ವೀರ ವನಿತೆ ಓಬವ್ವಳ.ದೈರ್ಯ ಸಾಹಸ ಇಂದಿನ ಮಹಿಳೆಯರಿಗೆ ಮಾದರಿ ಉಪನ್ಯಾಸಕಿ ಸವೀತಾ ಬಿ ನಾಸಿ

ವೀರ ವನಿತೆ ಓಬವ್ವಳ.ದೈರ್ಯ ಸಾಹಸ ಇಂದಿನ ಮಹಿಳೆಯರಿಗೆ ಮಾದರಿ ಉಪನ್ಯಾಸಕಿ ಸವೀತಾ ಬಿ ನಾಸಿ

ವೀರ ವನಿತೆ ಓಬವ್ವಳ.ದೈರ್ಯ ಸಾಹಸ ಇಂದಿನ ಮಹಿಳೆಯರಿಗೆ ಮಾದರಿ ಉಪನ್ಯಾಸಕಿ ಸವೀತಾ ಬಿ ನಾಸಿ

ಕಲಬುರಗಿ : ಹೆಣ್ಣು ಅಬಲೆಯಲ್ಲ ಗಂಡಿನ ಸರಾಸರಿ ಹೋರಾಡೋ ಶಕ್ತಿ ಇದೆ ಅದಕ್ಕೆ ವೀರ ವನತೆ ಒನಕೆ ಓಬವ್ವ ನಮಗೆ ಮಾದರಿಯಾಗಿದ್ದಾಳೆ ಎಂದು ಜೇವರ್ಗಿ ಕಾಲೋನಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಮಾಜ ಶಾಸ್ತ್ರ ಉಪನ್ಯಾಸಕಿ ಸವೀತಾ ಬಿ.ನಾಸಿ ಹೇಳಿದರು

ಸೋಮವಾರ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸೋಮವಾರದಂದು ಇಲ್ಲಿನ ವೀರ ವನಿತೆ ಒನಕೆ ಓಬವ್ವ ಜಯಂತಿ 

ಕಾರ್ಯಕ್ರಮದಲ್ಲಿ ಭಾವಚಿತ್ತಕ್ಕೆ ಪುಷ್ಪ ನಮನ ಸಲ್ಲಿಸಿ.ವಿಶೇಷ ಉಪನ್ಯಾಸ ನೀಡಿದರು.

 ಚಿತ್ರದುರ್ಗದ ಕೋಟಿಗೆ ದೊಡ್ಡ. ಇತಿಹಾಸವಿದ್ದು ಅದು ವೀರ ನಾರಿ ಓಬವ್ವಳಿಂದ ಮತ್ತಷ್ಟು ಪ್ರಖ್ಯಾತ ಪಡೆಯಿತು

    ಓಬವ್ವನ ವಿಶೇಷತೆ : ಯುದ್ಧ ಎಂದರೆ ಇಬ್ಬರು ರಾಜರಗಳ ನಡುವೆ ನಡೆಯುವಂತಹದ್ದು ಆದರೆ ಈ ಮಹಿಳೆ ತನ್ನ ಗಂಡ ಮಾವ ಮಗನ ಒಂದು ಚಿಕ್ಕ ಸಂಸಾರದಲ್ಲಿ ಇದ್ದವಳು ಆಕೆಗೆ ಇದರ ಬಗ್ಗೆ ಇಂತ್ತಿಚ್ಚು ಜ್ಞಾನ ವಿಲ್ಲ. ಸಮಯಕ್ಕೆ ಸರಿಯಾಗಿ ಚಿತ್ರಕೋಟೆ ತನ್ನ ಊರು ತನ್ನ ಸ್ವತ್ತು ಎಂದು ಬಿಟ್ಟರೆ ಮತ್ತೇನ್ನು ಗೋತ್ತಿಲ್ಲ ಅವಳಿಗೆ ಹೈದಾರಲಿ ಸೇನಾನಿಗಳು ಆ ಕಳ್ಳ ಕಿಂಡಿಯಲ್ಲಿ ಬಂದಿದ್ದು ಕಂಡು ಮನೆಗೆ ಓಡಿ ಹೋಗಿ ಓನಕೆ ತಂದು ಸೈನಿಕರನ್ನು ಕೊಂದು ಹಾಕುತ್ತಾಳೆ ಓಬವ್ವಳ ಧೈರ್ಯ ಸಾಹಸ ಮೆಚ್ಚಿ ಮದಕರಿ ರಾಜ ಒನಕೆ ಓಬವ್ವನಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಚಿತ್ರದುರ್ಗ ಕೋಟೆಯ ರಕ್ಷಿಸಿದ ವೀರ ಓಬವ್ವಳ.ನೆನಪಿಗಾಗಿ ಆ ಕಿಂಡಿಗೆ ಅವಳದೇ ಹೆಸರು ಇಟ್ಟರು ಎಂದು ಹೇಳಿದರು.

ಜಿಲ್ಲಾಧಿಕಾರಿ ಕಾರ್ಯಾಲಯ ಸಹಾಯಕ ನಿರ್ದೇಶಕರು, ಶಿವಶರಣಪ್ಪ ದನ್ನಿ, ಮಾತನಾಡಿ ಅವರು ಚಿತ್ರದುರ್ಗ ಒಂದು ಸಣ್ಣ ಕೋಟೆ ಇಲ್ಲಿ ಸಣ್ಣ ಸಣ್ಣ ಕುಟುಂಬಗಳು ವಾಸಿಸುತ್ತವೆ. ಇಲ್ಲಿ ಇರುವ ಜನರು ಪ್ರಾಮಾಣಿಕ ರಾಷ್ಟ್ರಭಕ್ತಿ ಹೊಂದಿದವರು ಎಂದರು

 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 ಕಾಲೇಜ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಪ್ರಥಮ ಬಹುಮಾನ ಲಾಲ್ ಬಿ, ದ್ವಿತೀಯ ಬಹುಮಾನ ಅನೀಕಾ ಸುಬಹೇನಿಯಾ, ಸ್ನೇಹಾ ಮತ್ತು ಸೃಷ್ಠಿ ತೃತೀಯ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಪಂಪಣ್ಣಾ ಗ್ರೇಡ್-೧ ತಹಶೀಲ್ದಾರ ಉದ್ಘಾಟಿಸಿದರು. ಶಿವಶರಣಪ್ಪ ಮೂಳೆಗಾಂವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ದತ್ತಪ್ಪಾ ಸಾಗನೂರ, ನಂದಿನಿ ಸನ್ಬಾಲ್, ಸಂಪತ್ತ ಒಳಕೇರ, ಅರುಣ ಭರಣಿ, ನರಸಪ್ಪ, ಮಂಜುನಾಥ್ ನಾಲವಾರಕರ ಉಪಸ್ಥಿತರಿದ್ದರು.