ಅವಳಿ ಪಟ್ಟಣದ ನೂತನ ಬಸ್ ತಂಗುದಾಣ ಸಾರ್ವಜನಿಕರ ಸೇವೆಗೆ ಅಲಭ್ಯ ಕಂಡು ಕಾಣದಂತೆ ಕುರುಡರಂತೆ ಆದ ತಾಲೂಕ ಆಡಳಿತ
ಅವಳಿ ಪಟ್ಟಣದ ನೂತನ ಬಸ್ ತಂಗುದಾಣ ಸಾರ್ವಜನಿಕರ ಸೇವೆಗೆ ಅಲಭ್ಯ
ಕಂಡು ಕಾಣದಂತೆ ಕುರುಡರಂತೆ ಆದ ತಾಲೂಕ ಆಡಳಿತ
ಚಿಂಚೋಳಿ : ಬೀದರ್ ಮಹೇಬೂಬ್ ನಗರ ರಾಷ್ಟ್ರೀಯ ಹೆದ್ದಾರಿಗೆ 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿ ಬಸ್ ತಂಗುದಾಣ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳು ಬೇಜವಾಬ್ದಾರಿತನದ ನಿರ್ಲಕ್ಷದಿಂದಾಗಿ ನಿರ್ಮಿಸಿದ ಬಸ್ ನಿಲ್ದಾಣ ಸಾರ್ವಜನಿಕರ ಸೇವೆಗೆ ಉಪಯೋಗಕ್ಕೆ ಬಳಕೆಯಾಗದೆ ಸರಕಾರದ ಅಭಿವೃದ್ಧಿ ಯೋಜನೆ ಗಿಡಗಂಟ್ಟಿಗಳ ಮಧ್ಯೆ ಅನಾಥ ಶವವಾಗಿ ನಿಂತಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೃಷಿ ರೈತ ಸಂಪರ್ಕ ಕೇಂದ್ರ, ನೂತನ ತಾಲೂಕ ಆಡಳಿತ ಸೌಧ, ಎಸ್ ಬಿ ಐ ಬ್ಯಾಂಕ್ ಶಾಖೆ, ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಅಬಕಾರಿ ಇಲಾಖೆ, ಅರಣ್ಯ ಇಲಾಖೆಗಳು ಈ ನಿಲ್ದಾಣದ ಪಕ್ಕದಲ್ಲಿ ಬರುತ್ತವೆ. ಆದರೆ ಇಲ್ಲಿ ಓಡಾಡುವ ಯಾವುದೇ ಸಾರಿಗೆ ಬಸ್ ಗಳು ನಿಲ್ಲಿಸುವುದಿಲ್ಲ. ನಿಲ್ಲಿಸಲು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲದ ಕಾರಣ ದೂರದ ಬಸವ ಪೆಟ್ರೋಲ್ ಬಂಕ್ ಹತ್ತಿರದಿಂದ ಗ್ರಾಮೀಣ ಭಾಗದ ಜನರು ಬಸ್ ಇಳಿದು, ಎಸ್ ಬಿ ಐ ಬ್ಯಾಂಕ್, ರೈತ ಸಂಪರ್ಕ ಕೇಂದ್ರಕ್ಕೆ, ಡಿಗ್ರಿ ಕಾಲೇಜಿಗಳಿಗೆ ವಿದ್ಯಾರ್ಥಿಗಳು, ವೃದ್ಧರು ಸರಕಾರಿ ಸೇವೆಯನ್ನು ಪಡೆದುಕೊಳುವುದಕ್ಕೆ ದೂರದ ಬಂಕ್ ನಿಂದ ನಡೆದುಕೊಂಡು ಬರಬೇಕಾಗಿದೆ. ಇನ್ನೂ ಸಾಂಯಕಾಲ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಬಸ್ ಗಾಗಿ ಬಿಸಿಲು, ಮಳೆಯನ್ನದೆ ಹೆದ್ದಾರಿ ಪಕ್ಕ ಕಾಯುತ್ತ ನಿಲ್ಲುವ ಪರಿಸ್ಥಿತಿಯಾಗಿದೆ. ಆದರೆ ಇದೇ ಮುಖ್ಯ ರಸ್ತೆಯಿಂದಲೇ ನೋಡುತ್ತಲೇ ತಾಲೂಕ ಆಡಳಿತದ ಅಧಿಕಾರಿಗಳು, ರಾಜಕೀಯ ಗಣ್ಯವ್ಯಕ್ತಿಗಳು, ಚುನಾಯಿತ ಜನಪ್ರತಿನಿಧಿಗಳು ಕಂಡು ಕಾಣದಂತೆ ಕುರುಡರಂತೆ ನೋಡಿ ಮುನ್ನಡೆಯುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿವೆ. ಇನ್ನಾದರು ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣ ನಿಲ್ದಾಣದಲ್ಲಿಯೇ ಬಸ್ ನಿಲ್ಲುಗಡೆಗೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ, ವೃದ್ಧರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚುನಾಯಿತ ಜನಪ್ರತಿನಿಧಿಗಳು, ಆಡಳಿತ ಅಧಿಕಾರಿಗಳು ಉದಾಸೀನ ತೋರದೆ, ನಿದ್ದೆಯಿಂದ ಎದ್ದು ಅನುಕೂಲ ಕಲ್ಪಿಸಿಕೊಡಲು ಇಚ್ಛೆ ಮತ್ತು ಮನಸ್ಸು ಮಾಡಬೇಕಾಗಿದೆ?