ನುಡಿದಂತೆ ನಡೆದಿದ್ದೇವೆ ವೇತನ ಪರಿಷ್ಕರಣೆ ಮಾಡಿದ್ದೇವೆ ಶಶೀಲ್ ಜಿ ನಮೋಶಿ

ನುಡಿದಂತೆ ನಡೆದಿದ್ದೇವೆ ವೇತನ ಪರಿಷ್ಕರಣೆ ಮಾಡಿದ್ದೇವೆ ಶಶೀಲ್ ಜಿ ನಮೋಶಿ

ನುಡಿದಂತೆ ನಡೆದಿದ್ದೇವೆ ವೇತನ ಪರಿಷ್ಕರಣೆ ಮಾಡಿದ್ದೇವೆ ಶಶೀಲ್ ಜಿ ನಮೋಶಿ 

ಕಲಬುರ್ಗಿ:ನಾವು ನುಡಿದಿದ್ದೇವೆ ಅದರಂತೆ ಪ್ರಾಮಾಣಿಕ ನಡೆದುಕೊಂಡಿದ್ದೇವೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಮಸ್ತ ಬೋಧಕೇತರ ಸಿಬ್ಬಂದಿಗೆ 6 ನೇ ವೇತನ ಆಯೋಗ ಪರಿಷ್ಕರಣೆ ಮಾಡಿರುವ ಸಲುವಾಗಿ ಬೋಧಕೇತರ ಸಿಬ್ಬಂದಿ ಪ್ರಸ್ತುತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಏರ್ಪಡಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಈ ಪರಿಷ್ಕೃತ 6 ನೇ ವೇತನದಿಂದ ಪ್ರತಿಯೋಬ್ಬ ಬೋಧಕ ಸಿಬ್ಬಂದಿಗಳಿಗೆ 4 ರಿಂದ 14 ಸಾವಿರ ರೂ ಗಳ ವರೆಗೆ ವೇತನ ಹೆಚ್ಚಳ ಆಗುವದು ಎಂದು ಹೇಳಿದರು 

ಶೈಕ್ಷಣಿಕ ಕ್ಷೇತ್ರದಿಂದಲೇ ನಾನು ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಸಿಬ್ಬಂದಿಗಳೆ ನನ್ನ ಜೀವಾಳ ಅವರ ಋಣ ನನ್ನ ಮೇಲೆ ಬಹಳಿಷ್ಟಿದೆ ಎಂದು ಹೇಳಿದರು 

ನಾನು ಸಂಸ್ಥೆಯ ಅಧ್ಯಕ್ಷನಾಗಿ ಮಾತನಾಡುತ್ತಿದ್ದೆನೆ ಇಲ್ಲಿ ರಾಜಕಾರಣಿಯಾಗಿ ಮಾತನಾಡುತ್ತಿಲ್ಲ ನಾನು ಹಿಂದೆ ಅಧ್ಯಕ್ಷನಾಗಿದ್ದಾಗಲೆ 5 ನೇ ವೇತನ ಆಯೋಗ ಶಿಫಾರಸು ಘೋಷಣೆ ಮಾಡಿ ವೇತನ ದ್ವಿಗುಣ ಮಾಡಿದ್ದೆ ಆದರೆ ಹಿಂದಿನ ಆಡಳಿತ ಮಂಡಳಿಯು ವೇತನ ಪರಿಷ್ಕರಣೆ ಮಾಡಲೇ ಇಲ್ಲ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಇರಬೇಕಾದ ಸಂಬಳ ಇಲ್ಲವೆ ಇಲ್ಲ ಇದರಿಂದಾಗಿ ನನಗೆ ಬಹಳ ನೋವಿತ್ತು ಅದಕ್ಕಾಗಿಯೆ ನಮ್ಮ ತಂಡ ಚುನಾವಣೆ ಪ್ರಣಾಳಿಕೆಯಲ್ಲಿ ವೇತನ ಪರಿಷ್ಕರಣೆ ಮಾಡುವದಾಗಿ ಹೇಳಿದ್ದೇವು ಈಗ ಪರಿಷ್ಕರಣೆ ಮಾಡಿ ಸಂಬಳ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು, ನೀವು ಸಹ ಆರ್ಥಿಕ ವಾಗಿ ಸಬಲರಾಗಿ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಸಂಸ್ಥೆಗೆ ತಾಯಿಯ ಸ್ಥಾನದಲ್ಲಿ ಇರುವ ಬಸವೇಶ್ವರ ಆಸ್ಪತ್ರೆಯು ಹಿಂದಿನ ಆಡಳಿತದಲ್ಲಿ ಅಧೋಗತಿ ಸ್ಥಿತಿ ತಲುಪಿತ್ತು ಇದನ್ನು ನಾನು ಹೇಳುತ್ತಿಲ್ಲ ಸಾಮಾನ್ಯ ಜನರ ಅಭಿಪ್ರಾಯವಾಗಿತ್ತು ಆದರೆ ಇದನ್ನು ಸರಿ ದಾರಿಗೆ ತರಬೇಕಾದರೆ ಒಂದು ವರ್ಷವೆ ಹಿಡಿಯಿತು ಈಗ ಆಸ್ಪತ್ರೆಯು ಬಹಳಷ್ಟು ಪರಿಣಿತ ವೈದ್ಯರಿಂದ ಕೂಡಿದ್ದು ಈಗ ಕಲಬುರ್ಗಿ ನಗರದಲ್ಲಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಇಲ್ಲಿನ ಸಿಬ್ಬಂದಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈಗಾಗಲೇ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ ಸಂಬಳ ಹೆಚ್ಚಳ ಮಾಡಲಾಗಿದೆ ಸುಮಾರು 40 ಸಾವಿರದಿಂದ 1 ಲಕ್ಷದವರೆಗೆ ವೇತನ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ನಾನು ಹಾಗ ನಮ್ಮ ಆಡಳಿತ ಮಂಡಳಿಯ ಸದಸ್ಯರು ಬಸವೇಶ್ವರ ಆಸ್ಪತ್ರೆಯನ್ನು ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪಣ ತೊಟ್ಟಿದ್ದೇವೆ ಹಾಗೂ ಸಂಸ್ಥೆಯಿಂದು ಇನ್ನೂ ಅನೇಕ ಸುಪರ್ ಸ್ಪೇಷಲಿಟಿ ಆಸ್ಪತ್ರೆಗಳನ್ನು ತೆಗೆಯುವ ಕನಸಿದೆ ಎಂದು ಹೇಳಿದರು. ಇನ್ನು ನಮ್ಮ ಸಂಸ್ಥೆಯ ಹೃದಯ ವಾಗಿರುವ ಪಿಡಿಎ ಇಂಜಿನಿಯರಿಂಗ್ ಕಾಲೇಜು ಈಗ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಐಟಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೇಳಿದರು. ನಮ್ಮ ಆಡಳಿತ ಮಂಡಳಿ ಬಂದ ನಂತರ ದೇಶ ವಿದೇಶಗಳ ಸುಮಾರು 33 ಕಂಪನಿಗಳು ನಮ್ಮ ಜೋತೆ ಒಪ್ಪಂದ ಮಾಡಿಕೊಂಡಿವೆ ಸುಮಾರು 292 ವಿಧ್ಯಾರ್ಥಿಗಳು ನಮ್ಮ ಕಾಲೇಜಿನಿಂದ ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ನಮ್ಮ ಪಿಡಿಎ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮಾಡಿ ಅವರ ಮುಖಾಂತರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಲು ನಿರ್ಧರಿಸಲಾಗಿದೆ. ಸದಾ ನನ್ನ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತಿರುವ ಪ್ರಸ್ತುತ ಆಡಳಿತ ಮಂಡಳಿ ಸದಸ್ಯರು ಮುಂಬರುವ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು

ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಅವರು ಮಾತನಾಡಿ ನಾವು ನಮ್ಮ ಕೆಲಸ ಮಾಡಿದ್ದೇವೆ ಈಗ ಸಂಸ್ಥೆಯಲ್ಲಿ ತಾವು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ತಾಯಿಯ ಸ್ಥಾನದಲ್ಲಿರುವ ಸಂಸ್ಥೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಿಮ್ಮದಾಗಿದೆ ಸಂಸ್ಥೆ ಸಧೃಡ ವಾದರೆ ನಿಮಗೆ ತುಟ್ಟಿಭತ್ಯೆಯನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು. ಸದಾ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುವ ಶಶೀಲ್ ಜಿ ನಮೋಶಿ ನಮ್ಮ ಅಧ್ಯಕ್ಷರಾಗಿರುವದು ನಮ್ಮ ಹೆಮ್ಮೆ ಎಂದು ಹೇಳಿದರು

ಜಂಟಿ ಕಾರ್ಯದರ್ಶಿ ಡಾ ಕೈಲಾಸ ಪಾಟೀಲ್ ಮಾತನಾಡಿ ಸದಾ 24/7 ಕೆಲಸ ಮಾಡುವ ಶಶೀಲ್ ಜಿ ನಮೋಶಿ ನಮ್ಮಂತಹ ಯುವಕರಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ಇವರು ಆದರ್ಶ ರಾಗಿದ್ದಾರೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಸಾವಿತ್ರಿ ಪಟ್ಟಣ ನಮಗೆಲ್ಲಾ ವೇತನ ಪರಿಷ್ಕರಣೆ ಮಾಡಿ ಸಂಬಳ ಹೆಚ್ಚಿಸಿ

 ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಐತಿಹಾಸಿಕ ನಿರ್ಣಯ ಕೈಗೊಂಡು ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದರೆ ನಾವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದರು 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ ನಾಗೇಂದ್ರ ಮಂಠಾಳೆ, ಡಾ ರಜನೀಶ್ ವಾಲಿ,ಡಾ ಮಹಾದೇವಪ್ಪ ರಾಂಪೂರೆ,ಡಾ ಶರಣಬಸಪ್ಪ ಹರವಾಳ,ಡಾ ಅನಿಲಕುಮಾರ ಪಟ್ಟಣ,ಡಾ ಕಿರಣ್ ದೇಶಮುಖ್ , ನಾಗಣ್ಣ ಘಂಟಿ , ನಿಶಾಂತ್ ಎಲಿ ಬೋಧಕೇತರ ಒಕ್ಕೂಟದ ಶಿವಲಿಂಗಪ್ಪ ಭಂಡಕ್, ಲಿಂಗರಾಜ ಪಾಟೀಲ, ಸುರೇಶ್ ಮಾಂಡ್ರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು 

ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು, ಶರಣಬಸವ ಸ್ವಾಮಿ ಇನಾಂದಾರ್ ವಂದಿಸಿದರು