರಹ ಪಾಠವನ್ನು ಪಾಲಕರು ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ಕುಳಿತು ಮಾಡಿಸಲು ತಿಳಿಸಿದರು. ಈ ಒಂದು ಸಭೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಸವರಾಜ್ ಕುರಿ ಅವರು ಪ್ರಸ್ತಾಪವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿಯ ಸದಸ್ಯರಾದ ಶ್ರೀ ಅಂದಾನಗೌಡ ಲಕ್ಕನಗೌಡರ ಶ್ರೀಮತಿ ಶೋಭಾ ತೊಂಡಿಹಾಳ್ ಶ್ರೀಮತಿ ರಾಜೇಶ್ವರಿ ಗುಡಿಸಲಮನಿ ಮತ್ತು ಶ್ರೀಮತಿ ಗೀತಾ ಮುಗಳಿ ಅವರು ಭಾಗವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ನರೇಗಲ್ಲ ಸ್ವಗ್ರಾಮ ಫಿಲೋಶಿಪ್ ನ ಸದಸ್ಯರಾದ ಚನ್ನಬಸಪ್ಪ ಕುಷ್ಟಗಿ ಅವರು ಪಾಲ್ಗೊಂಡು ಮಾತನಾಡಿದರು . ಸುಮಾರು ಒಂದು 100 ಮಂದಿ ಪಾಲಕ ಪೋಷಕರು ಸಭೆಯಲ್ಲಿ ಪಾಲ್ಗೊಂಡು ಮಕ್ಕಳ ಶೈಕ್ಷಣಿಕ ವಿಚಾರದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
