ಭಾಗಿರಥಿ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ, “ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ದಿನ”

ಭಾಗಿರಥಿ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ, “ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ದಿನ”

ಭಾಗಿರಥಿ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ,

“ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ದಿನ

ಕಮಲನಗರ: ಖಂಡ ಭಾರತ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ, ತ್ಯಾಗ, ಬಲಿದಾನ ನೆನಪಿಸುವ ಮಹತ್ವದ ದಿನ ಇದಾಗಿದೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ 79ನೇ ಸ್ವಾತಂತ್ರೋತ್ಸವ ಮತ್ತು ಸಂಗೋಳಿ ರಾಯಣ್ಣ ಜಯಂತಿ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ದೇಶಕ್ಕೆ ಸ್ವಾತಂತ್ರ್ಯ ಕರ್ನಾಟಕದ ಹೋರಾಟಗಾರರಲ್ಲಿ ಕಿತ್ತೂರು ಚೆನ್ನಮ್ಮ, ಸಂಗೋಳಿ ರಾಯಣ್ಣ, ಕಾರ್ನಾಡ್ ಸದಾಶಿವರಾವ್, ಕಮಲಾದೆವಿ ಚಟ್ಟೋಪಾಧ್ಯಾಯ, ಅಬ್ಬಕ್ಕ ರಾಣಿ,, ಮಂಡರಗಿ ಭೀಮರಾಯ ಮತ್ತು ಅನೇಕರ ತ್ಯಾಗ ಬಲಿದಾನದಿಂದ ಲಭಿಸಿದೆ ಎಂದರು.

ಭಾಗಿರಥಿ ಪಬ್ಲಿಕ್ ಶಾಲೆ ಸಲಹಾ ಸಮಿತಿ ಅಧ್ಯಕ್ಷ ಅಮೃತರಾವ ವಡಗಾಂವೆ ಮಾತನಾಡಿ, ಸಂಗೋಳಿ ರಾಯಣ್ಣ ಅಪ್ರತಿಮ ದೇಶಭಕ್ತ. ಅವರ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದೆ. ಅತಿ ಕಿರಿಯ ವಯಸ್ಸಿನಲ್ಲೇ ಸಂಗೋಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿ ಬ್ರಿಟಿಷರಿಗೆ ಸಿಂಗಸ್ವಪ್ನರಾಗಿದ್ದರು. ನೇತಾಜಿ ಸುಭಾಷಚಂದ್ರ ಬೋಸ್ ಅವರಂತೆಯೇರಾಯಣ್ಣ ಹೆಸರು ಕೇಳಿದಾಕ್ಷಣ ಮೈ ಮನಸ್ಸು ರೋಮಾಚನವಾಗುತ್ತದೆ. ದೇಶಭಕ್ತಿ ಪುಟಿದೇಳುತ್ತದೆ ಎಂದು ಹೇಳಿದರು.

ವಿವೇಕಾನಂದ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಿರಾದಾರ, ಉಪಾಧ್ಯಕ್ಷೆ ಅಂಬಿಕಾ ಬಿರಾದಾರ, ಪಾಲಕ ಪ್ರತಿನಿಧಿ ಸುನೀಲಕುಮಾರ, ಸಲಹಾ ಸಮಿತಿ ಸದಸ್ಯ ನಾಗನಾಥ ಕನಾಡೆ ಸ್ವಾಮಿ, ಸುದೀಪ ತರನಲ್ಳಿ, ಮಲ್ಲಿಕಾರ್ಜುನ ಡಿಗ್ಗಿಕರ್, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ, ರಾಜಶ್ರೀ, ಸಂಗೀತಾ, ಶೀತಲ ಹಂಗರಗೆ, ಅಚಿಜಲಿ ಕಾಂಬಳೆ, ಅಂಬಿಕಾ ಬೆಳಕುಣಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು. 

ಧ್ವಜಾರೋಹಣ ನಂತರ ಶಾಲೆ ಮುದ್ದು ಮಕ್ಕಳಿಂದ ಸಾಂಸ್ಕøತಿಕ ಚಟುವಟಿಕೆ ನಡೆಸಿಕೊಟ್ಟರು. ನಿಬಂಧ, ಭಾಷಣ ಸ್ಪರ್ಧೆ, ರಾಖಿ ತೈಯಾರಿಸುವಿಕೆ ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.