56 ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ನಿಮಿತ್ತ ಗೋಪಾಲ ಕಾವಲಿ ಹಾಗೂ ರಥೋತ್ಸವಕ್ಕೆ ಚಂದು ಪಾಟೀಲ ಚಾಲನೆ

56 ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ನಿಮಿತ್ತ ಗೋಪಾಲ ಕಾವಲಿ ಹಾಗೂ ರಥೋತ್ಸವಕ್ಕೆ ಚಂದು ಪಾಟೀಲ ಚಾಲನೆ

56 ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ನಿಮಿತ್ತ ಗೋಪಾಲ ಕಾವಲಿ ಹಾಗೂ ರಥೋತ್ಸವಕ್ಕೆ ಚಂದು ಪಾಟೀಲ ಚಾಲನೆ

ಕಲಬುರಗಿ: ಇಲ್ಲಿನ ವಿದ್ಯಾನಗರ ಶ್ರೀ ಕೃಷ್ಣ ಮಂದಿರ ಹಾಗೂ ಶ್ರೀ ಹನುಮ ಭೀಮ ಮಧ್ವರ ಮಂದಿರ , ಅಖಿಲ ಭಾರತ ಮಧ್ವ ಮಹಾ ಮಂಡಲ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲಮಹಾಸಂಸ್ತಾನ, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಅಜ್ಞಾನುಸಾರವಾಗಿ ಕಲಬುರ್ಗಿಯ ವಿದ್ಯಾನಗರ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅದ್ದೂರಿಯಾಗಿ ಅಗಸ್ಟ್ 16 ರಿಂದ 17 ರವರೆಗೆ .ಆಚರಿಸಲಾಯಿತು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ದಿ. 16 ರಂದು ಸಾಯಂಕಾಲ ಪಂಡಿತ ಗೋಪಾಲ ಆಚಾರ್ಯರಿಂದ ಪ್ರವಚನ, ಕೋಲಾಟ, ವರ್ಣಸಿಂಧು ಕಲಾ ತಂಡದಿAದ ಭರತನಾಟ್ಯ , ವಿವಿಧ ಮಂಡಳಿಗಳಿAದ ಭಜನೆ ನಂತರ ಶ್ರೀ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ ನಡೆಯಿತು.

ದಿ.17 ರಂದು ಸಾಯಂಕಾಲ ಗೋಪಾಲ ಕಾವಲಿ ಹಾಗೂ ರಥೋತ್ಸವಕ್ಕೆ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಡಿತ ಗೋಪಾಲ್ ಆಚಾರ್ ಅಕಮಂಚಿ, ಶ್ರೀ ಕೃಷ್ಣ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷರಾದ ರಂಗನಾಥ ದೇಸಾಯಿ, ಕಾರ್ಯದರ್ಶಿಗಳಾದ ಕಿಶೋರ ದೇಶಪಾಂಡೆ, ವಿದ್ಯಾಸಾಗರ ಕುಲಕರ್ಣಿ ರೇವೂರ್, ಮಂಜುನಾಥ ಕುಲಕರ್ಣಿ, ರಾಮ ದಾಸ, ಪ್ರಹ್ಲಾದ ನಾಡಗೌಡ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಭಕ್ತರು ಇದ್ದರು

.