ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ನಗರ ಘಟಕ ಅಧ್ಯಕ್ಷರಾಗಿ ನೇಮಕ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ನಗರ ಘಟಕ ಅಧ್ಯಕ್ಷರಾಗಿ ನೇಮಕ
ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ. ಶಹಾಪೂರ ತಾಲೂಕಿನ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಕಾಂತ ಪಾಟೀಲ ಮದ್ದರಕಿ ಅವರ ಅಧ್ಯಕ್ಷತೆಯಲ್ಲಿ
ತಾಲೂಕ ಅಧ್ಯಕ್ಷರಾದ ಮಾಳಿಂಗರಾಯ ಕಾರಗೋoಡ ಅವರ ನೇತೃತ್ವದಲ್ಲಿ ಯಡ್ರಾಮಿ ತಾಲೂಕಿನ ನಗರ ಘಟಕದ ಅಧ್ಯಕ್ಷರನ್ನಾಗಿ ಶ್ರೀ ಯಲ್ಲಾಲಿಂಗ ತಂದೆ ದೊಡ್ಡಪ್ಪ ಸಾ: ಹರನಾಳ ಬಿ ತಾ: ಯಡ್ರಾಮಿ ಜಿ. ಕಲಬುರಗಿ ಇವರನ್ನ ನೇಮಕ ಮಾಡಲಾಯಿತು. ಅದೇ ರೀತಿಯಾಗಿ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ತಾತ್ವವಿಕ ವಿಚಾರಣೆ ಮತ್ತು ತತ್ವ ಸಿದ್ಧಾಂತಗಳನು ಚಾಚು ತಪ್ಪದೆ ಪಾಲನೆ ಮಾಡಬೇಕೆಂದು ಹಾಗೂ ಕಾಯ, ವಾಚ.ಮನಸ್ಸಾ ಶುದ್ಧವಾಗಿ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯದ ಸಮಸ್ತ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಡಬೇಕೆಂದು ಆದೇಶಿಸಿ ನಗರ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಎಂದು ಪತ್ರಿಕಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಜೆಟ್ಟೆಪ್ಪ ಎಸ ಪೂಜಾರಿ