ವಾಡಿಯಲ್ಲಿ ಮಹಾವೀರ ಜಯಂತಿ ಆಚರಣೆ

ವಾಡಿಯಲ್ಲಿ ಮಹಾವೀರ ಜಯಂತಿ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಪ್ರಯುಕ್ತ, ಮಹಾವೀರ ರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಮಹಾವೀರ ರು ತಮ್ಮ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅಳವಡಿಸಿಕೊಂಡು ಇಡೀ ಸಮಾಜಕ್ಕೆ ಸತ್ಯ ಮತ್ತು ಅಹಿಂಸೆಯ ಬೆಳಕನ್ನು
ತೋರಿಸಿದ್ದಾರೆ. ಮನುಷ್ಯ ಶ್ರೇಷ್ಠನಾಗುವುದು ಹುಟ್ಟಿನಿಂದಲ್ಲ, ಧರ್ಮದಿಂದ ನಡೆದುಕೊಳ್ಳುವುದರಿಂದ ಎಂದರು.
ಭಗವಾನ್ ಮಹಾವೀರರು ಅಹಿಂಸೆ, ಸತ್ಯನಿಷ್ಠೆ, ತಾರತಮ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂಬ ಐದು ವ್ರತಗಳನ್ನು ಪಾಲಿಸುವಂತೆ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ. ಮಹಾವೀರ ಜಯಂತಿಯ ಸಂದರ್ಭದಲ್ಲಿ ಅವರ ಕೆಲವು ಅಮೂಲ್ಯ ಮಾತುಗಳನ್ನು ನಾವು ಪಾಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮಲ್ಲಿಕಾರ್ಜುನ ಸಾತಖೇಡ, ಪ್ರೇಮ ರಾಠೊಡ,ರಾಜು ರಾಠೊಡ,ಪ್ರಶಾಂತ ತೇಲ್ಕರ,ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಇತರರು ಇದ್ದರು.