ನೇಕಾರ ಸಮುದಾಯದ ಏಳಿಗೆಗಾಗಿ ಯುವಕರು ಮುಂದಾಗಬೇಕು ಚಂದ್ರಶೇಖರ ಕರೆ

ನೇಕಾರ ಸಮುದಾಯದ ಏಳಿಗೆಗಾಗಿ ಯುವಕರು ಮುಂದಾಗಬೇಕು ಚಂದ್ರಶೇಖರ ಕರೆ

ನೇಕಾರ ಸಮುದಾಯದ ಏಳಿಗೆಗಾಗಿ ಯುವಕರು ಮುಂದಾಗಬೇಕು ಚಂದ್ರಶೇಖರ ಕರೆ

ಇಂದು . 9-10-24 ಕಲಬುರಗಿ ನಗರದ ನ್ಯಾಯಾಲಯದ ಹೊಸ ಸಂಕಿರಣದಲ್ಲಿ ಆಯೋಜಿಸಿದ ನೇಕಾರ ಸಮುದಾಯದ ನ್ಯಾಯವಾದಿಗಳ ಸಭೆ ಜರುಗಿತು.

 ಜಿಲ್ಲಾ ನೇಕಾರರ ಒಕ್ಕೂಟದ ಗೌರವಾಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಶ್ರೀ ಚಂದ್ರಶೇಖರ್ ಸುಲ್ತಾನಪೂರ ಅವರು ಸಭೆಯಲ್ಲಿ ಮಾತನಾಡುತ್ತಾ ನೇಕಾರರ ಸಂಘಟಿತ ಶಕ್ತಿ ಒಗ್ಗೂಡಿಸಿ ನಾನು 30 ವರ್ಷಗಳ ಕಾಲ ಸಮಾಜ ಸೇವೆ ಮಾಡುತ್ತಿದ್ದೆನೆ.ಅದರ ಫಲವಾಗಿ ಒಂದು ಕೋಟಿ ರಸ್ತೆ ಅಭಿವೃದ್ಧಿ ಯೋಜನೆ ದೇವರ ದಾಸಿಮಯ್ಯ ನಗರಕ್ಕೆ ದೊರಕಿಸಿದ್ದೇನೆ ನಗರದಲ್ಲಿ ಒಂದು ನೂತನ ಸಮುದಾಯ ಭವನಕ್ಕೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು,

 ನಮ್ಮ ಸಮಾಜಕ್ಕೆ ಸರಕಾರಿಯ 2 ಎಕರೆ ಜಮೀನು ನಮ್ಮ ಧರ್ಮ ಗುರು ಶ್ರೀ ದಾಸಿಮಯ್ಯ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಪಡೆದುಕೊಂಡು, ಉಳಿದ 11 ಎಕರೆ ಭೂಮಿಯನ್ನು ಕಾನೂನಾತ್ಮಕವಾಗಿ ನೋಂದಣಿ ಗೊಳಿಸಿ, ನಮ್ಮ ಸಮುದಾಯದ ಅನಾಥ ಆಶ್ರಮ,ಸಾಂಸ್ಕೃತಿಕ, ಸಾಹಿತ್ಯ, ಶಿಕ್ಷಣ ಸಂಸ್ಥೆ ,ವಸತಿ ನಿಲಯ ಹುಟ್ಟು ಹಾಕಲು ನಿಮ್ಮಂತಹ ನಿಷ್ಠಾವಂತ ಸೇವಕರ ಸಮಿತಿ ರಚಿಸಲು ತಾವೆಲ್ಲರೂ ಭಾಗಿಯಾಗಬೇಕೆಂದು ತಿಳಿಸಿದರು. 

ಸಭೆಯಲ್ಲಿ ಹಿರಿಯ ವಕೀಲರಾದ ರಾಜಗೋಪಾಲ ಭಂಡಾರಿ, ಸಂತೋಷ ಗುರುಮೀಟಕಲ್, ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ನೇಕಾರ ಸಮಾಜದ ವಕೀಲರು ಮತ್ತು ಡಾ. ಸಾಧಿಕ ಶಾ, ಪತ್ರಿಕಾ ಛಾಯಾಗ್ರಾಹಕ ರಾಜು ಕೋಷ್ಟಿ ಇತರರು ಉಪಸ್ಥಿತರಿದ್ದರು.