ಶಹಾಪುರ|| ಏಪ್ರಿಲ್ 12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ || ಶ್ರೀ ಸಾಯಿ ಆಸ್ಪತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜನೆ

ಶಹಾಪುರ|| ಏಪ್ರಿಲ್ 12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ || ಶ್ರೀ ಸಾಯಿ ಆಸ್ಪತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜನೆ

ಏಪ್ರಿಲ್ 12 ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಹಾಪುರ : ನಗರದ ಬೀದರ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರತಿಷ್ಠಿತ ಶ್ರೀ ಸಾಯಿ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಲುಬು,ಕೀಲು,ಮೂಳೆಗಳ ತಜ್ಞರಾದ ಡಾ.ಶರಣಗೌಡ ಹೊನ್ನಗೋಳ ಪ್ರಕಟಣೆಗೆ ತಿಳಿಸಿದ್ದಾರೆ.

ಬೆನ್ನು ನೋವು,ಮೊಣಕಾಲು ನೋವುಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೋರೋನಾ ರೆಮಿಡೀಸ್ ಕಂಪನಿಯ ವತಿಯಿಂದ ಕೀಲು,ಎಲುಬು,ಮೂಳೆಗಳ (ಬಿ ಎಂ ಡಿ) ಬೋನ್ ಮಾಸ್ ಡೆನ್ಸಿಟಿ ಅಂದರೆ ಮೂಳೆಯ ಖನಿಜ ಸಾಂದ್ರತೆ ಪರೀಕ್ಷೆಯನ್ನು ಉಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಆದ್ದರಿಂದ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊರೊನೊ ರೆಮಿಡೀಸ್ ಪ್ರತಿನಿಧಿ ವೀರಭದ್ರಯ್ಯ ಹಯ್ಯಾಳ ತಿಳಿಸಿದ್ದಾರೆ.

ಸಾರ್ವಜನಿಕರು ಅಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ವರೆಗೆ ಶ್ರೀಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ತಪಾಸಣೆ ಪಡೆದುಕೊಳ್ಳಬಹುದು,ಗಂಭೀರ ಸ್ವರೂಪದ ಕಾಯಿಲೆಗಳು ಪತ್ತೆ ಮಾಡಿದ ಸಂದರ್ಭದಲ್ಲಿ ಅವಶ್ಯವಿದ್ದಾಗ ಎಕ್ಸರೇ ಮತ್ತು ರಕ್ತ ಪರೀಕ್ಷೆಯಲ್ಲಿ ಶೇ 20 % ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ ಎಂದು ಮಕ್ಕಳ ತಜ್ಞೆ ಡಾ.ಸಾವಿತ್ರಿ ಎಸ್.ಹೊನ್ನಗೋಳ ತಿಳಿಸಿದ್ದಾರೆ. ಪಟ್ಟಣದ ಮುದ್ನಾಳ ಹೀರೋ ಹೋಂಡಾ ಶೋ ರೂಮ್ ಎದುರುಗಡೆ ಕಾಮಾ ಕಾಂಪ್ಲೆಕ್ಸ್ ಶ್ರೀಸಾಯಿ ಆಸ್ಪತ್ರೆ ಶಹಪುರ,ಹೆಚ್ಚಿನ ಮಾಹಿತಿಗಾಗಿ,74200 10096 / 99458 35410 ಸಂಪರ್ಕಿಸಿ