ಗಂಡಸರಿಗೆ ಸೀರೆ ತೊಡಿಸಿ ನೆರೆಗಾ ಹಣ ಲೂಟಿ – ಯಾದಗಿರಿ ತಾಲೂಕಿನಲ್ಲಿ ನಯವಂಚನೆ ಬೆಳಕಿಗೆ

ಗಂಡಸರಿಗೆ ಸೀರೆ ತೊಡಿಸಿ ನೆರೆಗಾ ಹಣ ಲೂಟಿ – ಯಾದಗಿರಿ ತಾಲೂಕಿನಲ್ಲಿ ನಯವಂಚನೆ ಬೆಳಕಿಗೆ
ವರದಿ: ಜೆಟ್ಟೆಪ್ಪ ಎಸ. ಪೂಜಾರಿ
ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಅಡಿಯಲ್ಲಿ ಹಣ ಲಪಟಾಯಿಸಲು ಪುರುಷರಿಗೆ ಸೀರೆ ತೊಡಿಸಿ ಮಹಿಳೆಯರ ಹೆಸರಿನಲ್ಲಿ ಕೆಲಸ ಮಾಡಿದಂತೆ ತೋರಿಸಿ ಫೋಟೋ ಅಪ್ಲೋಡ್ ಮಾಡಿರುವ ಶೋಕಾಂತ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಲ್ಹಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರೊಬ್ಬರ ಜಮೀನಿನಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಾಲೆಯ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಕಾರ್ಯಕ್ಕೆ ನೇಮಕಗೊಂಡ ಕೂಲಿ ಕಾರ್ಮಿಕರ ಫೋಟೋಗಳನ್ನು ಎಂಎಂಎಸ್ (MMS) ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವ ನಿಯಮವಿದೆ. ಆದರೆ, ಹಣ ಲಪಟಾಯಿಸಲು ಪುರುಷರಿಗೆ ಸೀರೆ ತೊಡಿಸಿ ಮಹಿಳೆಯರಂತೆ ತೋರಿಸಿ ಕಾಮಗಾರಿ ದಾಖಲೆ ಸೃಷ್ಟಿಸಲಾಗಿದ್ದು, ಗ್ರಾಮ ಪಂಚಾಯತ್ ಹೊರಗುತ್ತಿಗೆ ನೌಕರನೊಬ್ಬ ಈ ಕಾರ್ಯದಲ್ಲಿ ಬೆಂಬಲ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ನಕಲಿ ದಾಖಲೆಗಳ ಆಧಾರದಲ್ಲಿ ಕೂಲಿ ಕಾರ್ಮಿಕರ ವೇತನ ಪಾವತಿ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಪಂಚಾಯತ್ ಮೇಲಾಧಿಕಾರಿಗಳಿಗೆ ನಿಜಾಂಶ ಬೆಳಕಿಗೆ ಬಂದಿದೆ. ತನಿಖೆಯ ಬಳಿಕ ಆರೋಪಿತ ಹೊರಗುತ್ತಿಗೆ ನೌಕರನನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.