ಯಡ್ರಾಮಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ ಜೈ ಕನ್ನಡಿಗರ ಸೇನೆಯ ಮನವಿ ಪತ್ರ

ಯಡ್ರಾಮಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ ಜೈ ಕನ್ನಡಿಗರ ಸೇನೆಯ ಮನವಿ ಪತ್ರ
ಯಡ್ರಾಮಿ: ಯಡ್ರಾಮಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಮನಗಂಡು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಜೈ ಕನ್ನಡಿಗರ ಸೇನೆಯ ಪದಾಧಿಕಾರಿಗಳು ಜೇವರ್ಗಿ ತಾಲೂಕ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಜೈ ಕನ್ನಡಿಗರ ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷ ಭರತ್ ಎಂ. ದೊರೆ ಅವರು ಮನವಿ ಪತ್ರವನ್ನು ನೀಡಿದರು. ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಸಾರ್ವಜನಿಕರ ಓಡಾಟ ಹೆಚ್ಚಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆಯಾಗಬೇಕೆಂಬುದು ಅವರ ಆಗ್ರಹ.
ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕ ಜೈ ಕನ್ನಡಿಗರ ಸೇನೆಯ ಗೌರವಾಧ್ಯಕ್ಷ ಬಸನಗೌಡ ಪಾಟೀಲ್, ಕಾರ್ಯದರ್ಶಿ ದೇವೇಂದ್ರ ಪೂಜಾರಿ, ಗೌರವ ಸಲಹೆಗಾರ ಗಂಗಾಧರ್ ಕರಕಿಹಳ್ಳಿ, ಪ್ರಧಾನ ಕಾರ್ಯದರ್ಶಿ ಲಾಳೆ ಮಶಾಕ್ ಹೊಸಮನಿ, ದೇವೇಂದ್ರ ಕಾಚಾಪುರ್, ರವಿ ಹೂಗಾರ್, ಆನಂದ್ ದೊಡ್ಮನಿ, ಮಲ್ಲಿಕಾರ್ಜುನ್ ದೊರೆ ಹಾಗೂ ನಾಗು ಯತ್ನಾಳ್ ಹಾಜರಿದ್ದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮನವಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.