ವಿಮೋಚನೆಗೆ ಮಹಾಗಾಂವ ಪಾಟೀಲರ ಕೊಡುಗೆ ಅಪಾರ -ಶಿಕ್ಷಕ ಅಂಬರಾಯ ಮಡ್ಡೆ
ವಿಮೋಚನೆಗೆ ಮಹಾಗಾಂವ ಪಾಟೀಲರ ಕೊಡುಗೆ ಅಪಾರ -ಶಿಕ್ಷಕ ಅಂಬರಾಯ ಮಡ್ಡೆ
ಕಮಲಾಪುರ: ದೇಶದ ಸ್ವತಂತ್ರವಾದರೂ ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಕಂಗೆಟ್ಟಿದ್ದ್ ಈ ಭಾಗದ ಜನರ ಸ್ವತಂತ್ರಗೆ ಹೋರಾಟದ ಮೂಲಕ ಕೊಡುಗೆ ನೀಡಿದ್ದು ಮಹಾಗಾಂವ್ ಗ್ರಾಮ ಎಂದು ಶಿಕ್ಷಕ ಶ್ರೀ ಅಂಬರಾಯ ಮಡ್ಡೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಮಹೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಾಗಾಂವ್ ಕ್ರಾಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದ ಮಹಾಗಾವ್ ನಲ್ಲಿ ಶ್ರೀ ಚಂದ್ರಶೇಖರ ಪಾಟೀಲ್, ಶ್ರೀ ಅಪ್ಪಾರಾವ್ ಪಾಟೀಲ್ ನೇತೃತ್ವದಲ್ಲಿ ನಡೆದ ಹೋರಾಟ ಬಹಳ ಸ್ಮರಣಿಯವಾದದ್ದು.
ರಜಕಾರರ್ ದಾಳಿಗೆ ಹೆದರದೆ ಅವರನ್ನು ಅತ್ಯಂತ ಧೈರ್ಯದಿಂದ್ ಎದರಿಸಿದ್ದು ಇವರ ಸಾಹಸಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರ ಧೈರ್ಯ, ಸಾಹಸ, ಇಂದಿನ ಪೀಳಿಗೆಯವರು ಸ್ಮರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದರು
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಸಿದ್ದಲಿಂಗ ಡಿಗ್ಗಾವ್, ಮುಖ್ಯ ಗುರುಗಳು ಶ್ರೀಮತಿ ಗಂಗೂಬಾಯಿ ಮಠದ, ಶಿಕ್ಷಕರಾದ ಸುನಂದಾ ಪಾಟೀಲ್, ಸರಸ್ವತಿ ಜಮಾದಾರ್, ಪಲ್ಲವಿ, ರೇಷ್ಮಾ, ಸುರೇಖಾ ಹೊನ್ನಾಳಿ ವಿಶಾಲ, ಪುಟ್ಟರಾಜ್ ಮುಂತಾದವರು ಉಪಸ್ಥಿತರಿದ್ದರು.ಈರಮ್ಮ ಸ್ವಾಗತಿಸಿದರು, ಸುಗಂಧ ರಟಕಲ ನಿರೂಪಿಸಿದರು, ಜ್ಯೋತಿ ವಂದಿಸಿದರು.