ಇಂದು ಬೃಹತ್ ಹಿಂದು ಸಮ್ಮೇಳನ ಮತ್ತು ಶೋಭಾ ಯಾತ್ರೆ

ಇಂದು ಬೃಹತ್ ಹಿಂದು ಸಮ್ಮೇಳನ ಮತ್ತು ಶೋಭಾ ಯಾತ್ರೆ

ಇಂದು ಬೃಹತ್ ಹಿಂದು ಸಮ್ಮೇಳನ ಮತ್ತು ಶೋಭಾ ಯಾತ್ರೆ  

ಕಮಲನಗರ: ಪಟ್ಟಣದಲ್ಲಿ ಹಿಂದು ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಇಂದು ನಡೆಯುವ ಬೃಹತ್ ಶೋಭಾಯಾತ್ರೆ ಮತ್ತು ಹಿಂದು ಸಮ್ಮೇಳನ ಕಾರ್ಯಕ್ರಮಕ್ಕೆ ಪಟ್ಟಣದ ಹಿಂದೂ ಸಮುದಾಯಗಳ ಯಜಮಾನರು ಮುಖಂಡರನ್ನು ಕರಪತ್ರ ನೀಡಿ ಸ್ವಾಗತ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು 

ಸಮಿತಿಯ ಅಧ್ಯಕ್ಷ ಶಿವಾನಂದ ವಡ್ಡೆ ಮಾತನಾಡಿ, ಕಮಲನಗರ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಚನ್ನಬಸವ ಹಿರೇಮಠ ಸಂಸ್ಥಾನ ಮಠದಿಂದ ಶೋಭಾ ಯಾತ್ರೆ ಪ್ರಾರಂಭವಾಗಿ ಸಂಜೆ 5ಗಂಟೆಗೆ ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಆವರಣಕ್ಕೆ ಬಂದಿರುತ್ತದೆ. ಇಲ್ಲಿ ಕಾರ್ಯಕ್ರಮ ವೇದಿಕೆ ಇಡಲಾಗಿದೆ.ಈ ಕಾರ್ಯಕ್ರಮದ ಗುರುಗಳಾದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ರಾಮ ಚೈತನ್ಯ ಮಹಾರಾಜ ದಿವ್ಯ ಸಾನ್ನಿಧ್ಯ ವಹಿಸುವರು, ಹಾಗೂ ಸುರೇಶ ನಿಂಗಪ್ಪನವರ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. 

ಈ ಶೋಭಾ ಯಾತ್ರೆಯಲ್ಲಿ ಎಲ್ಲಾ ಸಮಾಜದ ಜನರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ವರ್ತಕರ ಸಂಘದವರು, ಆಟೋ ಚಾಲಕ ಸಂಘದವರು, ಹೀಗೆ ಎಲ್ಲ ವರ್ಗದ ಮುಖಂಡರುಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಜಿಲ್ಲಾ ಸಂಚಾಲಕ ಕಿರಣಜೀ ಮಾತನಾಡಿ, ಹಿಂದೂ ಸಮ್ಮೇಳನ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಎಕತೆ, ಸಂಸ್ಕøತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮಭಾವನೆ ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ. ಅದಲ್ಲದೇ ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ, ಪ್ರಭೋಧನೆ, ಪರಿಸರ ಸಂರಕ್ಷಣೆ , ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಇವುಗಳ ಮುಖಾಂತರ ಹಿಂದು ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ಪರಮವೈಭವ ದೇಶವಾಗಿಸುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ಗುಂಡಪ್ಪ ದಾನಾ, ಸುರೇಶ ಚಾಂಗುಣೆ, ಬಾಲಾಜಿ ತೆಲಂಗ, ಕಾರ್ಯದರ್ಶಿ ವಿಷು ಸಿಂಧೆ, ಸಹಕಾರ್ಯದರ್ಶಿ ಶಿವಕುಮಾರ ಜುಲ್ಫೆ, ಖಜಾಂಚಿ ಶಿವಕಾಂತಪ್ಪ ಹಣಮಶೇಟ್ಟಿ, ಸಂಯೋಜಕ ಸಂತೋಷ ಸೋಲಾಪುರೆ, ಸಹ ಸಂಯೋಜಕ ಪ್ರಶಾಂತ ಖಾನಾಪುರೆ, ಸದಸ್ಯ ವಿಶ್ವನಾಥ ಡೊಣಗಾಪುರೆ, ವೆಂಕಟ ಕಾಂಬಳೆ, ದಿಪಕ ಟೋಕರೆ, ಸುಭಾಷ ರಾಠೋಡ್, ಲಿಂಗಾನಂದ ಮಹಾಜನ. ಎಸ್.ವ್ಹಿ ಬಿರಾದಾರ ಮುಂತಾದವರು ಇದ್ದರು.