ಚರ್ಚ್ ಮತ್ತು ಕ್ರೈಸ್ತ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ
ಚರ್ಚ್ ಮತ್ತು ಕ್ರೈಸ್ತ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ
-ಮನುಷ್ಯನು ತನ್ನ ಜೀವನದಲ್ಲಿ ಶಾಂತಿ ಹಾಗೂ ಸಮಾಧಾನದಿಂದ ಜೀವನ ಸಾಗಿಸಿದಾಗ ಮಾತ್ರ ದೇವರು ನಮ್ಮಗೆ ದಯಪಾಲಿಸುತ್ತಾನೆ ಎಂದು ಜಿಲ್ಲಾ ಮೇಲ್ವಿಚಾರಕರಾದ ಘನ್,ನೆಲ್ಸನ್ ಸುಮಿತ್ರ ಹೇಳಿದ್ದರು.
ಆಣದೂರ ಗ್ರಾಮದಲ್ಲಿ ನಡೆದ ಕ್ರೈಸ್ತ ಸಮುದಾಯದ ಉದ್ಘಾಟನೆ ಹಾಗೂ ನವೀಕರಿಸಲ್ಪಟ್ಟ ಚರ್ಚ ಉದ್ಘಾಟನೆ ಕಾರ್ಯಕ್ರಮವನ್ನು ನೇರವೆರಿಸಿ ಫನ. ಬಿಷಪ್.ಎನ್.ಎಲ್.ಕರ್ಕರೆ ರವರು ರಿಬನ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಲಾಯಿತು.
ಕ್ರೈಸ್ತ ಸಭೆಗಳನ್ನು ಮಾಡುವುದರ ಮೂಲಕ ನಿಮ್ಮ ಜೀವನ ಪಾವನ ಮಾಡಿಕೊಳ್ಳಿ ನಾವು ಸುಸಂಸ್ಕೃರಾಗಬೇಕಾದರೆ ಯೇಸು ಸ್ವಾಮಿ ಅವರು ತೋರಿಸಿದ ಹಾದಿಯಲ್ಲಿ ನಡೆದು ಪಾವನ ವಾಗಬೇಕು. ಪರೋಪಕಾರಿ ಜೀವನ ಸಾಗಿಸಬೇಕು ಕೇವಲ ತಮ್ಮಗಾಗಿ ಯೋಚಿಸದೆ ಬಡವರ ಅನಾಥರ ಬಗ್ಗೆ ಕನಿಕರ ತೋರಿದಾಗ ಮಾತ್ರ ಆ ಭಗವಂತ ನಮ್ಮ-ನೀಮ್ಮೇಲರ ಜೀವನದಲ್ಲಿ ಸಂತೋಷದ ಕ್ಷಣಗಳು ನೀಡುತ್ತಾನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಘನ..ಬಿಷಪ್ ಎನ್.ಎಲ್.ಕರ್ಕರೆ ಮತ್ತು ಕಮಲ ಕರ್ಕರೆ ಅಮ್ಮನವರು .ಘನ ನೆಲ್ಸನ್ ಸುಮಿತ್ರಾ, ಘನ.ರೆವರೆಂಡ ಸುರೇಶ ಪಾಸ್ಟರ್ ಆಣದೂರ ಮಾಜಿ ಸಚಿವರು ಶ್ರೀ ಬಂಡೆಪ್ಪಾ ಖಾಶೆಂಪೂರ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕಡ್ಯಾಳ. ಅಭಿ ಕಾಳೆ ನಗರ ಸಭೆ ಸದಸ್ಯರು. ಎಸ್.ಪಿ.ರಾಜೇಶ. ಅಮೃತರಾವ ಚೀಮಕೊಡೆ. ಸಂಜಯ ಜಾಗೀರದಾರ ಗ್ರಾಮದ ಚರ್ಚ ಕಮಿಟಿಯ ಅಧ್ಯಕ್ಷರು ಶ್ರೀ ದೇವದಾಸ ಮುಸ್ಕೆನೊರ ಹಾಗೂ ಪದಾಧಿಕಾರಿಗಳು ಡೇಲೆಗೇಟ್ಸ್ ಮತ್ತು ಲೇಮೆನ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಅರುಣ ಮುಸ್ಕೆನೊರ ಸಭೆಯ ಎಲ್ಲಾ ಹಿರಿಯರು ಯುವಕರು ಮಹಿಳೆಯರು , ಆಣದೂರ ಗ್ರಾಮದ ಎಲ್ಲಾ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ರೂಪುರೇಷೆ ಗಳು ಮಾಜಿ ಲೆಮೆನ್ ಶ್ರೀ ಸ್ಟಾಲೀನ್ ಮುಸ್ಕೆನೊರ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.