ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ - ಹಾರಕೂಡ ಶ್ರೀ

ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ - ಹಾರಕೂಡ ಶ್ರೀ

ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ - ಹಾರಕೂಡ ಶ್ರೀ

 ಸೃಷ್ಟಿಕರ್ತ ಪರಮಾತ್ಮನನ್ನು ಕುರಿತು ಬಹು ಎತ್ತರದ ಭಕ್ತಿಯ ಮನಸ್ಸು ಇದ್ದರೆ ಅಂಥಹವರಿಂದ ಸಮಾಜದಲ್ಲಿ ಮಹತ್ಕಾರ್ಯಗಳು ಘಟಿಸುತ್ತವೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

 ತಾಲೂಕಿನ ಬೇಡರವಾಡಿ (U) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ವೀರ ಹನುಮಾನ ದೇವಸ್ಥಾನದ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನಸ್ಸು ಶುದ್ಧವಾದಷ್ಟು ಸತ್ಕಾರ್ಯಗಳು ಅರಳುತ್ತವೆ.

 ಹೀಗಾಗಿ ಮನಸ್ಸಿನ ಸುದ್ದಿಕರಣಕ್ಕಾಗಿ ಸಾಧು ಸಂತರ ಸತ್ಸಂಗದಲ್ಲಿ ಮನಸಾರೆ ತೊಡಗಿಸಿಕೊಳ್ಳಬೇಕು.

 ಸುದೀರ್ಘ ಕಾಲದ ಪೂಜೆ ಪುನಸ್ಕಾರಗಳಿಗಿಂತಲೂ ಒಂದು ಕ್ಷಣದ ಗುರು ಸಾನಿಧ್ಯ ಶ್ರೇಷ್ಠವಾಗಿರುತ್ತದೆ.

 ಗುರು ಗೋವಿಂದನ ಅನುಗ್ರಹ ಪಡೆಯಬೇಕಾದರೆ, ಹೆತ್ತ ತಾಯಿಯನ್ನು ಅತ್ಯಂತ ಗೌರವದಿಂದ ಕಾಣಬೇಕು.

 ದೈವತ್ವದ ಗಣಿಯಾಗಿರುವ ತಾಯಿಯನ್ನು ಪೂಜ್ಯನೀಯವಾಗಿ ನೋಡಿಕೊಳ್ಳುವವರ ಬಾಳು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ನುಡಿದರು.

 ಸಮಸ್ತ ಭಾರತೀಯರ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಭಕ್ತ ವೀರ ಹನುಮಾನ ಮಂದಿರ ನಿರ್ಮಿಸಿ ಕಳಸಾರೋಹಣ ಹಾಡಿರುವ ಬೇಡರವಾಡಿ (ಯು) ಗ್ರಾಮದ ಎಲ್ಲ ಜನತೆಯಲ್ಲಿ ಆಂಜನೇಯ ಸ್ವಾಮಿಯ ಆದರ್ಶಗಳು ಬೆಳೆದು ಬರುವಂತಾಗಲಿ ಹಾಗೂ ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.

ಗೋವಿಂದ ಗುರೂಜಿ ಸ್ವಾಗತಿಸಿ ನಿರೂಪಣೆ ಮಾಡಿದರು.

ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. 

ಆಶಿತೋಷ ಮಹಾರಾಜ, ಅವಧೂತಪುರಿ ಮಹಾರಾಜ, ಧನರಾಜ ಭೋಸಲೆ, ಮುಂತಾದವರು ಉಪಸ್ಥಿತರಿದ್ದರು.

 ಕಾರ್ಯಕ್ರಮಕ್ಕೂ ಮೊದಲು ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.

ಚಿತ್ರ : ತಾಲೂಕಿನ ಬೇಡರವಾಡಿ ಯು. ಗ್ರಾಮದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

ಆಶಿತೋಷ ಮಹಾರಾಜ, ಅವಧೂತ ಪುರಿ ಮಹಾರಾಜ ಉಪಸ್ಥಿತರಿದ್ದರು.