ಟೆಂಗಳಿ ಗ್ರಾಮದ ಅಗಸಿ ರಿಪೇರಿ ಕೀರ್ತಿಯ ಹಂತದಲ್ಲೇ ಹೃದಯಾಘಾತದಿಂದ ಎಇಇ ನಾಗಮೂರ್ತಿ ಶೀಲವಂತ ನಿಧನ

ಟೆಂಗಳಿ ಗ್ರಾಮದ ಅಗಸಿ ರಿಪೇರಿ ಕೀರ್ತಿಯ ಹಂತದಲ್ಲೇ ಹೃದಯಾಘಾತದಿಂದ ಎಇಇ ನಾಗಮೂರ್ತಿ ಶೀಲವಂತ ನಿಧನ

ಟೆಂಗಳಿ ಗ್ರಾಮದ ಅಗಸಿ ರಿಪೇರಿ ಕೀರ್ತಿಯ ಹಂತದಲ್ಲೇ ಹೃದಯಾಘಾತದಿಂದ ಎಇಇ ನಾಗಮೂರ್ತಿ ಶೀಲವಂತ ನಿಧನ

ಕಾಳಗಿ/ಟೆಂಗಳಿ : ಟೆಂಗಳಿ ಗ್ರಾಮದ ಅಗಸಿ ರಿಪೇರಿ ಕಾರ್ಯದ ಮೂಲಕ ಜನಮನ್ನಣೆ ಗಳಿಸುವ ಹಂತದಲ್ಲಿದ್ದ ಕಾಳಗಿ ತಾಲೂಕಿನ ಎಇಇ (ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್) ನಾಗಮೂರ್ತಿ ಶೀಲವಂತ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾ ಪಂಚಾಯತ್ ಸಿಇಓ ಅವರ ಆದೇಶದ ಮೇರೆಗೆ ಟೆಂಗಳಿ ಗ್ರಾಮದ ಅಗಸಿ ರಿಪೇರಿಗಾಗಿ ನಾಗಮೂರ್ತಿ ಶೀಲವಂತ ಅವರು ಎಸ್ಟಿಮೇಟ್ ತಯಾರಿಸಿ, ಕಾರ್ಯಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರು. ಇನ್ನೇನು ಕೆಲಸ ಆರಂಭವಾಗಬೇಕಿದ್ದ ಈ ಮಹತ್ವದ ಸಂದರ್ಭದಲ್ಲಿ ಅವರ ಅಕಾಲಿಕ ನಿಧನವು ಟೆಂಗಳಿ ಗ್ರಾಮಸ್ಥರಿಗೆ ಹಾಗೂ ಸಹೋದ್ಯೋಗಿಗಳಿಗೆ ತೀವ್ರ ದುಃಖವನ್ನುಂಟುಮಾಡಿದೆ.

ನಾಗಮೂರ್ತಿ ಶೀಲವಂತ ಅವರು ಸಾವಿರಾರು ಪದವೀಧರ ಬ್ಯಾಕ್‌ಲಾಗ್ ನೌಕರಿ ಹೋರಾಟದ ಮುಂಚೂಣಿ ನಾಯಕನಾಗಿಯೂ ಗುರುತಿಸಿಕೊಂಡಿದ್ದರು. ಜನಪದ ಕಾಳಜಿ, ಸಾಮಾಜಿಕ ನ್ಯಾಯದ ಪರ ಧೀಮಂತ ವ್ಯಕ್ತಿತ್ವ ಅವರದ್ದು. ಸದಾ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರ ಸೇವೆ ಸ್ಮರಣೀಯವಾಗಿದೆ.

ದಿನಾಂಕ : 28-01-2028 ರಂದು ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ

ಮೃತರ ಅಂತ್ಯಕ್ರಿಯೆಯು ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮದ ಸ್ವಂತ ಹೊಲದಲ್ಲಿ ಇಂದು ದಿನಾಂಕ : 29-01-2028 ರಂದು ಮಧ್ಯಾಹ್ನ 3:00 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವರಾಜ್ ಅಂಡಗಿ ಸೇರಿದಂತೆ  ಅವರ ನಿಧನಕ್ಕೆ ವಿವಿಧ ಸಂಘಟನೆಗಳು, ಹೋರಾಟಗಾರರು ಹಾಗೂ ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.