71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
ಶಹಾಬಾದ್: ಸಹಕಾರ ಸಂಘಗಳ ಸೌಲಭ್ಯಗಳು ಇಂದಿನ ಯುವಕರು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವುದು ಈ ಸಪ್ತಾಹದ ಕಾರ್ಯಕ್ರಮ ಉದ್ದೇಶ ಎಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರ ಸಿದ್ರಾಮರೆಡ್ಡಿ .ವಿ.ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಂಡಳಿ ಬೆಂಗಳೂರು, ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟ, ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಲಬುರ್ಗಿ ಹಾಗೂ ಓಂ ಪತ್ತಿನ ಸಹಕಾರ ಸಂಘ ಶಹಾಬಾದ ಇವರ ಆಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ತಾಲ್ಲೂಕ ತಹಶೀದಾರರಾದ ಜಗದೀಶ್ ಚೌರ್ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಮೇಲೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಭರ್ಮಾ, ಯೋಜನಾಧಿಕಾರಿ ಎಸ್ ಜಿ ರಾಮಚಂದ್ರ, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರೀಯಾ ಚವ್ಹಾಣ ಹಾಗೂ ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ್ ಮದ್ರಿಕಿ, ಸದಾನಂದ ಕುಂಬಾರ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ಇಬ್ರಾಹಿಂಪುರ ಕಾರ್ಯಕ್ರಮ ನಿರೂಪಿಸಿದರು ಚಂದ್ರಶೇಖರ ಹಾವೇರಿ ಸ್ವಾಗತಿಸಿದರು, ಇಸ್ಮಾಯಿಲ್ ಬಿ ವಂದಿಸಿದರು, ಭಿಮಶಾ ಗಚ್ಚಿನಮನಿ, ತಿಪ್ಪಣ್ಣ ಹೆಡಗಿಮದ್ರಿ, ವಿಜಯಕುಮಾರ ಕಂಟಿಕರ, ರೇಶ್ಮೆ ಇಬ್ರಾಹಿಂಪುರ ತೇಜಸ ಆರ್. ಇಬ್ರಾಹಿಂಪುರ, ಶಿವಕುಮಾರ ಪೂಜಾರಿ, ಮಂಜುನಾಥ ಇಬ್ರಾಹಿಂಪುರ ಹಾಗೂ ಅನೇಕರು ಉಪಸ್ಥಿತರಿದ್ದರು.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ